Advertisement

ಕರೆಯಿತು ಕೆಪಿಎಸ್‌ಸಿ, ಸರ್ಕಾರಿ ಕೆಲ್ಸ ಹಿಡಿಯೋ ಸೀಕ್ರೆಟ್‌ ಗೊತ್ತಾ?

12:35 PM May 30, 2017 | Harsha Rao |

ಅವಕಾಶ, ಪ್ರಯತ್ನ, ದೃಢನಿರ್ಧಾರ ಇವೆಲ್ಲವೂ ಒಂದುಗೂಡಿದಾಗ ಮಾತ ಸರ್ಕಾರಿ ಕೆಲಸ ಸಿಗುತ್ತದೆ ಅನ್ನುವುದು ಸಾಧಕರ ಮಾತು. ಸರ್ಕಾರಿ ನೌಕರಿ ಅವಕಾಶಗಳು ಮತ್ತೆ ಮತ್ತೆ ಬರುವುದಿಲ್ಲ. ಅವುಗಳನ್ನು ಬಂದಾಗ ಸದುಪಯೋಗಪಡಿಸಿಕೊಳ್ಳಬೇಕು. ಅಂಥ ಅವಕಾಶವೊಂದು ಇಲ್ಲಿದೆ… 

Advertisement

ನಮ್ಮಲ್ಲಿ ಸರ್ಕಾರಿ ಕೆಲಸವೇ ಬೇಕೆಂದು ಪಟ್ಟು ಹಿಡಿದು, ಕಷ್ಟಪಟ್ಟು ಓದಿ, ಪರೀಕ್ಷೆ ಪಾಸು ಮಾಡಿ ಕಡೆಗೂ ಸಫ‌ಲರಾಗುವ ಮಂದಿಯಿದ್ದಾರೆ. ಅದೇ ರೀತಿ, ಸರ್ಕಾರಿ ಕೆಲಸ ಸಿಗುವುದು ತುಂಬಾ ಕಷ್ಟ, ಬೆರಳೆಣಿಕೆಯಷ್ಟು ಹುದ್ದೆಗಳಿಗೆ ಸಾವಿರಾರು ಅಭ್ಯರ್ಥಿಗಳು ಇರುತ್ತಾರೆ ಎಂದು ಕೈಚೆಲ್ಲುವ ಮಂದಿಯೂ ಇದ್ದಾರೆ. ಮನೆಗಳಲ್ಲಂತೂ ತಮ್ಮ ಮಗನಿಗೆ, ಮಗಳಿಗೆ ಸರ್ಕಾರಿ ಕೆಲಸ ಸಿಕ್ಕರೆ ಸಾಕು ಎಂದು ದೇವರುಗಳಿಗೆಲ್ಲಾ ಹರಕೆ ಹೊರುವ ಅಪ್ಪ- ಅಮ್ಮಂದಿರೆಷ್ಟೋ. ಕೆಲವರಿಗೆ ಅವಕಾಶವಿದ್ದರೂ ಪರೀಕ್ಷೆ ಬರೆಯಲು ಅಸಡ್ಡೆ, ಇನ್ನು ಕೆಲವರಿಗೆ ಸರಿಯಾದ ಸಮಯಕ್ಕೆ ಅವಕಾಶಗಳು ಒದಗುವುದಿಲ್ಲ.

ಅವಕಾಶ, ಪ್ರಯತ್ನ, ದೃಢನಿರ್ಧಾರ ಇವೆಲ್ಲವೂ ಒಂದುಗೂಡಿದಾಗ ಮಾತ ಸರ್ಕಾರಿ ಕೆಲಸ ಸಿಗುತ್ತದೆ ಅನ್ನುವುದು ಸಾಧಕರ ಮಾತು. ಸರ್ಕಾರಿ ನೌಕರಿ ಅವಕಾಶಗಳು ಮತ್ತೆ ಮತ್ತೆ ಬರುವುದಿಲ್ಲ. ಅವುಗಳನ್ನು ಬಂದಾಗ ಸದುಪಯೋಗಪಡಿಸಿಕೊಳ್ಳಬೇಕು. ಅಂಥ ಅವಕಾಶವೊಂದು ಇಲ್ಲಿದೆ. ಕರ್ನಾಟಕ ಲೋಕ ಸೇವಾ ಆಯೋಗ, ಕರ್ನಾಟಕ ಆಡಳಿತ ಸೇವೆ, ಪೊಲೀಸ್‌ ಸೇವೆ, ಸಾಮಾನ್ಯ ಸೇವೆ ಸೇರಿದಂತೆ ಒಟ್ಟು 402 ಹುದ್ದೆಗಳ ಭರ್ತಿಗೆ ಆಹ್ವಾನವಿತ್ತಿದೆ.

ಕೆಪಿಎಸ್‌ಸಿಯಲ್ಲಿ  402 ಹುದ್ದೆಗಳು 
ಕರ್ನಾಟಕ ಲೋಕಸೇವಾ ಆಯೋಗವು ಸಹಾಯಕ ಆಯುಕ್ತರು, ಆರಕ್ಷಕ ಉಪಾಧೀಕ್ಷಕರು, ಖಜಾನಾಧಿಕಾರಿ, ತಹಶೀಲ್ದಾರ್‌, ವಾಣಿಜ್ಯ ತೆರಿಗೆ ಅಧಿಕಾರಿ, ಅಬಕಾರಿ ಉಪಅಧೀಕ್ಷಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ಗ್ರೂಪ್‌ ಎ, (123) ಗ್ರೂಫ್ ಬಿ(208) ಸೇರಿ ಒಟ್ಟು 401 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅರ್ಹರಿಗೆ ಅವಕಾಶವೊಂದನ್ನು ನೀಡಿದೆ. ಅದರ ಮಾಹಿತಿ ಇಲ್ಲಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿಶ್ವವಿದ್ಯಾಲಯದ ಯಾವುದೇ ಪದವಿ- ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ: ಸಾಮಾನ್ಯರಿಗೆ 35, ಪ್ರವರ್ಗಕ್ಕೆ 38, ಪರಿಶಿಷ್ಟರಿಗೆ 40 ವಯೋಮಿತಿ ಸಡಿಲಿಕೆಯಿದೆ. ಗ್ರಾಮೀಣ ಅಭ್ಯರ್ಥಿಗಳಿಗೆ, ಕನ್ನಡ ಮಾಧ್ಯಮದವರಿಗೆ, ಮಾಜಿ ಸೈನಿಕರಿಗೆ, ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆ ಸಮಯದಲ್ಲಿ ಆಧಾರ್‌ ಸಂಖ್ಯೆ, ಇಮೇಲ್‌ ಮತ್ತು ಮೊಬೈಲ್‌ ಸಂಖ್ಯೆ, ಪದವಿಯ ಅಂಕಪಟ್ಟಿಗಳು, ಘಟಿಕೋತ್ಸವದ ಪ್ರಮಾಣ ಪತ್ರ, ಎಸ್ಸೆಸ್ಸೆಲ್ಸಿ – ತತ್ಸಮಾನ ಅಂಕಪಟ್ಟಿ ಕಡ್ಡಾಯ. ಮೀಸಲಾತಿ ಬಯಸುವವರು ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕಾಗುತ್ತದೆ.

Advertisement

ಇನ್ನು ಪರೀಕ್ಷಾ ಶುಲ್ಕ ಶುಲ್ಕ 300ರೂ, ಪರಿಶಿಷ್ಟರಿಗೆ 150 ರೂ. ಹಣವನ್ನು  ಕಡ್ಡಾಯವಾಗಿ ಅಂಚೆ ಕಚೇರಿಯ ಇ-ಪೇಮೆಂಟ್‌ ಮೂಲಕವೇ ಪಾವತಿ ಮಾಡಬೇಕು. ಬೇರೆ ಮಾರ್ಗವಿಲ್ಲ. ಅರ್ಜಿ ಸಲ್ಲಿಕೆಗೆ ಜೂನ್‌ 12 ಕೊನೆ ದಿನ. ಪೂರ್ವಭಾವಿ ಪರೀಕ್ಷೆ  ಆ.20 ಮತ್ತು ಮುಖ್ಯ ಪರೀಕ್ಷೆ ನವೆಂಬರ್‌ನಲ್ಲಿ ಜರುಗಲಿದೆ.

ಪರೀಕ್ಷಾ ವಿಧಾನ
ಪರೀಕ್ಷೆಯಲ್ಲಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಎಂಬೆರಡು ವಿಧಾನವಿದೆ, ಪೂರ್ವಭಾವಿ ಪರೀಕ್ಷೆಯನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವ ಸಲುವಾಗಿ ನಡೆಸುತ್ತಾರೆ. ಮುಖ್ಯ ಪರೀಕ್ಷೆಯನ್ನು ಹುದ್ದೆ ಆಯ್ಕೆಗೆ ನಡೆಸಲಾಗುವುದು. 
ಪೂರ್ವಭಾವಿ ಪರೀಕ್ಷೆಯಲ್ಲಿ  ಎರಡು ಪತ್ರಿಕೆಗಳಿದ್ದು, ಒಟ್ಟು 400 ಅಂಕಗಳನ್ನು ಒಳಗೊಂಡಿರುತ್ತದೆ. ಆರಕ್ಷಕ ಹುದ್ದೆಗೆ ದೇಹದಾಡ್ಯì ಪರೀಕ್ಷೆ ಪತ್ಯೇಕವಾಗಿರುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಮುಖ್ಯ ಪರೀಕ್ಷೆ ನಡೆಸಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ?
//kpscapps.com/gpe_2017
ಪರದೆ ಅಂಚಿನಲ್ಲಿ ಅರ್ಜಿ ಹಾಕಲು ನ್ಯೂ ರಿಜಿಸ್ಟರ್‌ಗೆ ಕ್ಲಿಕ್‌ ಮಾಡಿ, ಬಳಿಕ ಬರುವ ಪರದೆಯಲ್ಲಿ ನಿಮ್ಮ ಹೆಸರು, ತಂದೆ , ತಾಯಿ ಹೆಸರು, ಸಂಗಾತಿ ಹೆಸರು, ಜನ್ಮದಿನಾಂಕ, ಅಧಾರ್‌, ಮೊಬೈಲ್‌, ಇಮೇಲ್‌ ವಿಳಾಸವನ್ನು  ದೃಢೀಕರಿಸಿ ಒಪ್ಪಿಗೆ ನೀಡಬೇಕು. ನಂತರ ಕಂಪ್ಯೂಟರ್‌ ಕನ್ಫರ್‌ವೆುàಶನ್‌ ಕೇಳುತ್ತದೆ. (ಇಲ್ಲಿ ಏನಾದರೂ ಬದಲಾವಣೆ ಇದ್ದರೆ ಪರಿಶೀಲಿಸಬಹುದು). ನಂತರ ನಿಮಗೆ ರಿಜಿಸ್ಟ್ರೇಷನ್‌ ಐಡಿ ಮತ್ತು ಪಾಸ್‌ವರ್ಡ್‌ ದೊರೆಯುತ್ತದೆ. (ಈ ಐಡಿಯನ್ನು ನಿಮ್ಮ ಇ-ಮೇಲ್‌ಗ‌ೂ ಕಳುಹಿಸಲಾಗಿರುತ್ತದೆ). ಈ ರಿಜಿಸ್ಟ್ರೇಷನ್‌ ಮೂಲಕ ಪಿನ್‌ ಕೋಡ್‌ ಸಹಿತ ನಿಮ್ಮ ವಿಳಾಸವನ್ನು ಭರ್ತಿ ಮಾಡಿ, ನಂತರ ನಿಮ್ಮ ಭಾವಚಿತ್ರ, ಸಹಿಯನ್ನು ತುಂಬಬೇಕು. ನೀವು ಪಡೆದ ಅಂಕ, ವಿಶ್ವವಿದ್ಯಾಲಯ, ಪ್ರವರ್ಗ, ಯಾವ ಹುದ್ದೆ ಸಂಬಂಧಿಸಿದ ಮಾಹಿತಿ ತುಂಬಿ,ನಂತರ ಆಧಾರ್‌ ಕಾರ್ಡ್‌, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪದವಿಯ ಘಟಿಕೋತ್ಸವ ಪ್ರಮಾಣ ಪತ್ರದ ಛಾಯಾಪ್ರತಿಯನ್ನು ಅಪ್‌ಲೋಡ್‌ ಮಾಡಿ, ಅಂಚೆ ಕಚೇರಿ ಚಲನ್‌ ಡೌನ್‌ಲೋಡ್‌ ಮಾಡಿಕೊಳ್ಳಿ, ಅಂಚೆಕಚೇರಿಯಲ್ಲಿ ಹಣ ಪಾವತಿಸಿ, ಬಳಿಕ ಅವರು ನೀಡುವ ಕೋಡ್‌ ನಂಬರ್‌ ತುಂಬಿ, ಅಪ್ಲಿಕೇಶನ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಪರೀಕ್ಷೆಗೆ ಸಿದ್ದರಾಗಿ.

ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ಧಾರವಾಡ/ ಹುಬ್ಬಳ್ಳಿ, ಕಲಬುರಗಿ, ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ಮಂಗಳೂರು, ದಾವಣಗೆರೆ, ರಾಯಚೂರಿನಲ್ಲಿದೆ.
ಪಠ್ಯಕ್ರಮ ಸೇರಿದಂತೆ ಇತರ ಹೆಚ್ಚಿನ ಮಾಹಿತಿಗೆ kpsc.kar.nic.in ಜಾಲತಾಣಕ್ಕೆ ಭೇಟಿ ನೀಡಿ.

– ಅನಂತನಾಗ್‌ ಎನ್‌

Advertisement

Udayavani is now on Telegram. Click here to join our channel and stay updated with the latest news.

Next