Advertisement

ಕೆಪಿಎಲ್ ಫಿಕ್ಸಿಂಗ್ ನ ಓರ್ವ ಬುಕ್ಕಿಯ ಬಂಧನ; ಆತ ನೀಡಿದ್ದ ಆಫರ್ ಎಷ್ಟು ಗೊತ್ತಾ?

09:40 AM Nov 11, 2019 | keerthan |

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ನಡೆದ ಮೋಸದಾಟದ ಕರಾಳ ಮುಖಗಳು ಹೊರಬೀಳುತ್ತಿದ್ದು, ಪ್ರಕರಣಕ್ಕೆ ಸಂಬಂಧಿದಂತೆ ಬುಕ್ಕಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಹರ್ಯಾಣ ಮೂಲದ ಸಯ್ಯಂ ಬಂಧಿತ ಬುಕ್ಕಿ. ಈತನನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಸಯ್ಯಂನ ವಿರುದ್ಧ ಲುಕ್ ಔಟ್ ನೋಟೀಸ್ ಜಾರಿಯಾಗಿತ್ತು. ಈತ ದೆಹಲಿಗೆ ಬಂದಿಳಿದ ತಕ್ಷಣ ಬಂಧಿಸಲಾಗಿದೆ.

ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಫಿಕ್ಸಿಂಗ್ ನಡೆಸಿದ್ದ ಆರೋಪವೂ ಈ ಮೇಲಿದೆ. ಕೆಪಿಎಲ್ ನಲ್ಲಿ ಬೌಲರ್ ಗಳಿಗೆ ಈತ ಮೋಸದಾಟವಾಡಲು ಆಫರ್ ನೀಡಿದ್ದು, ಒಂದು ಓವರ್ ನಲ್ಲಿ ಹತ್ತಕ್ಕೂ ಹೆಚ್ಚು ರನ್ ನೀಡಿದರೆ , ಐದು ಲಕ್ಷ ರೂಪಾಯಿ ನೀಡುವ ಆಮೀಷವೊಡ್ಡಿದ್ದ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next