Advertisement

ಕೆಪಿಎಲ್‌ ಹರಾಜು: ಸೇಲಾಗದ ಪಾಂಡೆ, ಗೋಪಾಲ್‌, ಪ್ರಸಿದ್ದ ಕೃಷ್ಣ

09:17 AM Jul 28, 2019 | keerthan |

ಬೆಂಗಳೂರು: ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್‌ ಲೀಗ್‌ ನ ಹರಾಜು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದ್ದು, ಸ್ಟಾರ್‌ ಆಟಗಾರರಾದ ಮನೀಶ್‌ ಪಾಂಡೆ, ಪ್ರಸಿದ್ದ ಕೃಷ್ಣ, ಶ್ರೇಯಸ್‌ ಗೋಪಾಲ್‌ ರನ್ನು ಯಾವುದೇ ತಂಡ ಖರೀದಿ ಮಾಡಲು ಮುಂದಾಗಲಿಲ್ಲ. ಇದುವರೆಗಿನ ಹರಾಜಿನಲ್ಲಿ ಪವನ್‌ ದೇಶಪಾಂಡೆ 7.3 ಲಕ್ಷ ರೂ. ಗೆ ಹರಾಜಾಗಿ ದುಬಾರಿ ಆಟಗಾರನೆನಿಸಿಕೊಂಡರು.

Advertisement

ಒಟ್ಟು 8 ತಂಡಗಳು ಕೆಪಿಎಲ್‌ ನಲ್ಲಿ ಆಡಲಿದ್ದು, ಆಗಸ್ಟ್‌ 16ರಂದು ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯಲಿದೆ. ಹುಬ್ಬಳ್ಳಿಯಲ್ಲಿ ಎರಡನೇ ಚರಣ ನಡೆಯಲಿದ್ದು, ಅಂತಿಮ ಚರಣ ಮತ್ತು ನಾಕ ಔಟ್‌ ಪಂದ್ಯಗಳು ಮೈಸೂರಿನಲ್ಲಿ ನಡೆಯಲಿದೆ.

ಮನೀಶ್‌ ಪಾಂಡೆ ವಿಂಡೀಸ್ ಸರಣಿಗೆ ಆಯ್ಕೆಯಾಗಿರುವ ಕಾರಣ ಅವರನ್ನು ಖರೀದಿಸಲು ಯಾವ ತಂಡಗಳು ಮುಂದಾಗಲಿಲ್ಲ.

ಹರಾಜಾದ ಪ್ರಮುಖ ಆಟಗಾರರು

ಪವನ್‌ ದೇಶಪಾಂಡೆ – ಶಿವಮೊಗ್ಗ ಲಯನ್ಸ್-‌ 7.3 ಲ.

Advertisement

ಅನಿರುದ್ಧ ಜೋಶಿ- ಮೈಸೂರು ವಾರಿಯರ್ಸ್‌ – 7.1 ಲ.

ಜೊನಾಥನ್‌ ಆರ್.‌ – ಬೆಂಗಳೂರು ಬ್ಲಾಸ್ಟರ್ಸ್‌ – 6 ಲ.

ಮೊಹಮ್ಮದ್‌ ತಾಹ- ಹುಬ್ಬಳ್ಳಿ ಟೈಗರ್ಸ್‌ – 5.7 ಲ.

ಅಮಿತ್‌ ವರ್ಮ – ಮೈಸೂರು ವಾರಿಯರ್ಸ್‌ 5.2ಲ.

ಸಿಎ ಕಾರ್ತಿಕ್‌ – ಬಳ್ಳಾರಿ ಟಸ್ಕರ್ಸ್‌ – 4.7 ಲ.

ಶೋಯೇಬ್‌ ಮ್ಯಾನೇಜರ್-‌ ಮೈಸೂರು ವಾರಿಯರ್ಸ್‌ -4.6 ಲ

ಅಬ್ರಾರ್‌ ಕಾಜಿ- ಬೆಳ್ಳಾರಿ ಟಸ್ಕರ್ಸ್‌ – 4.6 ಲ

ಅಭಿನಲ್‌ ಮನೋಹರ್‌ – ಬೆಳಗಾವಿ ಪ್ಯಾಂಥರ್ಸ್-‌ 4.6 ಲ

ಸುನೀಲ್ ರಾಜು- ಬಿಜಾಪುರ್‌ ಬುಲ್ಸ್-‌ 4.1 ಲ

ಅರ್ಶದೀಪ್‌ ಸಿಂಗ್-‌ ಬೆಳಗಾವಿ ಪ್ಯಾಂಥರ್ಸ್-‌ 4 ಲ

ಭರತ್‌ ಧುರಿ- ಬೆಂಗಳೂರು ಬ್ಲಾಸ್ಟರ್ಸ್-‌ 3.8 ಲ

ನಾಗ ಭರತ್‌ – ಬೆಂಗಳೂರು ಬ್ಲಾಸ್ಟರ್ಸ್‌ – .35 ಲ

ಪವನ್‌ ಕೆಬಿ- ಹುಬ್ಬಳ್ಳಿ ಟೈಗರ್ಸ್‌ – 3.5 ಲ

Advertisement

Udayavani is now on Telegram. Click here to join our channel and stay updated with the latest news.

Next