Advertisement

ಆತ್ಮಹತ್ಯೆಗೆ ಶರಣಾದ ನೇಕಾರನ ಕುಟುಂಬಕ್ಕೆ ಡಿಕೆಶಿ ಸಾಂತ್ವಾನ

09:57 PM Jul 18, 2021 | Team Udayavani |

ಬನಹಟ್ಟಿ : ರಾಜ್ಯದಲ್ಲಿ ನೇಕಾರ ಸ್ಥಿತಿ ತೀವ್ರ ಚಿಂತಾಜನಕವಾಗಿದೆ. ನೇಕಾರರು ಕಳೆದೊಂದು ವರ್ಷದಲ್ಲಿ ೨೫ ಕ್ಕೂ ಅಧಿಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕುಟುಂಬಗಳಿಗೆ ಸರ್ಕಾರ ಸ್ವತಃ ಘೋಷಿಸಿರುವ ೫ ಲಕ್ಷ ರೂ. ಪರಿಹಾರವನ್ನು ಒದಗಿಸಲು ವಿಳಂಬನೀತಿ ಸರಿಯಲ್ಲ ತಕ್ಷಣವೇ ಪರಿಹಾರ ಒದಗಿಸಿ ಮೃತ ಕುಟುಂಬಕ್ಕೆ ನೆರವಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

Advertisement

ಬಾಗಲಕೊಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಾಮಪೂರದ ಆತ್ಮಹತ್ಯೆ ಮಾಡಿಕೊಂಡ ಷಣ್ಮುಖ ಮುರಗುಂಡಿ ಅವರ ಮನೆಗೆ ಭೆಟ್ಟಿ ನೀಡಿ ಸಾಂತ್ವನ ಹೇಳಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಕೊರೊನಾ ಸಂದರ್ಭದ ೨ ಸಾವಿರ ಸಹಾಯ ಧನ ಬಹುತೇಕ ನೇಕಾರ ಕುಟುಂಬಕ್ಕೆ ದೊರಕಿಲ್ಲ. ಪ್ರಮುಖವಾಗಿ ನೇಕಾರ ಆತ್ಮಹತ್ಯೆ ಮಾಡಿಕೊಳ್ಳದಂತೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಸರ್ಕಾರ ಮನವರಿಕೆ ಮಾಡಿಕೊಳ್ಳದಿರುವದು ವಿಪರ್ಯಾಸವೆಂದು ಬೇಸರ ವ್ಯಕ್ತಪಡಿಸಿದರು.

ನೇಕಾರರ ಸಮಸ್ಯೆಗಳನ್ನು ಆಲಿಸಿದ್ದಲ್ಲದೆ ಮೃತ ಕುಟುಂಬಗಳಿಗೆ ಶೀಘ್ರ ಪರಿಹಾರಕ್ಕೆ ವಿಧಾನಸೌಧದಲ್ಲಿ ವಿಪಕ್ಷ ಒತ್ತಡ ಹೇರುತ್ತದೆ. ಅಲ್ಲದೆ ಕೂಲಿ-ನೇಕಾರರ ಸ್ಥಿತಿ ಕುರಿತು ಸಮಗ್ರ ಅವಲೋಕಿಸಿದ್ದು, ಈಗ ದೊರಕುವ ದಿನದ ವೇತನ ಬಗ್ಗೆಯೂ ಸರ್ಕಾರ ಗಮನಸೆಳೆದು ನೇಕಾರರ ಬದುಕಿನ ಭದ್ರತೆಗೆ ಹೋರಾಡುತ್ತೇವೆಂದು ಡಿ.ಕೆ. ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next