Advertisement
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಉಪಕರಣ ಖರೀದಿಯಲ್ಲಿ ಕೋಟ್ಯಾಂತರ ರೂ. ಹಗರಣ ನಡೆದಿದೆ. ಸರ್ಕಾರದಲ್ಲಿ ಇನ್ನೂರು, ಮುನ್ನೂರು ಪರ್ಸೆಂಟ್ ನಡೆಯುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಖರೀದಿಸಿದ ಉಪಕರಣಗಳ ಬೆಲೆ ಮತ್ತು ರಾಜ್ಯ ಸರ್ಕಾರ ಖರೀಸಿದ ಉಪಕರಣಗಳ ಬೆಲೆಯೇ ಸಾಕ್ಷಿ. ಇದಕ್ಕಿಂತ ಬೇರೆ ಸಾಕ್ಷಿ ಬೇಕಾ ನಿಮಗೆ ಎಂದು ಟೀಕಾ ಪ್ರಹಾರ ಮಾಡಿದರು.
Related Articles
Advertisement
ಸರ್ಕಾರ ಹೇಳಿದಂತೆ ನಾವೂ ಸಹಕಾರ ನೀಡಿದೇವು. ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದೇವು. ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಸೇರಿ ಕೊವೀಡ್ ನಿರ್ವಹಣೆಗೆ ಸಲಹೆ ನೀಡಿದ್ದೇವೆ. ದೇಶದಲ್ಲೇ ರಾಜ್ಯದಲ್ಲಿ ಉತ್ತಮ ಮೆಡಿಕಲ್ ಕಾಲೇಜ್ ಗಳು, ಆಸ್ಪತ್ರೆಗಳಿವೆ. ಅವರನೆಲ್ಲ ಕರೆದು ಮಾತನಾಡಿ ಎಂದು ಸಲಹೆ ಕೊಟ್ಟೇವು. ಆದರೂ, ನೀವು ಮಾತನಾಡಲಿಲ್ಲ. ಅವರೆಲ್ಲ ಬಂದರೆ ಸಚಿವರು ತಮಗೆ ಸಿಗಬಹುದಾದದ್ದು ಸಿಗಲ್ಲ ಅಂತಾ ಭಾವಿಸಿದರು ಎಂದು ದೂರಿದರು.
ರಾಜ್ಯದ ಜನತೆ ಸೋಂಕು ಅಂಟಿಸಿದ್ದೇ ಸರ್ಕಾರ. ಆದರೆ, ಯಾವ ಸಚಿವರು ಸೋಂಕಿತರನ್ನೂ ಭೇಟಿ ಮಾಡಲಿಲ್ಲ. ಯಾಕೆ ನೀವು ಹೋಗಿ ಅವರನ್ನು ಭೇಟಿ ಮಾಡಿ ಧೈರ್ಯ ಹೇಳಿದರೆ ನಿಮಗೆ ಸೋಂಕು ತಗುಲುತ್ತಾ? ಸೋಂಕಿತರು ತೀರಿದಾಗ ಅವಮಾನಕರವಾಗಿ ಹೂಳಲಾಯಿತು. ನಿಮ್ಮ ತಂದೆ-ತಾಯಿ ಅಥವಾ ನಿಮ್ಮ ಸಂಬಂಧಿಕರಾಗಿದರೆ ಹೀಗೆ ಮಾಡ್ತಾ ಇದ್ರಾ? ಮೂವತ್ತಕ್ಕು ಅಧಿಕ ಪೌರ ಕಾರ್ಮಿಕರು ಸೋಂಕಿನಿಂದ ಮೃತಪಟ್ಟಿದ್ದಾರೆ. ಆ ನಿರ್ಗತಿಕರಿಗೆ ಯಾರು ದಿಕ್ಕು ಎಂದು ಡಿಕೆಶಿ ಹರಿಹಾಯ್ದರು.
ಇದನ್ನೂ ಓದಿ; ಲಾಕ್ ಡೌನ್ ವಾಪಸ್ ಪಡೆಯುವ ಅವಶ್ಯಕತೆ ಇರಲಿಲ್ಲ: ರಾಮಲಿಂಗ ರೆಡ್ಡಿ
ಸರ್ಕಾರಕ್ಕೆ ಭ್ರಷ್ಟಾಚಾರದ ಸೋಂಕು ಅಂಟಿದೆ. ಇದನ್ನೆಲ್ಲ ಪ್ರಶ್ನೆ ಮಾಡಿದರೆ ನನಗೆ, ಸಿದ್ದರಾಮಯ್ಯನವರಿಗೆ ನೋಟಿಸ್ ಕೊಡುತ್ತೀರಾ? ಎಂಥಾ ನೋಟಿಸ್’ಗಳಿಗೆ ನಾವು ಹೆದರಿಲ್ಲ. ನಿಮ್ಮ ನೋಟಿಸ್ ಗೆ ಹೆದರುತ್ತೀವಾ? ನಿಮ್ಮ ನೂರು ನೋಟಿಸ್ ಎದುರಿಸುವ ತಾಕತ್ತು ಜನ ನಮಗೆ ನೀಡಿದ್ದಾರೆ. ನೋಟಿಸ್ ಕೊಟ್ಟು ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು 24 ಗಂಟೆಗಳಲ್ಲಿ ದಾಖಲೆ ಕೊಡುವುದಾಗಿ ಹೇಳಿದ್ದರು. ಇಷ್ಟು ದಿನವಾದರೂ ಎಲ್ಲಿದೆ ದಾಖಲೆ? ಹಗರಣದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಪಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ.ಅಜಯ್ ಸಿಂಗ್, ಖನೀಜ್ ಫಾತೀಮಾ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಉಪಸ್ಥಿತರಿದ್ದರು.