Advertisement

ಲೋಕಸಭೆ ಚುನಾವಣೆಗೆ ಸನ್ನದ್ಧರಾಗಿ

06:00 AM Jul 12, 2018 | Team Udayavani |

ಬೆಂಗಳೂರು: ಕೆಪಿಸಿಸಿ ನೂತನ ಸಾರಥಿ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಮೂಲಕ ಕಾಂಗ್ರೆಸ್‌ ನಾಯಕರು ಬುಧವಾರ ಒಗ್ಗಟ್ಟು ಪ್ರದರ್ಶನ ಮಾಡಿದರು.

Advertisement

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ಕೆಲವು ಅತೃಪ್ತ ನಾಯಕರನ್ನು ಹೊರತು ಪಡಿಸಿ ಬಹುತೇಕ ನಾಯಕರು ಭಾಗವಹಿಸಿ ಪಕ್ಷದ ಒಗ್ಗಟ್ಟು ಪ್ರದರ್ಶಿಸಿದರು. ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದಿರುವ ಬಗ್ಗೆಯೂ
ನಾಯಕರು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂಸಿದ್ದರಾಮಯ್ಯ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಬಿಜೆಪಿಯ ಅಪಪ್ರಚಾರ ಕಾರಣ. ಬಿಜೆಪಿಯವರು ಹಿಂದುತ್ವದ ಅಪಪ್ರಚಾರ ಮಾಡಿದರು. ಅವರ ಸುಳ್ಳು ಪ್ರಚಾರವನ್ನು ಹತ್ತಿಕ್ಕಲು ನಾವು ವಿಫ‌ಲವಾದೆವು ಎಂದು ಹೇಳಿದರು.ಹಿಂದಿನ ಸರ್ಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. 

ಅನ್ನಭಾಗ್ಯ ಅಕ್ಕಿಯನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಿರುವುದು ಹಾಗೂ ಪೆಟ್ರೊಲ್‌ ಮತ್ತು ಡೀಸೆಲ್‌ ಮೇಲೆ ಹಾಕಿರುವ ತೆರಿಗೆ ವಾಪಸ್‌ ಪಡೆಯುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.ವರಿಷ್ಠರು ಉತ್ತಮ ಅವಕಾಶ ನೀಡಿದ್ದಾರೆ. ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳುತ್ತೇವೆ. ಪಕ್ಷವನ್ನು ಬಲಿಷ್ಠಗೊಳಿಸಿ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುತ್ತೇವೆ. ದೇಶದಲ್ಲಿ ಮತ್ತೆ ಕಾಂಗ್ರೆಸ್‌ ಗತವೈಭವ ನಿರ್ಮಾಣವಾಗುತ್ತದೆ.
– ಈಶ್ವರ್‌ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಅತ್ಯಂತ ಸಂತೋಷದಿಂದ ಅಧಿಕಾರ ಹಸ್ತಾಂತರ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಸಾಕಷ್ಟು ಚುನಾವಣೆಗಳು ನಡೆದಿವೆ. ಎಂಟು ವರ್ಷದಲ್ಲಿ ಪಕ್ಷದ ಲಕ್ಷಾಂತರ ಕಾರ್ಯಕರ್ತರು, ಪಕ್ಷದ ಎಲ್ಲ ನಾಯಕರು ಸಹಕಾರ ಕೊಟ್ಟಿದ್ದಾರೆ.
– ಡಾ. ಜಿ ಪರಮೇಶ್ವರ್‌, ಉಪ ಮುಖ್ಯಮಂತ್ರಿ

Advertisement

ಲೋಕಸಭೆ ಚುನಾವಣೆಗೆ ಪಕ್ಷ ಬಲಗೊಳಿಸ ಬೇಕಿದೆ. ಕಳೆದ 4 ವರ್ಷದಲ್ಲಿ ಕೇಂದ್ರ ಸರ್ಕಾರ ಯಾವುದೇ ಯೋಜನೆಯನ್ನು ಜಾರಿಗೊಳಿಸದೇ ಜನರನ್ನು ದಾರಿ ತಪ್ಪಿಸಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬಾರದು.
– ಕೆ.ಸಿ.ವೇಣುಗೋಪಾಲ್‌,
ಕಾಂಗ್ರೆಸ್‌ ರಾಜ್ಯ ಉಸ್ತುವಾರಿ

ನಮ್ಮಲ್ಲಿ ಸಾಕಷ್ಟು ಗೊಂದಲಗಳಿವೆ. ಸಣ್ಣಪುಟ್ಟ ಸಮಸ್ಯೆ ಬಗೆಹರಿಸಿಕೊಂಡು ಐಕ್ಯತೆ ಪ್ರದರ್ಶಿಸಬೇಕಿದೆ. ಹಿರಿಯರಿಗೆ ಅವಕಾಶ ಸಿಕ್ಕಿಲ್ಲ. ಅದು ನಮಗೂ ಗೊತ್ತಿದೆ. ಹಿಂದಿನ ಧರ್ಮಸಿಂಗ್‌ ಸರ್ಕಾರದಲ್ಲಿ ನನ್ನ ಮತ್ತು ಪರಮೇಶ್ವರ್‌ ಅವರನ್ನು ದೂರ ಇಟ್ಟಿದ್ದರು. ಹೀಗಾಗಿ ಯಾರೂ ತಪ್ಪು ತಿಳಿಯುವುದು ಬೇಡ.
– ಡಿ.ಕೆ. ಶಿವಕುಮಾರ್‌, ಸಚಿವ

ದಿನೇಶ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಹೀಗಾಗಿ ಪಕ್ಷ ಅವನನ್ನು ಗುರುತಿಸಿ ಜವಾಬ್ದಾರಿ ನೀಡಿದೆ. ಪ್ರತಿಯೊಬ್ಬರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಅದರಲ್ಲಿ ಯಶಸ್ವಿಯಾ ಗುತ್ತಾನೆ. ಮುಖ್ಯಮಂತ್ರಿ ಆಗುತ್ತಾನೆ ಎಂದು ನಾನು ಹೇಳಲು ಆಗುವುದಿಲ್ಲ. ಜನರು ಆಶೀರ್ವಾದ
ಮಾಡಿದರೆ ಮುಖ್ಯಮಂತ್ರಿಯಾಗಬಹುದು.
– ವರಲಕ್ಷ್ಮೀ ಗುಂಡೂರಾವ್‌,
ದಿನೇಶ್‌ ಗುಂಡೂರಾವ್‌ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next