Advertisement
ಕೋವಿಡ್ ಸೋಂಕಿನ ಈ ಗುಣಲಕ್ಷಣಗಳನ್ನು ಗುರುತಿಸಲು ಲ್ಯಾಬೊರೇಟರಿಯಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೇ ಅದರ ರೂಪಾಂತರವನ್ನು ಗುರುತಿಸಲಾಗಿದೆ. ಯುರೋಪ್ ಮತ್ತು ಅಮೆರಿಕದಲ್ಲಿ ಹಬ್ಬಿದ ವೈರಸ್‌ಗಳು ರೂಪಾಂತರಗೊಂಡವು ಮತ್ತು ಮಾನವನ ಜೀವಕೋಶಗಳ ಮೇಲೆ ಪರಿಣಾಮ ಬೀರುವಂತಹವುಗಳು ಎಂದು ಸಂಶೋಧಕರು ಹೇಳಿದ್ದಾರೆ. ಇಷ್ಟೊಂದು ಬಗೆಯಲ್ಲಿ ರೂಪಾಂತರಗೊಳ್ಳುವುದೇ ಆಗಿದ್ದರೆ, ಖಂಡಿತವಾಗಿ ಆ ವೈರಸ್ ಹೆಚ್ಚು ಸಾಂಕ್ರಾಮಿಕವಾಗುತ್ತದೆ. ನಮ್ಮ ಜೀವಕೋಶ ವ್ಯವಸ್ಥೆಯಲ್ಲೇ ಇದು ನಡೆಯುವುದರಿದ ಹಾನಿಕಾರಕವೂ ಆಗಿದೆ ಎಂದು ಸ್ಕ್ರಿಪ್ಸ್ ರಿಸರ್ಚ್‌ನ ವೈರಾಲಜಿಸ್ಟ್ ಡಾ| ಹೆಯ್ರುನ್ ಚಾವೋ ಅವರು ಹೇಳಿದ್ದಾರೆ. ಕೋವಿಡ್ ಸೋಂಕು ಹಬ್ಬಿದ ಬಳಿಕ ಕೆಲವು ದೇಶಗಳಲ್ಲಿ ತೀವ್ರವಾಗಿ ಹರಡತೊಡಗಿದ್ದರೆ, ಇನ್ನು ಕೆಲವು ದೇಶದಲ್ಲಿ ಅದರ ಪರಿಣಾಮ ಸಾಮಾನ್ಯವಾಗಿತ್ತು. ವೈರಸ್‌ನಲ್ಲಿ ಇಂತಹ ವ್ಯತ್ಯಾಸಕ್ಕೆ ಕಾರಣವೇನೆಂದು ಶೋಧಿಸಿದಾಗ ಅದು ರೂಪಾಂತರವಾಗುವುದು ಪತ್ತೆಯಾಗಿದೆ. ಸಂಶೋಧನ ವರದಿಯ ಪ್ರಕಾರ, ರೂಪಾಂತರಗೊಂಡ ವೈರಸ್, ಸ್ವಲ್ಪ ಬದಲಾವಣೆಗೊಳಗಾಗುತ್ತವೆ.
Advertisement
ಕೋವಿಡ್ -19 ವೈರಸ್ : ರೂಪಾಂತರವಾಗಿ ಇನ್ನಷ್ಟು ಸಾಂಕ್ರಾಮಿಕ
04:16 PM Jun 15, 2020 | mahesh |
Advertisement
Udayavani is now on Telegram. Click here to join our channel and stay updated with the latest news.