Advertisement

ಕೊವ್ಯಾಕ್ಸಿನ್‌, ಕೋವಿಶೀಲ್ಡ್ ಎರಡೂ ಒಳ್ಳೆಯದೆ

06:06 PM May 13, 2021 | Team Udayavani |

ಚಿಂತಾಮಣಿ: ಕೊವ್ಯಾಕ್ಸಿನ್‌ ಪಡೆಯಲು ಬೆಂಗಳೂರು ನಗರದ ಜನರು, ಪಕ್ಕದ ಜಿಲ್ಲೆ ಗಳಿಗೆ ಹೋಗದೇ, ತಮ್ಮ ನಿವಾಸದ ಸಮೀಪದ ಆರೋಗ್ಯ ಕೇಂದ್ರದಲ್ಲಿ ಪಡೆಯು ವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್‌ ಮನವಿ ಮಾಡಿದರು.

Advertisement

ನಗರದ ಸರ್ಕಾರಿ ಆಸ್ಪತ್ರೆಯಲ್ಲಿನ ಕೋವಿಡ್‌ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸಿ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಬೆಂಗಳೂ ರಿನ ನಾಗರಿಕರು ಲಸಿಕೆ ಪಡೆಯಲು ಚಿಕ್ಕಬ ಳ್ಳಾಪುರ, ಗೌರಿಬಿದನೂರು, ಗುಡಿಬಂಡೆ, ಚಿಂತಾಮಣಿ, ರಾಮನಗರ, ಮೈಸೂರು ಕಡೆಗೆ ಹೋಗುತ್ತಿದ್ದಾರೆ. ಲಸಿಕೆಗಾಗಿ ಆನ್‌ ಲೈನ್‌ನಲ್ಲಿ ಅವರು ಯಾವ ಆಸ್ಪತ್ರೆ ಬೇಕಾದ್ರೂ ಆಯ್ಕೆ ಮಾಡಬಹುದು. ಇವರನ್ನು ತಡೆ ಯಲು ನಮಗೆ ಅವಕಾಶವಿಲ್ಲ ಎಂದು ಹೇಳಿದರು.

ಸ್ಥಳೀಯವಾಗಿಯೇ ವ್ಯಾಕ್ಸಿನ್‌ ಪಡೆಯರಿ: ಹೀಗಾಗಿ ಬೆಂಗಳೂರಿಗರಲ್ಲಿ ಮನವಿ ಮಾಡುತ್ತಿದ್ದು, ಪಕದ ‌R ಜಿಲ್ಲೆಗಳಿಗೆ ಹೋಗದೇ, ತಾವು ವಾಸಿಸುವ ಪ್ರದೇಶದ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್‌ ಪಡೆಯಬೇಕು. ಇದರಿಂದ ಸ್ಥಳೀಯರಿಗೆ ವ್ಯಾಕ್ಸಿನ್‌ ಕೊರತೆ ಮತ್ತು ಸೋಂಕು ಹರಡುವ ಆತಂಕ ಇರುವುದಿಲ್ಲ ಎಂದು ತಿಳಿಸಿದರು.

ತಪ್ಪು ಕಲ್ಪನೆ ಬೇಡ: ಇನ್ನು ಕೊವ್ಯಾಕ್ಸಿನ್‌, ಕೋವಿಶೀಲ್ಡ್‌ ಲಸಿಕೆಗಳ ಬಗ್ಗೆ ಜನರಿಗೆ ಸಂದೇಹ ಇದೆ. ಹಲವರು ಕೊವ್ಯಾಕ್ಸಿನನ್ನೇ ಹೆಚ್ಚು ಪಡೆಯುತ್ತಿರುವುದರಿಂದ ಕೊರತೆ ಎದು ರಾ ಗುತ್ತಿದೆ. ಆದರೆ, ಈ ಎರಡು ಲಸಿಕೆಯೂ ಗುಣಮಟ್ಟದಿಂದ ಕೂಡಿವೆ. ಯಾವುದು ಪಡೆದರೂ ಸಮಸ್ಯೆ ಆಗುವುದಿಲ್ಲ. ಆದ್ದರಿಂದ ಸಮಯಕ್ಕೆ ಯಾವುದು ದೊರೆತ್ತದೆಯೋ ಅದು ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ವಿನಂತಿಕೊಂಡರು.

ಮೊದಲನೇ ಡೋಸ್‌ ಯಾವುದು ಪಡೆಯುತ್ತಿರೋ, 2ನೇ ಡೋಸ್‌ ಅದೇ ಪಡೆಯಿರಿ, ಮೊದಲು ಒಂದು ನಂತರ ಬೇರೆ ಡೋಸ್‌ ಪಡೆದರೆ ಆರೋಗ್ಯದಲ್ಲಿ ಏರುಪೇರಾ ಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು.

Advertisement

ಆಕ್ಸಿಜನ್‌ ಕೊರತೆ ನೀಗಿಸಲು ಯತ್ನ: ತಾಲೂಕಿನಲ್ಲಿ 800 ಸಕ್ರಿಯ ಪ್ರಕರಣಗಳಿದ್ದು, ಬೂತ್‌ ಮಟ್ಟದಿಂದ ಹೋಂಕ್ವಾರಂಟೈನ್‌ ಇರುವವರ ಬಗ್ಗೆ ಎಚ್ಚರ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ಆಡಳಿತ ಯಂತ್ರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆಕ್ಸಿಜನ್‌ ಕೊರತೆ ನೀಗಿಸುವ ಸಲುವಾಗಿ ವೈಯಕ್ತಿಕವಾಗಿ ಪ್ರಯತ್ನ ಪಡುತ್ತಿದ್ದೇನೆ ಎಂದು ಹೇಳಿದರು.

ಶೀಘ್ರ ಬೇಡಿಕೆ ಈಡೇರಿಕೆ: ಇನ್ನು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ಇದ್ದು, ಈಗಿರುವ ವೈದ್ಯರಲ್ಲಿ ಕೆಲವರಿಗೆ ಪಾಸಿಟಿವ್‌ ಬಂದಿದೆ. ಇದರಿಂದ ಸಮಸ್ಯೆ ಆಗಿದೆ. ತುರ್ತಾಗಿ ನೇರ ನೇಮಕಾತಿಯಿಂದ ರಾಜ್ಯಾದ್ಯಂತ ಸಿಬ್ಬಂದಿ ನೇಮಕ ಮಾಡುತ್ತಿದ್ದು, ತಾಲೂಕಿಗೂ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದ ಅವರು, ಆಸ್ಪತ್ರೆಗೆ ವೆಂಟಿಲೇಟರ್‌, ಸಿಲಿಂಡರ್‌, ಆ್ಯಂಬುಲೆನ್ಸ್‌ ಬೇಕಾಗಿದೆ ಎಂದು ಅಧಿಕಾರಿಗಳು ಕೋರಿದ್ದು, ಶೀಘ್ರದಲ್ಲೇ ಅವರ ಬೇಡಿಕೆ ಈಡೇರಿಸಲಾಗುವುದು ಎಂದು ವಿವರಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ತಹಶೀಲ್ದಾರ್‌ ಹನುಮಂತರಾಯ±, ‌³ ಇಒ ಮಂಜುನಾಥ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next