Advertisement

ಬಾಡಿಗೆ ಕಟ್ಟಡಕ್ಕೆ ಕೊಟ್ಟೂರು ಪೊಲೀಸ್‌ ಠಾಣೆ ಸ್ಥಳಾಂತರ

10:41 AM May 04, 2019 | Naveen |

ಕೊಟ್ಟೂರು: ಸ್ವಾತಂತ್ರ್ಯ ಪೂರ್ವದಿಂದ 118 ಸುದೀರ್ಘ‌ ವರ್ಷಗಳಿಂದ ಪಟ್ಟಣ ಸೇರಿದಂತೆ 48 ಗ್ರಾಮಗಳ ಜನತೆ ರಕ್ಷಣೆ ಮತ್ತು ಸುರಕ್ಷತೆ ಕಾಪಾಡುತ್ತಾ ಬಂದಿದ್ದ ಪಟ್ಟಣದ ಕೋಟೆ ಪ್ರದೇಶದಲ್ಲಿದ್ದ ಪೊಲೀಸ್‌ ಠಾಣೆಯನ್ನು ಒಮ್ಮೆಲೆ ಪಟ್ಟಣದ ರೇಣುಕಾ ಬಡಾವಣೆಯಲ್ಲಿನ ಖಾಸಗಿ ಒಡೆತನದ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ.

Advertisement

ಕೊಟ್ಟೂರೇಶ್ವರ ಸ್ವಾಮಿಯ ಮೂರು ಪ್ರಮುಖ ಮಠಗಳು ಕೋಟೆ ಭಾಗದಲ್ಲಿವೆ. ಕೋಟೆ ಭಾಗ 100 ವರ್ಷಗಳ ಹಿಂದೆ ಪಟ್ಟಣದ ಮಧ್ಯ ಕೇಂದ್ರವು ಆಗಿದ್ದರಿಂದ ಆಗಿನ ಬ್ರಿಟಿಷ್‌ ಸರ್ಕಾರದ ಆಡಳಿತಾವಧಿಯಲ್ಲಿ ಪಟ್ಟಣದ ಕೋಟೆಯ ಭಾಗದಲ್ಲಿಯೇ ಪೊಲೀಸ್‌ ಠಾಣೆ ತೆರೆದು ಜನತೆಗೆ ಸೇವೆ ಒದಗಿಸಿ ಕೊಟ್ಟಿತ್ತು. ಇದರಂತೆ ಅಂಚೆ ಕಚೇರಿ, ಪಪಂ ಮತ್ತಿತರರ ಶಾಲೆಗಳು ಇದ್ದವು. ಬ್ರಿಟಿಷರ ಆಡಳಿತಾವಧಿಯಲ್ಲಿ ಇರುವ ಮಳಿಗೆಗಳು ಈಗಲೂ ಇವೆ. ಪಟ್ಟಣದ ಬೆಳವಣಿಗೆ ಇತ್ತೀಚಿನ ವರ್ಷಗಳಲ್ಲಿ ಬಹು ವಿಸ್ತಾರಗೊಂಡಿದ್ದು. ಕೋಟೆ ಭಾಗಕ್ಕೆ ಇದ್ದ ಕೇಂದ್ರ ಸ್ಥಾನ ಬೇರೆ ಪ್ರದೇಶಕ್ಕೆ ದಕ್ಕುವಂತಾಗಿದೆ. ಈ ಕಾರಣಕ್ಕಾಗಿ ಕೋಟೆ ಭಾಗದಲ್ಲಿದ್ದ ಪೊಲೀಸ್‌ ಠಾಣೆಯನ್ನು ಸರಿಪಡಿಸಿ ಪುನಃ ಅದೇ ಸ್ಥಾನಕ್ಕೆ ಬರುವಂತೆ ಕೋಟೆಯ ಭಾಗದ ಜನರು ಅಪೇಕ್ಷಿಸುತ್ತಿದ್ದಾರೆ. ಸ್ಥಳಾಂತರಿಸಲು ಅಧಿಕಾರಿಗಳು ನಿರ್ಧರಿಸಿ ಕಾರ್ಯರೂಪಕ್ಕೆ ಮುಂದಾಗಬೇಕಾಗಿದೆ.

ಕೋಟೆಯಲ್ಲಿದ್ದ ಠಾಣೆ ಕಳ ಕೋಟೆ ಬಿಟ್ಟು ಪೇಟೆಗೆ ಹೋದ ನಂತರ ನೋಡಲು ಬಾರದಂತಾಗಿದೆ. ಪುನಃ ಠಾಣೆಯನ್ನು ಕೋಟೆಯಲ್ಲಿ ಸ್ಥಾಪಿಸಿ ಮರುಕಳೆ ತುಂಬಿಕೊಳ್ಳುವಂತೆ ಮಾಡಬೇಕಾಗಿದೆ. ಕೊಟ್ಟೂರು ಠಾಣೆಯಲ್ಲಿ 51 ಪೊಲೀಸ್‌ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಮತ್ತೂಷ್ಟು ಬಗೆಯ ಸೌಲಭ್ಯಗಳನ್ನು ಪುನಃ ಕೋಟೆಯ ಭಾಗದಲ್ಲಿ ಬರುವಂತೆ ನಿರ್ಮಿಸಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.

ಕೋಟೆಯಲ್ಲಿನ ಪೊಲೀಸ್‌ ಠಾಣೆ ಕಟ್ಟಡ ಚಿಕ್ಕದಿದ್ದು, ವಿವಿಧ ವಿಭಾಗಗಳನ್ನು ನಿರ್ಮಿಸಿಕೊಳ್ಳಲು ಬೇಕಾದಷ್ಟು ಸ್ಥಳ ಇದೆ. ಆದರೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ವಿಶಾಲ ಪ್ರದೇಶದ ನಿವೇಶನ ನೂತನ ಪೊಲೀಸ್‌ ಠಾಣೆ ನಿರ್ಮಾಣಕ್ಕೆ ಮುಂಜೂರಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಬೇಕಿದೆ. ಹೀಗಾಗಿ ಹಳೆಯ ಸ್ಥಳದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಿಸುವ ಗೋಜಿಗೆ ಹೋಗದೇ ಹೊಸ ಕಟ್ಟಡದಲ್ಲಿ ಎಲ್ಲಾ ಬಗೆಯ ವಿಭಾಗಗಳನ್ನು ನಿರ್ಮಿಸಿಕೊಳ್ಳಬಹುದು ಎಂಬುದು ಪೊಲೀಸ್‌ ಅಧಿಕಾರಿಗಳ ಅಭಿಪ್ರಾಯ. ಹೊಸ ನಿವೇಶನದಲ್ಲಿ ಠಾಣೆ ಕಟ್ಟಡ, ಸರ್ಕಲ್ ಇನ್ಸ್‌ಪೆಕ್ಟರ್‌ ಕಚೇರಿ ಕಟ್ಟಡ ಮತ್ತು ಪರೇಡ್‌ ಮಾಡಲು ಅಗತ್ಯವಾಗಿ ಬೇಕಿರುವ ವಿಶಾಲ ಮೈದಾನ ನಿರ್ಮಿಸಲು ಬಹಳಷ್ಟು ಅವಕಾಶವಿದೆ. ಈಗ ಸ್ವಂತ ಕಟ್ಟಡವಿಲ್ಲದ್ದರಿಂದ ಜಾಗವಿದ್ದರೂ ಬಾಡಿಗೆ ಕಟ್ಟಡದಲ್ಲಿ ಠಾಣೆ ನಡೆಯುತ್ತಿದೆ.

ಪೊಲೀಸ್‌ ಠಾಣೆಯನ್ನು ಸರ್ಕಾರಿ ಆಸ್ಪತ್ರೆ ಬಳಿ ಇರುವ ಕಟ್ಟಡಕ್ಕೆ ಸ್ಥಳಾಂತರಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಅನುಮತಿ ನೀಡಿ
ಆದೇಶ ಹೊರಡಿಸಿದ್ದಾರೆ. ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿರುವುದರಿಂದ ಕೆಲಸ ನಿರ್ವಹಿಸಲು ಅನಾನುಕೂಲವಿರುವುದರಿಂದಾಗಿ ಸ್ಥಳಾಂತರಗೊಂಡಿದೆ.
. ತಿಮ್ಮಣ್ಣ ಚಾಮಾನೂರು,
ಸಬ್ಸ್ ಇನ್ಸ್‌ಪೆಕ್ಟರ್

Advertisement

ಕೋಟೆ ಭಾಗದಲ್ಲಿ ಪೊಲೀಸ್‌ ಠಾಣೆ ಇದುವರೆಗೆ ಕಾರ್ಯ ನಿರ್ವಹಿಸುತ್ತಿತ್ತು. ಅದರೊಂದಿಗೆ ಈ ಪ್ರದೇಶದ ಜನ ಭಾವನ್ಮಾತಕ ಸಂಬಂಧ ಇರಿಸಿಕೊಂಡಿದ್ದರು. ಈಗಲೂ ಎಷ್ಟೋ ಜನ ಕೋಟೆ ಭಾಗಕ್ಕೆ ಪೊಲೀಸ್‌ ಠಾಣೆ ಇದೆ ಎಂದು ಇಲ್ಲಿಗೆ ಈಗಲೂ ಬರುತ್ತಾರೆ. ಈ ಠಾಣೆ ನಮ್ಮ ಭಾಗಕ್ಕೆ ಸುಭದ್ರ ಕೋಟೆಯಂತಿತ್ತು. ಆದರೆ ಈಗ ಅದು ನೆನಪು ಮಾತ್ರ. ಶಿಥಿಲಗೊಂಡಿರುವ ಕಟ್ಟಡ ಸರಿಪಡಿಸಿ ಮತ್ತೆ ಪೊಲೀಸ್‌ ಠಾಣೆ ಕೋಟೆ ಭಾಗಕ್ಕೆ ಬರುವಂತಾಗಲಿ.
•ಸ್ಥಳೀಯ ನಿವಾಸಿಗಳು,
ಕೋಟೆಭಾಗ.

Advertisement

Udayavani is now on Telegram. Click here to join our channel and stay updated with the latest news.

Next