Advertisement

Kottigehara; ಕಾಡುಕೋಣಗಳ ಹಾವಳಿ: ಅರಣ್ಯ ಅಧಿಕಾರಿಗಳ ಕೂಂಬಿಂಗ್

11:43 PM Nov 01, 2023 | Team Udayavani |

ಕೊಟ್ಟಿಗೆಹಾರ: ಕೊಟ್ಟಿಗೆಹಾರದ ದೇವನಗೂಲ್, ಅತ್ತಿಗೆರೆ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ನಿತ್ಯ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು ಹಾವಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.

Advertisement

ಬೆಳೆಗಾರರಾದ ಕಾರ್ತಿಕ್ ಅತ್ತಿಗೆರೆ ಮಾತನಾಡಿ ‘ನಿತ್ಯ ಕಾಫಿ ತೋಟಗಳಲ್ಲಿ ಕಾಡುಕೋಣಗಳು ನಿರ್ಭೀತಿಯಿಂದ ಸಂಚರಿಸುತ್ತಿವೆ.ತೋಟ ಕಾರ್ಮಿಕರು ಕೂಡ ಕೆಲಸಕ್ಕೆ ಬರಲು ಭಯ ಪಡುವಂತಾಗಿದೆ. ಕಾಡಾನೆ, ಹುಲಿಗಳ ಕಾಟದಿಂದ ಈ ಭಾಗದ ಬಣಕಲ್, ಹೆಗ್ಗುಡ್ಲು, ಭಾರತೀಬೈಲ್ ಸುತ್ತಮುತ್ತ ಜನರು ರೋಸಿ ಹೋಗಿದ್ದಾರೆ . ಈಗ ಕಾಡುಕೋಣಗಳ ಹಾವಳಿಯಿಂದ ತೋಟಗಾರಿಕೆ ಕೃಷಿಗೂ ಹೊಡೆತ ಬಿದ್ದಂತಾಗಿದೆ’ಎಂದರು. ಬುಧವಾರ ಅರಣ್ಯ ಅಧಿಕಾರಿ ಉಪವಲಯ ಅರಣ್ಯಾಧಿಕಾರಿ ಉಮೇಶ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಅತ್ತಿಗೆರೆ, ದೇವನಗೂಲ್ ಸುತ್ತಮುತ್ತ ಗುಡ್ಡದ ತೋಟಗಳಲ್ಲಿ ಪಟಾಕಿ ಸಿಡಿಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಪಟಾಕಿ ಸಿಡಿಸಿ ಕಾಡುಕೋಣಗಳನ್ನು ಕಾಡಿಗೆ ಅಟ್ಟಲು ಕಾರ್ಯಾಚರಣೆ ಆರಂಭಿಸಿದರು.ಉಪವಲಯ ಅರಣ್ಯ ಅಧಿಕಾರಿ ಉಮೇಶ್,ಗಸ್ತು ಅರಣ್ಯ ಪಾಲಕರಾದ ಮೋಸಿನ್, ಜಯಪ್ಪ ಅರಣ್ಯ ವೀಕ್ಷಕರಾದ ಕೃಷ್ಣಮೂರ್ತಿ ಗಿರೀಶ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next