ತೆಲಸಂಗ: ಮಹಾರಾಷ್ಟ್ರದ ಗಡಿ ಗ್ರಾಮಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಮೀಪದ ಕೊಟ್ಟಲಗಿ ಗ್ರಾಮಸ್ಥರು ಗ್ರಾಮವನ್ನು ಸ್ವಯಂ ಸಂಪೂರ್ಣ ಲಾಕ್‌ಡೌನ್‌ಗೆ ತೀರ್ಮಾನಿಸಿದ್ದಾರೆ.
ಗುರುವಾರ ಗ್ರಾಮದಲ್ಲಿ ಸಭೆ ಸೇರಿದ ಮುಖಂಡರು, ಕೇವಲ ಮೂರ್‍ನಾಲ್ಕು ಕಿ.ಮೀ. ಅಂತರದ ಮಹಾರಾಷ್ಟ್ರದ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ. ಸ್ವಯಂ ರಕ್ಷಣೆ ಅತ್ಯವಶ್ಯಕವೆಂದು ನಿರ್ಧಾರ ಕೈಗೊಳ್ಳಲಾಯಿತು. ಇಲ್ಲಿಯವರೆಗೆ ಹಳ್ಳಿಗಳಿಗೆ ಕಾಲಡಿದ ಕೋವಿಡ್-19 ಪಕ್ಕದ ಮಹಾರಾಷ್ಟ್ರದ ಗಡಿ ಗ್ರಾಮಗಳು ಸೇರಿದಂತೆ ಅಥಣಿ ತಾಲೂಕಿನ ಗ್ರಾಮೀಣ ಪ್ರದೇಶಕ್ಕೂ ವಕ್ಕರಿಸಿದೆ. ಇದರಿಂದ ಸ್ವಯಂ ರಕ್ಷಣೆಗಾಗಿ ಜನರೆಲ್ಲ ಲಾಕ್‌ಡೌನ್‌ಗೆ ಒಪ್ಪಿಗೆ ಸೂಚಿಸಿದರು.
ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಸತಕ್ಕದ್ದು. 12ರ ನಂತರ ಯಾರೂ ಮನೆ ಬಿಟ್ಟು ಹೊರಗೆ ಬರಕೂಡದು ಎಂದು ತಿಳಿಹೇಳಿದರು. ಜಿಪಂ ಮಾಜಿ ಸದಸ್ಯ ಸಿದರಾಯ ಯಲ್ಲಡಗಿ, ಸಿದ್ದಪ್ಪ ಬಡವಗೋಳ, ಸದಾಶಿವ ಕೋಟ್ಯಾಳ, ಸತೀಶ ಉಪಾಸೆ, ಶಿವು ತೇಲಿ, ಸಂಗಪ್ಪ ಮಾಳಿ, ಶಣ್ಮುಖ ಬ್ಯಾಳಿ, ಸದಾಶಿವ ಮನಿಗಿನಿ ಸೇರಿದಂತೆ ಗ್ರಾಪಂ ಸದಸ್ಯರು, ಹಿರಿಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಮೀಪದ ಕೊಟ್ಟಲಗಿ ಗ್ರಾಮಸ್ಥರು ಗ್ರಾಮವನ್ನು ಸ್ವಯಂ ಸಂಪೂರ್ಣ ಲಾಕ್‌ಡೌನ್‌ಗೆ ತೀರ್ಮಾನಿಸಿದ್ದಾರೆ.
ಗುರುವಾರ ಗ್ರಾಮದಲ್ಲಿ ಸಭೆ ಸೇರಿದ ಮುಖಂಡರು, ಕೇವಲ ಮೂರ್‍ನಾಲ್ಕು ಕಿ.ಮೀ. ಅಂತರದ ಮಹಾರಾಷ್ಟ್ರದ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ. ಸ್ವಯಂ ರಕ್ಷಣೆ ಅತ್ಯವಶ್ಯಕವೆಂದು ನಿರ್ಧಾರ ಕೈಗೊಳ್ಳಲಾಯಿತು. ಇಲ್ಲಿಯವರೆಗೆ ಹಳ್ಳಿಗಳಿಗೆ ಕಾಲಡಿದ ಕೋವಿಡ್-19 ಪಕ್ಕದ ಮಹಾರಾಷ್ಟ್ರದ ಗಡಿ ಗ್ರಾಮಗಳು ಸೇರಿದಂತೆ ಅಥಣಿ ತಾಲೂಕಿನ ಗ್ರಾಮೀಣ ಪ್ರದೇಶಕ್ಕೂ ವಕ್ಕರಿಸಿದೆ. ಇದರಿಂದ ಸ್ವಯಂ ರಕ್ಷಣೆಗಾಗಿ ಜನರೆಲ್ಲ ಲಾಕ್‌ಡೌನ್‌ಗೆ ಒಪ್ಪಿಗೆ ಸೂಚಿಸಿದರು.
ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಸತಕ್ಕದ್ದು. 12ರ ನಂತರ ಯಾರೂ ಮನೆ ಬಿಟ್ಟು ಹೊರಗೆ ಬರಕೂಡದು ಎಂದು ತಿಳಿಹೇಳಿದರು. ಜಿಪಂ ಮಾಜಿ ಸದಸ್ಯ ಸಿದರಾಯ ಯಲ್ಲಡಗಿ, ಸಿದ್ದಪ್ಪ ಬಡವಗೋಳ, ಸದಾಶಿವ ಕೋಟ್ಯಾಳ, ಸತೀಶ ಉಪಾಸೆ, ಶಿವು ತೇಲಿ, ಸಂಗಪ್ಪ ಮಾಳಿ, ಶಣ್ಮುಖ ಬ್ಯಾಳಿ, ಸದಾಶಿವ ಮನಿಗಿನಿ ಸೇರಿದಂತೆ ಗ್ರಾಪಂ ಸದಸ್ಯರು, ಹಿರಿಯರು ಸಭೆಯಲ್ಲಿ ಪಾಲ್ಗೊಂಡಿದ್ದರು.