Advertisement
ದೇಗುಲದಲ್ಲಿ ತಂತ್ರಿ ಹಾಗೂ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಐತಾಳ್ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ಪೂಜಾ ವಿ ಧಿವಿಧಾನ ನಡೆಯಿತು. ಉತ್ಸವ ಮೂರ್ತಿಯ ಪ್ರದಕ್ಷಿಣೆಯ ತಾಂಡವ ನೃತ್ಯ, ಪಂಚವಾದ್ಯ ಚೆಂಡೆ, ಬ್ಯಾಂಡ್ ವಾದ್ಯ ಭಕ್ತರ ಗಮನ ಸೆಳೆಯಿತು. ಭಕ್ತರಿಂದ ಶತರುದ್ರಾಭಿಷೇಕ ಹಾಗೂ ಸಣ್ಣರಂಗಪೂಜೆ ನಡೆಯಿತು.
ಜಿಲ್ಲೆಯಲ್ಲೇ ಅತೀ ದೊಡ್ಡ ರಥ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ರಥಕ್ಕೆ ವಿಶೇಷ ಪುಷ್ಪಾಲಂಕಾರದ ಹೊಣೆ ಹೊತ್ತಿರುವ ಶ್ರೀ ಪಟ್ಟಾಭಿರಾಮಚಂದ್ರ ದೇಗುಲದ ಶ್ರೀ ರಾಮ ಸೇವಾ ಸಂಘ ಹಾಗೂ ಶ್ರೀ ದೇವರು ಹಾಗೂ ದೇವಸ್ಥಾನದ ವಿಶೇಷ ಪುಷ್ಪಾಲಂಕಾರ ಸೇವಾಕರ್ತರಾದ ಮಿತ್ರದಳ ಕೋಟೇಶ್ವರ ಚಾರಿಟೆಬಲ್ ಟ್ರಸ್ಟ್ ಅವರಿಂದ ಅಲಂಕಾರದ ಭರದ ಸಿದ್ಧತೆ ನಡೆಯುತ್ತಿದೆ.