Advertisement

ರಿಲೀಸ್‌ಗೂ ಮುನ್ನವೇ ಕೋಟಿಗೊಬ್ಬ-3 ದಾಖಲೆ!

12:19 PM Apr 20, 2020 | Suhan S |

ಕಿಚ್ಚ ಸುದೀಪ್‌ ಅಭಿನಯದ ಬಹುನಿರೀಕ್ಷಿತ “ಕೋಟಿಗೊಬ್ಬ-3′ ಚಿತ್ರದ ಕುರಿತು ಅಚ್ಚರಿಯ ಮಾಹಿತಿ ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

Advertisement

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ 1ರ ಕಾರ್ಮಿಕರ ದಿನದಂದು ಸುದೀಪ್ ಅಭಿನಯದ ಬಹುನಿರೀಕ್ಷಿತ “ಕೋಟಿಗೊಬ್ಬ-3′ ಚಿತ್ರ ತೆರೆ ಕಾಣಬೇಕಿತ್ತು. ಆದರೆ ಕೊರೊನಾ ಲಾಕೌ ಡೌನ್ ಹಿನ್ನೆಲೆ ರಿಲೀಸ್‌ ಡೇಟ್‌ ಮುಂದಕ್ಕೆ ಹಾಕಲಾಗಿದೆ. ಸದ್ಯಕ್ಕೆ ರಿಲೀಸ್‌ ಡೇಟ್‌ ಇನ್ನೂ ಫಿಕ್ಸ್‌ ಆಗದಿರುವುದರಿಂದ, ಅಭಿಮಾನಿಗಳಲ್ಲಿ ಸಹಜವಾಗಿಯೇ ಒಂದಷ್ಟು ಬೇಸರ ಮನೆ ಮಾಡಿದೆ.

ಆದರೆ ಇದೀಗ ಅಭಿಮಾನಿಗಳ “ಕೋಟಿಗೊಬ್ಬ-3′ ಚಿತ್ರದ ಕುರಿತು ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ.ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಚಿತ್ರದ ಬಿಡುಗಡೆಗೆ ಕೆಲ ಫೈನಲ್‌ ಕೆಲಸಗಳಷ್ಟೇ ಬಾಕಿ ಇದ್ದು, ಲಾಕೌಡೌನ್ ನಿಂದಾಗಿ ಚಿತ್ರದ ಕೆಲ ಕೆಲಸಗಳು ಸ್ಥಗಿತಗೊಂಡಿವೆ. ಇದರ ಮಧ್ಯೆಯೇ ಇದೀಗ ಚಿತ್ರದ ಟಿ.ವಿ ರೈಟ್ಸ್ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರ ಬಿದ್ದಿದೆ.

ಹೌದು ಖಾಸಗಿ ವಾಹಿನಿಯೊಂದು ದಾಖಲೆಯ ಮೊತ್ತಕ್ಕೆ “ಕೋಟಿಗೊಬ್ಬ-3′ ಚಿತ್ರವನ್ನು ಖರೀದಿಸಿ ದೆಯಂತೆ. ಬರೋಬ್ಬರಿ 9 ಕೋಟಿ ರೂ.ಗಳಿಗೆ ವಾಹಿನಿಗೆ ಟಿವಿ ರೈಟ್ಸ್ ಮಾರಾಟವಾಗಿದೆ ಎಂದು ಕಿಚ್ಚ ಸುದೀಪ್‌ ಅಭಿಮಾನಿಗಳ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಟ್ವಿಟ್ಟರ್ನಲ್ಲಿ ಕಿಚ್ಚ ಸುದೀಪ್‌ ಅಭಿಮಾನಿಗಳು ಇದನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್‌ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ಮಡೋನ್ನಾ ಸೆಬಸ್ಟಿಯನ್, ಶ್ರದ್ಧಾ ದಾಸ್‌ ಹಾಗೂ ರವಿಶಂಕರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next