Advertisement
ಎಲ್ಲೆಂದರಲ್ಲಿ ತ್ಯಾಜ್ಯ ಎಸೆತಕೋಟೇಶ್ವರ-ಹಾಲಾಡಿ ಸಾಗುವ ಜಂಕ್ಷನ್ ಬಳಿ ಸರ್ವಿಸ್ ರಸ್ತೆಯ ಅನತಿ ದೂರದಲ್ಲಿ ಬಸ್ಸಿಗಾಗಿ ಕಾಯುವ ಪ್ರಯಾಣಿ ಕರಿಗೆ ತ್ಯಾಜ್ಯದ ವಾಸನೆ ಇನ್ನೂ ತಪ್ಪಿಲ್ಲ. ವ್ಯಾಪಾರ ವ್ಯವಹಾರಕ್ಕಾಗಿ ಇಲ್ಲಿಗೆ ಆಗಮಿಸುವ ವಿವಿಧ ಜನರಿಗೆ, ಶಾಲೆ ವಿದ್ಯಾರ್ಥಿಗಳಿಗೆ ಇದು ಪ್ರಮುಖ ಬಸ್ ತಂಗುದಾಣವಾಗಿದೆ. ಆದರೆ ಇಲ್ಲಿ ತ್ಯಾಜ್ಯಗಳನ್ನು ಎಸೆಯುತ್ತಿರುವುದು ಪ್ರಯಾಣಿಕರಿಗೆ ಅತೀವ ಕಿರಿಕಿರಿ ಸೃಷ್ಟಿಸಿದೆ.
ಒಂದೆಡೆ ವಿಲೇವಾರಿಯಾಗದ ತ್ಯಾಜ್ಯವಾದರೆ, ಇನ್ನೊಂದೆಡೆ ವಿವಿಧೆಡೆಯಿಂದ ಹರಿದು ಬರುವ ಕೊಳಚೆ ನೀರು ಕಾಗೇರಿಯತ್ತ ಸಾಗುವ ಮೂಲಕ ಅಲ್ಲಿನ ತೋಡು ಗಬ್ಬೆದ್ದು ಹೋಗಿದೆ. ಇದು ಸ್ಥಳೀಯ ಜಲಮೂಲಗಳಿಗೆ ಹಾನಿ ಮಾಡುವ ಸಾಧ್ಯತೆಯೂ ಇದೆ. ಇದೂ ಪರಿಸರದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯ
ಕೋಟೇಶ್ವರ ರಾ.ಹೆದ್ದಾರಿಯ ಹಿಂದು ರುದ್ರ ಭೂಮಿ ಸನಿಹ ಸಹಿತ ಪಂಚಾಯತ್ ಕಚೇರಿಯ ಬಳಿ ಇರುವ ಸರ್ವಿಸ್ ರಸ್ತೆಗಳಲ್ಲಿ ಮೂಟೆಗಟ್ಟಲೆ ತ್ಯಾಜ್ಯ ಕಂಡುಬಂದಿದೆ. ಇದರಲ್ಲಿ ಕೊಳೆತ ಮಾಂಸ, ಮೀನು ಅಲ್ಲದೇ ಇನ್ನಿತರ ದುರ್ವಾಸನೆಯಿಂದ ಕೂಡಿದ ತ್ಯಾಜ್ಯಗಳನ್ನು ಎಸೆಯಲಾಗಿದೆ.
Related Articles
Advertisement
ಪ್ರಯತ್ನ ನಡೆಯುತ್ತಿದೆಒಣ ಕಸ ವಿಲೇವಾರಿಗೆ ಗ್ರಾ.ಪಂ. ಕ್ರಮಕೈಗೊಂಡಿದ್ದರೂ, ಹಸಿ ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಒದಗಿಸುವುದು ಪ್ರಸ್ತುತ ಕಷ್ಟಸಾಧ್ಯ. ಹಿಂದು ರುದ್ರ ಭೂಮಿ ಬಳಿ ಪರಿಸರ ಮಾಲಿನ್ಯವಾಗದಂತೆ ನಿಗಾವಹಿಸಿ ಎಸ್.ಎಲ್.ಆರ್.ಎಂ. ಘಟಕ ಪ್ರಾರಂಭಿಸುವ ಬಗ್ಗೆ ಆಡಳಿತಾತ್ಮಕ ಪ್ರಯತ್ನ ನಡೆಯುತ್ತಿದೆ. -ತೇಜಪ್ಪ ಕುಲಾಲ್, ಪಿಡಿಒ. ಕೋಟೇಶ್ವರ, ಗ್ರಾ.ಪಂ. ಮುತುವರ್ಜಿ ವಹಿಸಬೇಕು
ಕೋಟೇಶ್ವರ ಗ್ರಾ.ಪಂ.ವ್ಯಾಪ್ತಿಯಲ್ಲಿ ಶೀಘ್ರದಲ್ಲೇ ಹಸಿ ಹಾಗೂ ಒಣ ಕಸ ವಿಲೇವಾರಿ ಪ್ರಕ್ರಿಯೆ ಆರಂಭಗೊಂಡಲ್ಲಿ ಸ್ವಸ್ಥ ಪರಿಸರ ನಿರ್ಮಾಣ ಸಾಧ್ಯ. ಈ ದಿಸೆಯಲ್ಲಿ ಜನಪ್ರತಿನಿ ಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು.
-ರವಿಂದ್ರ ನಾವಡ ಎಸ್.ಎನ್, ಅಧ್ಯಕ್ಷ ರೋಟರಿ ಕ್ಷಬ್ ಕೋಟೇಶ್ವರ