Advertisement

ಕೋಟೆಕಾರು: ಕುಖ್ಯಾತ ಗೂಂಡಾ ಖಾಲಿಯಾ ರಫೀಕ್‌ ಹತ್ಯೆ

03:35 AM Feb 16, 2017 | |

ಉಳ್ಳಾಲ: ಕೇರಳ ಮತ್ತು ಕರ್ನಾಟಕದಲ್ಲಿ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ 42 ಪ್ರಕರಣಗಳಲ್ಲಿ ಆರೋಪಿಯಾಗಿರುವ ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಖಾಲಿಯಾ ರಫೀಕ್‌(38)ನನ್ನು ಮಂಗಳವಾರ ತಡರಾತ್ರಿ ದುಷ್ಕರ್ಮಿಗಳ ತಂಡಧಿಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಟೆಕಾರು ಪೆಟ್ರೋಲ್‌ ಬಂಕ್‌ ಬಳಿ ಗುಂಡಿಕ್ಕಿ, ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದೆ.

Advertisement

ಉಪ್ಪಳವನ್ನು ಕೇಂದ್ರೀಕರಿಸಿ ಕಾರ್ಯಾಧಿಚರಿಸುತ್ತಿದ್ದ ಖಾಲಿಯಾ ರಫೀಕ್‌ ತನ್ನ ಸ್ನೇಹಿತರೊಂದಿಗೆ ಕಾರಿಧಿನಲ್ಲಿ ಬರುತ್ತಿದ್ದಾಗ ಕೋಟೆಕಾರು ಬಳಿ ಟಿಪ್ಪರ್‌ ಲಾರಿಯನ್ನು ಕಾರಿಗೆ ಢಿಕ್ಕಿ ಹೊಡೆಸಲಾಯಿತು. ಹಿಂದಿನಿಂದಲೇ ಕಾರಿನಲ್ಲಿ ಬಂದಿದ್ದ ಆಗಂತುಕರು ಖಾಲಿಯಾನನ್ನು ಕೊಲೆಗೈದು, ಸ್ನೇಹಿತ ಮಹಮ್ಮದ್‌ ಜಾಯೀದ್‌ ಕೈಗೆ ತಲವಾರಿನಿಂದ ಕಡಿದು ಪರಾರಿಯಾದರು.

ತಂಡಗಳೊಳಗಿನ ದ್ವೇಷ
ಗೂಂಡಾ ತಂಡಗಳೊಳಗಿನ ದ್ವೇಷವೇ ಹತ್ಯೆಗೆ ಕಾರಣ ಎಂದು ಪೊಲೀಸರು ಹೇಳಿಧಿದ್ದಾರೆ. ಉಪ್ಪಳ ಮಣಿಮುಂಡದ ಮುತ್ತಲಿಬ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿರಫೀಕ್‌ನನ್ನು ಆತನ ಸಹೋದರ ಸಂಬಂಧಿ ಕಸಾಯಿ ಅಲಿ ಯಾನೆ ನೂರ್‌ ಅಲಿಯು ಈ ಹಿಂದೆಯೂ ಕೊಲೆಗೆ ಯತ್ನಿಸಿದ್ದ. ಇದೇ ತಂಡ ಕೊಲೆ ನಡೆಸಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

42 ಪ್ರಕರಣಗಳ ಆರೋಪಿ
2015ರ ಆ. 13ರಂದು ಬಾಳಿಗಾ ಅಝೀಝ್ ಸಹಚರ ಬಾಯಿಕಟ್ಟೆ ನಿವಾಸಿ ಆಸೀಫ್‌(24)ನನ್ನು ಪೈವಳಿಕೆಧಿಯಲ್ಲಿ ಹತ್ಯೆ ನಡೆಸಿದ್ದರು. ಕನ್ಯಾನಧಿದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಆಸೀಫ್‌ ಮತ್ತು ರಿಯಾಝ್ ಜತೆಯಾಗಿ ಬಂದು ವಾಪಧಿಸಾಗುತ್ತಿದ್ದಾಗ ಕಾರಿನಲ್ಲಿ ಬಂದ ಖಾಲಿಯಾ ರಫೀಕ್‌ ನೇತೃತ್ವದ ತಂಡ ತಲವಾರಿಧಿನಿಂದ ಕಡಿದು ಹತ್ಯೆ ನಡೆಸಿತ್ತು. 2015ರ ಅ. 6ರಂದು ಪುತ್ತೂರಿನ ಸಿಪಿಸಿ ಪ್ಲಾಝಾದಲ್ಲಿದ್ದ ಸನಾಝ್ಗೆ ಸೇರಿದ್ದ ರಾಜಧಾನಿ ಜುವೆಲರ್ಸ್‌ ಚಿನ್ನಾಭರಣಗಳ ಮಳಿಗೆಗೆ ಗುಂಡಿನ ದಾಳಿ ಪ್ರಕರಣ, 2013ರ ಅ. 24ರಂದು ಉಪ್ಪಳ ನಿವಾಸಿ ಮುತ್ತಲಿಬ್‌ ಪತ್ನಿ ಜತೆಗೆ ಉಪ್ಪಳದಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ 
ಖಾಲಿಯಾ ತಂಡ ಕಾರನ್ನು ಅಡ್ಡಗಟ್ಟಿ ಮುತ್ತಲಿಬ್‌ನನ್ನು ಹೊರಗೆಳೆದು ಕಡಿದು ಹತ್ಯೆ ನಡೆಸಿತ್ತು. ಪೊಲೀಸರಿಂದ ತಪ್ಪಿಸಿಕೊಂಡಿದ್ದ
ಮುತ್ತಲಿಬ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಖಾಲಿಯಾನನ್ನು ಅಜೆರ್‌ನಿಂದ ಬಂಧಿಸಲಾಗಿತ್ತು. 2008ರಲ್ಲಿ ಕೈಕಂಬ ಉಪ್ಪಳದಲ್ಲಿ ಕಿಡ್ನಾéಪ್‌ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡಿನ ನ್ಯಾಯಾಲಯಕ್ಕೆ ಕರೆತರುವ ಸಂದರ್ಭ ಪೊಲೀಸರಿಂದ ತಪ್ಪಿಸಿದ್ದ. ಬಳಿಕ ಮಂಗಳೂರು ಪೊಲೀಸರು ಬಂಧಿಸಿದ್ದರು. 

ಭೂಗತ ಪಾತಕಿ ಕಲಿ ಯೋಗೀಶನ ಸಹಚರನಾಗಿ ಗುರುತಿಸಿಕೊಂಡಿದ್ದ ಈತ ರಾಜಧಾನಿ ಶೂಟೌಟ್‌ ಸಹಿತ ತಲಪಾಡಿ ಮನೆಧಿಯೊಂದಧಿರಲ್ಲಿ ಶೂಟೌಟ್‌, ಸಹಿತ ಹಲವು ಹಫ್ತಾ ಬೇಡಿಕೆಗಳಿಗೆ ಕೃತ್ಯವನ್ನು ಎಸಗಿದ್ದನು. ಉಪ್ಪಳದ ಹಮೀದ್‌ ಅವರ ಮೇಲೆ ಸೀಮೆಧಿಎಣ್ಣೆ ಸುರಿದು ಹತ್ಯೆ ನಡೆಸಿದ ಪ್ರಕರಣವೂ ಕೇರಳದಲ್ಲಿ ತೀವ್ರ ಸಂಚಲನವನ್ನು ಉಂಟು ಮಾಡಿತ್ತು. ಒಟ್ಟು 45 ಪ್ರಕರಣಗಳ ಹಿನ್ನೆಲೆಯಲ್ಲಿ ಕಾಸರಗೋಡು ಪೊಲೀಸರು ಗೂಂಡಾ ಕಾಯ್ದೆ ಹೇರಿ ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ರಫೀಕ್‌ನಿಂದ ಹತ್ಯೆಯಾದ ಮುತ್ತಲಿಬ್‌ ಸಹೋದರ “ಕಸಾಯಿ’ ಆಲಿ ಯಾನೆ ನೂರ್‌ ಆಲಿ ತಂಡದ ಮಧ್ಯೆ ಗುಂಡಿನ ದಾಳಿಯೂ ನಡೆದಿತ್ತು.

Advertisement

ಗುಂಡು ವಶಕ್ಕೆ
ಡಿಸಿಪಿ ಸಂಜೀವ್‌ ಕುಮಾರ್‌, ಕಮಿಷನರ್‌ ಚಂದ್ರಶೇಖರ, ಉಳ್ಳಾಲ ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ ಪರಿಶೀಲನೆ ನಡೆಸಿದ್ದು, ಶೂಟೌಟ್‌ನಲ್ಲಿ ಸಿಕ್ಕಿದ ಗುಂಡುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿನಿಮೀಯ ಶೈಲಿಯಲ್ಲಿ  ಕೊಲೆ
ತಂಡದಿಂದ ಬರ್ಬರವಾಗಿ ಹತ್ಯೆಯಾಗಿರುವ ಖಾಲಿಯಾ ರಫೀಕ್‌, ಗಾಯಗೊಂಡಿರುವ ಮಹಮ್ಮದ್‌ ಜಾಯೀದ್‌ ಅವರು ಇನ್ನಿಬ್ಬರು ಸ್ನೇಹಿತಧಿರೊಂದಿಗೆ ಉಪ್ಪಳದಿಂದ ಮಂಗಳವಾರ ರಾತ್ರಿ 11.17ಕ್ಕೆ ಹೊರಧಿಟಿಧಿದ್ದರು. ಹೊಸಂಗಡಿವರೆಗೆ ಆಲ್ಟೋ ಕಾರಿನಲ್ಲಿ ಬಂದಿದ್ದ ರಫೀಕ್‌ ತಂಡ ಬಳಿಕ ಹೊಸಂಗಡಿಯಲ್ಲಿ ರಿಟ್ಜ್ ಕಾರಿನಲ್ಲಿ ಹೊರಟಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಬೀರಿ ದಾಟಿ ಕೋಟೆಕಾರು ಪೆಟ್ರೋಲ್‌ ಬಂಕ್‌ ಸಮೀಧಿಪಿಸುಧಿತ್ತಿದ್ದಂತೆ ಕೊಲ್ಯ ಕಡೆಯಿಂದ ವಿರುದ್ಧ ದಿಕ್ಕಿನಲ್ಲಿ ಬಂದಿದ್ದ ಕೇರಳ ನೋಂದಾಧಿಯಿತ ಟಿಪ್ಪರನ್ನು ರಫೀಕ್‌ ಸಂಚರಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಸಿ ನಿಲ್ಲಿಸಧಿಲಾಯಿತು. ರಫೀಕ್‌ ಕಾರನ್ನು ಹಿಂಬಾಲಿಸಿಕೊಂಡು ಬರುಧಿಧಿತ್ತಿದ್ದ ಇನ್ನೊಂದು ಕಾರಿನಲ್ಲಿದ್ದ ಸುಮಾರು ಐದು ಮಂದಿ ಮತ್ತು ಲಾರಿಯಲ್ಲಿದ್ದ ಇಬ್ಬರು ಸಿನಿಮೀಯ ಶೈಲಿಯಲ್ಲಿ ಏಕಾಏಕಿ ದಾಳಿ ನಡೆಸಿದರು.

ಅಟ್ಟಾಡಿಸಿ ಕೊಂದರು
ಅಪಘಾತವಾಗುತ್ತಿದ್ದಂತೆ ರಫೀಕ್‌ನೊಂದಿಗಿದ್ದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು, ರಫೀಕ್‌ ಜೀವ ಉಳಿಸಿಕೊಳ್ಳಲು ಪೆಟ್ರೋಲ್‌ ಬಂಕ್‌ ಕಡೆಗೆ ಓಡಿದನು. ಅಷ್ಟರಲ್ಲಿ ಕಾರಿನಲ್ಲಿ ಬಂದಿದ್ದ ಒಬ್ಟಾತ ರಫೀಕ್‌ಗೆ ತಲವಾರಿನಿಂದ ಹಲ್ಲೆ ನಡೆಸಿದ; ಇನ್ನೋರ್ವ ರಿವಾಲ್ವಾರ್‌ನಿಂದ ಮೂರು- ನಾಲ್ಕು ಬಾರಿ ಗುಂಡು ಹಾರಿಸಿದ. ನೆಲಕ್ಕುರುಳಿದ ರಫೀಕ್‌ ಮೇಲೆ ಉಳಿದವರು ತಲವಾರಿನಿಂದ ಯದ್ವಾತದ್ವಾ ಕಡಿದರು. ಈ ಸಂದರ್ಭದಲ್ಲಿ ಜಾಯೀದ್‌ ಬೊಬ್ಬೆ ಹಾಕಿದ್ದು, ತಂಡದಲ್ಲಿದ್ದ ಇಬ್ಬರು ಆತನಿಗೆ ತಲವಾರಿನಿಂದ ಹಲ್ಲೆ ನಡೆಸಿದರು. ಆತನ ಕೈಗೆ ಗಂಭೀರ ಗಾಯಗಳಾಗಿವೆ. ಬೊಬ್ಬೆ ಕೇಳಿ ಪೆಟ್ರೋಲ್‌ ಬಂಕ್‌ ಸಿಬಂದಿ ಹೊರಗಡೆ ಬಂದರು. ಸ್ಥಳದಲ್ಲಿ ಜನರು ಸೇರುತ್ತಿದ್ದಂತೆ ಕೊಲೆ ನಡೆಸಿದ ತಂಡ ಪರಾರಿಯಾಯಿತು. ಸ್ಥಳೀಯರು ಹೆದ್ದಾರಿಯಲ್ಲಿ ಸಂಚಾರ ನಡೆಸುತ್ತಿದ್ದ ಆ್ಯಂಬುಲೆನ್ಸ್‌ನಲ್ಲಿ ರಫೀಕ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಗಂಭೀರ ಗಾಯಗೊಂಡಿದ್ದ ರಫೀಕ್‌ ಸಾವನ್ನಪ್ಪಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next