Advertisement
ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ಮಾಡಲು ನಾವೆಲ್ಲ ಒಟ್ಟಾಗಿ ದುಡಿಯಬೇಕಿದೆ ಹಾಗೂ ಕಾರ್ಯಕರ್ತರು ಪಕ್ಷದ ಜೀವಾಳವಾಗಿದ್ದು, ಇವರ ಮೂಲಕ ಕೇಂದ್ರ ಸರಕಾರದ ಸಾಧನೆಗಳನ್ನು ಮನೆ-ಮನೆಗೆ ತಲುಪಿಸುವ ಕಾರ್ಯವಾಗಬೇಕಿದೆ ಎಂದರು.
ಕೋಟತಟ್ಟು ಗ್ರಾಮಕ್ಕೆ ಸಂಬಂಧಿಸಿದ ಸಭೆ ಪ್ರಮೋದ ಹಂದೆಯವರ ಮನೆಯಲ್ಲಿ ಹಾಗೂ ಅಜಿತ್ ದೇವಾಡಿಗರ ಮನೆಯಲ್ಲಿ ಕೋಟ ಭಾಗದ ಕಾರ್ಯಕರ್ತರ ಸಭೆ, ಗೋಪಾಲ ಪೈಯವರ ಮನೆಯಲ್ಲಿ ಮಣೂರು ಭಾಗದ ಸಭೆ ಮತ್ತು ವಡ್ಡರ್ಸೆ ಭಾಗದ ಸಭೆ ಕೋಟಿ ಪೂಜಾರಿಯವರ ಮನೆಯಲ್ಲಿ ನಡೆಯಿತು.ಚುನಾವಣೆಯ ತಯಾರಿ ಇನ್ನಿತರ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ತಾ.ಪಂ.ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭರತ್ ಶೆಟ್ಟಿ ಮತ್ತು ಸ್ಥಳೀಯ ತಾ.ಪಂ. ಗ್ರಾ.ಪಂ. ಸದಸ್ಯರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.