Advertisement

Kota: ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ವಂಚನೆ

11:41 PM Jul 31, 2024 | Team Udayavani |

ಕೋಟ: ಆನ್‌ಲೈನ್‌ ಟ್ರೇಡಿಂಗ್‌ ಹೆಸರಲ್ಲಿ ಮಾಧವ ಗಿಳಿಯಾರು ಎನ್ನುವವರಿಗೆ ವ್ಯಕ್ತಿ ಯೋರ್ವ ಲಕ್ಷಾಂತರ ರೂ. ವಂಚಿಸಿದ್ದು ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮಾಧವ ಅವರ ಮೊಬೈಲ್‌ಗೆ ದೀಪಕ್‌ ಎನ್ನುವಾತ ಗ್ರೂಪ್‌ ಲಿಂಕ್‌ವೊಂದನ್ನು ಕಳುಹಿಸಿದ್ದು ಆತನ ಸೂಚನೆಯಂತೆ ಟ್ರೆಡಿಂಗ್‌ಗೆ 50 ಸಾವಿರ ರೂ. ಹಣವನ್ನು ಹಾಕಿದ್ದಾರೆ. ಇದರಿಂದ 1,09,000ರೂ ಹಣ ಲಾಭ ಬಂದಿರುವುದಾಗಿ ನಂಬಿಸಿದ್ದು ಇದನ್ನು ತೆಗೆಯಲು ಟೆಲಿಗ್ರಾಮ್‌ ಗ್ರೂಫ್‌ನಲ್ಲಿ 80,000ರೂ ಹಣವನ್ನು ಹಾಕಬೇಕು ಎಂದು ತಿಳಿಸಿದ್ದಾನೆ.

ಇದರಂತೆ 55,000 ರೂ. ಪೋನ್‌ ಪೇ ಮತ್ತು 25,000 ರೂ. ಹಣವನ್ನು ಪೇಟಿಯಮ್‌ ಮೂಲಕ ಹಾಕಿದ್ದು ಎಲ್ಲ ಹಣವನ್ನು ಲಪಟಾಯಿಸಿ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಂಗಳೂರು:  ಲಕ್ಷ ರೂ. ಕಳವು
ಮಂಗಳೂರು:
ನಗರದ ವೆಲೆನ್ಸಿಯಾದ ಹೈಪರ್‌ ಮಾರ್ಕೆಟ್‌ವೊಂದಕ್ಕೆ ನುಗ್ಗಿರುವ ಕಳ್ಳರು 1.15 ಲ.ರೂ. ಕಳವು ಮಾಡಿದ್ದಾರೆ.
ಆಲ್ವಿನ್‌ ಡಿ’ಸೋಜಾ ಅವರು ತನ್ನ ಮಾಲಕತ್ವದ ಮಾರ್ಟಿನ್‌ ಹೈಪರ್‌ ಮಾರ್ಕೆಟ್‌ ಶಾಪ್‌ನಲ್ಲಿ ಜು. 29ರಂದು ರಾತ್ರಿ 10.30ಕ್ಕೆ ವ್ಯವಹಾರ ಮುಗಿಸಿ ಲಾಕ್‌ ಮಾಡಿ ಹೋಗಿದ್ದರು.

ಮರುದಿನ ಬೆಳಗ್ಗೆ 6.30ಕ್ಕೆ ಬಂದು ನೋಡಿದಾಗ ಯಾರೋ ಕಳ್ಳರು ಬಾಗಿಲನ್ನು ಒಡೆದು ಒಳಪ್ರವೇಶಿಸಿ ಡ್ರಾವರ್‌ನಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next