Advertisement

Kota ಕಸ ಸ್ವಚ್ಛಗೊಳಿಸುವಾಗ ಬಾವಿಗೆ ಬಿದ್ದು ಸಾವು

12:27 AM Aug 29, 2023 | Team Udayavani |

ಕೋಟ: ಮರದ ಕೆಲಸ ನಿರ್ವಹಿಸುವ ಕಾರ್ಮಿಕನೋರ್ವ ಮನೆಯ ಬಾವಿಯ ಕಸ ಸ್ವಚ್ಛಗೊಳಿಸುವ ಸಂದರ್ಭ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಹಳ್ಳಾಡಿ ಕೆಳಮನೆಯಲ್ಲಿ ಆ. 27ರಂದು ಸಂಭವಿಸಿದೆ.

Advertisement

ಇಲ್ಲಿನ ನಿವಾಸಿ ಗಣೇಶ ಆಚಾರಿ (40) ಮೃತರು. ಬೆಳಗ್ಗೆ ಮನೆಯ ಬಾವಿ ಸ್ವಚ್ಛಗೊಳಿಸಲು ತೆರಳಿದ್ದು, ಸಾಕಷ್ಟು ಹೊತ್ತು ಕಳೆದರೂ ವಾಪಸಾಗದ ಕಾರಣ ಪತ್ನಿ ಬಾವಿಯ ಸಮೀಪ ಹೋಗಿ ನೋಡುವಾಗ ಬಾವಿಗೆ ಬಿದ್ದಿರುವುದು ಕಂಡು ಬಂದಿತ್ತು. ಅನಂತರ ಅಗ್ನಿಶಾಮಕ ದಳದ ಸಹಾಯದಿಂದ ದೇಹವನ್ನು ಮೇಲಕ್ಕೆತ್ತಿ ನೋಡಿದಾಗ ಗಣೇಶ್‌ ಆಚಾರಿ ಮೃತಪತ್ತಿಟ್ಟಿದ್ದರು. ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next