Advertisement
ಚತುಷ್ಪಥ ಹೆದ್ದಾರಿಯ ಟೋಲ್ ವಸೂಲಾತಿ ಹಾಗೂ ನಿರ್ವಹಣೆಯ ಹೊಣೆಯನ್ನು ನವಯುಗ ಕಂಪೆನಿಯಿಂದ ಹೈವೇ ಕನ್ಸ್‌ಟ್ರಕ್ಷನ್ ಕಂಪೆನಿ ಕೆಲವು ತಿಂಗಳ ಹಿಂದೆ ಪಡೆದಿತ್ತು ಹಾಗೂ ಹೆದ್ದಾರಿಯ ಮರು ಡಾಮರೀಕರಣ ಕಾರ್ಯಕ್ಕೆ ಹೊಸ ಕಂಪೆನಿ ಮುಂದಾಗಿತ್ತು.
ಕಾಮಗಾರಿ ನಡೆದಿದ್ದರೆ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ತಾಂತ್ರಿಕ ಕಾರಣದಿಂದ ಸಾಸ್ತಾನ ಟೋಲ್ ಸಮೀಪದಲ್ಲೇ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಪ್ರಶ್ನಿಸಿದರೆ ಶೀಘ್ರದಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎನ್ನುವ ಭರವಸೆ ನೀಡಿದ್ದರು. ಆದರೆ ಮಳೆಗಾಲ ಆರಂಭವಾದ್ದರಿಂದ ಕೆಲಸ ಮುಂದುವರಿಯಲಿಲ್ಲ. ಈಗ ಮಳೆಯ ಜತೆಗೆ ಗುಂಡ್ಮಿ, ಸಾಲಿಗ್ರಾಮ, ಕೋಟ, ತೆಕ್ಕಟ್ಟೆ ಕೋಟೇಶ್ವರ ಮೊದಲಾದ ಕಡೆ ರಸ್ತೆಯಲ್ಲಿ ಗುಂಡಿಗಳು ಸೃಷ್ಟಿಯಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚು ಸಂಕಷ್ಟ: ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಸಮಸ್ಯೆ ಇದ್ದು ಮಳೆ ಬರುವಾಗ
ಗುಂಡಿಯಲ್ಲಿ ನೀರು ತುಂಬಿ ಹೊಂಡವನ್ನು ಗಮನಿಸದೆ ಬೆ„ಕ್ ಸ್ಕಿಡ್ ಆಗಿ ಬಿದ್ದು ಜೀವ ಹಾನಿ ಸಂಭವಿಸುವ ಸಾದ್ಯತೆ ಕೂಡ
ಇದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ಹೆಚ್ಚು ಅಪಾಯವಿದೆ.
Related Articles
Advertisement
ಪರಿಹಾರ ಅಗತ್ಯ: ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದಂತೆ ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸ ಆಗಬೇಕು ಹಾಗೂ ಸಾಸ್ತಾನದಿಂದ ಕುಂದಾಪುರ ತನಕ ಬಾಕಿ ಉಳಿದಿರುವುದ ಮರು ಡಾಮರೀಕರಣ ಕಾಮಗಾರಿ ಆದಷ್ಟು ಶೀಘ್ರ ನಡೆಯಬೇಕು ಎನ್ನುವುದು ವಾಹನ ಸಂಚಾರಿಗಳ ಬೇಡಿಕೆಯಾಗಿದೆ.
ಸಾರ್ವಜನಿಕರಿಗೆ ಸಂಪರ್ಕಕ್ಕಾಗಿಸಾಸ್ತಾನ ಟೋಲ್‌ಗೆ ಸಂಬಂಧಿಸಿ ಉಡುಪಿಯಿಂದ-ಕುಂದಾಪುರ ತನಕ ರಸ್ತೆಯಲ್ಲಿ ಸಮಸ್ಯೆಗಳಿದ್ದರೆ ಸ್ಥಳೀಯ ಸಾಸ್ತಾನ ಟೋಲ್‌ನ ಸಾರ್ವಜನಿಕ ಸಂಪರ್ಕ ಸಂಖ್ಯೆ 8130006595 ಕರೆ ಮಾಡಿ ದೂರು ನೀಡಬಹುದು. ತಾತ್ಕಾಲಿಕ ದುರಸ್ತಿ
ತಾಂತ್ರಿಕ ಕಾರಣದಿಂದ ಡಾಮರೀಕರಣ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಹೊಂಡಗಳನ್ನು ಗುರುತಿಸಿ ವೆಟ್ ಮಿಕ್ಸ್ ಹಾಕಿ ಮುಚ್ಚಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕ ದೂರುಗಳಿದ್ದರೆ ಸ್ಥಳೀಯ ಟೋಲ್‌ನವರ ಗಮನಕ್ಕೆ ತಂದಲ್ಲಿ ಶೀಘ್ರ ಕ್ರಮಕೈಗೊಳ್ಳಲಾಗುವುದು.
*ತಿಮ್ಮಯ್ಯ, ಮೂರು ಟೋಲ್‌ಗಳ ಪ್ರಬಂಧಕರು ಗಮನಹರಿಸಿ
ರಸ್ತೆ ಹೊಂಡಗಳಿಂದ ಹಾಗೂ ರಸ್ತೆ ಮೇಲೆ ನೀರು ನಿಲ್ಲುವುದರಿಂದ ಅಪಾಯ ಖಂಡಿತ. ಹೀಗಾಗಿ ಅಪಘಾತ, ದುರಂತಗಳು ನಡೆಯುವ ಮುನ್ನ ಸಂಬಂಧಪಟ್ಟ ಕಂಪೆನಿ ಈ ಬಗ್ಗೆ ಗಮನಹರಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
*ನವೀನ್ ಶೆಟ್ಟಿ, ವಾಹನ ಸಂಚಾರಿ *ರಾಜೇಶ್ ಗಾಣಿಗ ಅಚ್ಲಾಡಿ