Advertisement
ಕೋಟ ಬಾರಿಕೆರೆ ನಿವಾಸಿ ಅಶ್ವಿತಾ (35) ಅವರಿಗೆ ಫೇಸುºಕ್ ಖಾತೆಯಿಂದ ಬಜಾಜ್ ಫೈನಾನ್ಸ್ ಹೆಸರಿನಲ್ಲಿ ಲೋನ್ ಬಗ್ಗೆ ಜಾಹೀರಾತು ಬಂದಿದ್ದು, ಅನಂತರ ಓರ್ವ ವ್ಯಕ್ತಿ ಕರೆ ಮಾಡಿ ನಿಮಗೆ 5 ಲಕ್ಷ ರೂ. ಸಾಲ ಮಂಜೂರಾಗಿದೆ ಅದಕ್ಕೆ ಬ್ಯಾಂಕ್ ವಿವರ, ವೈಯಕ್ತಿಕ ಗುರುತು ಚೀಟಿ ಹಾಗೂ ಫೋಟೋ ಒಂದನ್ನು ನೀಡುವಂತೆ ಪಡೆದು ನಂಬಿಸಿ, ಒಟ್ಟು 16 ಬಾರಿ ಗೂಗಲ್ ಪೇ ಮುಂತಾದ ಆ್ಯಪ್ ಮೂಲಕ 2,46,861 ರೂ.ಗಳನ್ನು ಪಡೆದು ವಂಚನೆ ಮಾಡಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರದ ಹೇರೂರು ನಿವಾಸಿ ಸುಜಯ್ ಕುಮಾರ್ (29) ಅವರು ಪೇಟಿಎಂ ಖಾತೆ ಹೊಂದಿದ್ದು, ವಾಟ್ಸಪ್ ಯೂಟ್ಯೂಬ್ ಚಾನೆಲ್ ಪ್ರಮೋಟ್ ಮಾಡುವ ಬಗ್ಗೆ ಮೆಸೇಜ್ ಕಳುಹಿಸಿ, ಅನಂತರ ಯೂಟ್ಯೂಬ್ ಚಾನೆಲ್ ಪ್ರಮೋಟ್ ಮಾಡುವ ಬಗ್ಗೆ ಟಾಸ್ಕ್ ನೀಡುವುದಾಗಿ ನಂಬಿಸಿ 2,30,000 ರೂ. ವಂಚಿಸಲಾಗಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.