Advertisement

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

03:59 PM May 30, 2020 | keerthan |

ಕೋಟ: 14 ದಿನಗಳ ಕ್ವಾರಂಟೈನ್ ಮುಗಿಸಿ ಮನೆಗೆ ಬಂದ ಕೋಟ ಬಾರಿಕೆರೆಯ  ಮಹಿಳೆಗೆ ಇದೀಗ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ವಂಡಾರು ಗ್ರಾಮದ ಮಾರ್ವಿಯಲ್ಲಿ ಪೂನದಿಂದ ಆಗಮಿಸಿದ ಒಂದೂವರೇ ವರ್ಷದ ಮಗು ಕೂಡಾ ಸೋಂಕಿಗೆ ಒಳಗಾಗಿದೆ. ಇದೀಗ ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಬಾರಿಕೆರೆಯ 100 ವ್ಯಾಪ್ತಿಯ 12 ಮನೆ ಮತ್ತು ವಂಡಾರು ಮಾರ್ವಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಪೂನಾ ದಿಂದ ಆಗಮಿಸಿದ ಬಾರಿಕೆರೆಯ ಮಹಿಳೆ 14 ದಿನದಿಂದ ಕುಂದಾಪುರದಲ್ಲಿ ಕ್ವಾರಂಟೈನ್ ನಲ್ಲಿದ್ದು ರಿಪೋರ್ಟ್ ಲಭ್ಯವಾಗುವ ಮುನ್ನವೇ ಮೇ 28 ರಂದು ಸಂಜೆ ಮನೆಗೆ ಬಂದಿದ್ದು ಮೇ 29ರಂದು ಪಾಸಿಟಿವ್ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಬ್ರಹ್ಮಾವರ ತಹಶಿಲ್ದಾರ್ ಕಿರಣ್‌ಗೋರಯ್ಯ, ಕೋಟ ಠಾಣಾಧಿಕಾರಿ ರಾಜಶೇಖರ್ ಮಂದಲ್ಲಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆಯವರು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next