Advertisement

Korea Open: ಸಿಂಧು, ಶ್ರೀಕಾಂತ್‌ಗೆ ಸೋಲಿನ ಆಘಾತ

11:05 PM Jul 19, 2023 | Team Udayavani |

ಯೋಸು (ಕೊರಿಯಾ): ಪಿ.ವಿ. ಸಿಂಧು ಅವರ ನಿರಾಶಾದಾಯಕ ಆಟ “ಕೊರಿಯಾ ಓಪನ್‌ ಸೂಪರ್‌ 500′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲೂ ಮುಂದುವರಿದಿದೆ. ಇಲ್ಲಿ ಅವರು ಮೊದಲ ಸುತ್ತಿನಲ್ಲೇ ಆಟ ಮುಗಿಸಿ ಹೊರಬಿದ್ದರು. ಕೆ. ಶ್ರೀಕಾಂತ್‌ ಕೂಡ ಇದೇ ಸಂಕಟ ಅನುಭವಿಸಿದರು.

Advertisement

ದ್ವಿತೀಯ ಸುತ್ತಿಗೆ ಮುನ್ನಡೆ ಸಾಧಿಸಿದವರೆಂದರೆ ಎಚ್‌.ಎಸ್‌. ಪ್ರಣಯ್‌ ಮತ್ತು ಪ್ರಿಯಾಂಶು ರಾಜಾವತ್‌. 5ನೇ ಶ್ರೇಯಾಂಕದ ಪ್ರಣಯ್‌ ಬೆಲ್ಜಿಯಂನ ಜೂಲಿಯನ್‌ ಕರೇಜಿ ವಿರುದ್ಧ 21-13, 21-17 ಅಂತರದಿಂದ ಗೆದ್ದು ಬಂದರು. ರಾಜಾವತ್‌ ಕೊರಿಯಾದ ಹೂನ್‌ ಅವರನ್ನು 21-15, 21-19ರಿಂದ ಮಣಿಸಿದರು.

ಸಿಂಧು ಚೈನೀಸ್‌ ತೈಪೆಯ ಪೈ ಯು-ಪೊ ವಿರುದ್ಧ 18-21, 21-10, 13-21 ರಿಂದ ಮುಗ್ಗರಿಸಿದರು. ಕೆ. ಶ್ರೀಕಾಂತ್‌ ಅವರನ್ನು ಕೆಡವಿದವರು ಜಪಾನ್‌ನ ಮಾಜಿ ನಂ.1 ಆಟಗಾರ ಕೆಂಟೊ ಮೊಮೊಟ. ಗೆಲುವಿನ ಅಂತರ 21-12, 24-22, 21-17.

 

Advertisement

Udayavani is now on Telegram. Click here to join our channel and stay updated with the latest news.

Next