Advertisement
3ನೇ ಶ್ರೇಯಾಂಕದ ಸಿಂಧು ವನಿತೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡಿನ ಬುಸಾ ನನ್ ಅವರನ್ನು 21-10, 21-16 ಗೇಮ್‌ಗಳಿಂದ ಸೋಲಿಸಿದರು.
Related Articles
ಕೆ. ಶ್ರೀಕಾಂತ್ 3 ಗೇಮ್‌ಗಳ ಕಠಿನ ಹೋರಾಟದಲ್ಲಿ ಸ್ಥಳೀಯ ಭರವಸೆ ಸನ್ ವಾನ್ ಹೊ ಅವರನ್ನು ಕೆಡವಿದರು. ಕೊರಿಯದ ಹೊ ಅವರೆದುರು ಶ್ರೀಕಾಂತ್ 4-7ರ ದಾಖಲೆ ಹೊಂದಿದ್ದು, ಕಳೆದ 3 ಮುಖಾಮುಖಿಗಳಲ್ಲಿ ಶ್ರೀಕಾಂತ್ ಸೋತಿದ್ದರು. ಇಲ್ಲಿ ಅಮೋಘ ಪ್ರದರ್ಶನ ನೀಡಿದ ಶ್ರೀಕಾಂತ್ 21-12, 18-21, 21-12 ಗೇಮ್‌ಗಳಿಂದ ಗೆದ್ದು ಬಂದರು.
Advertisement
ಸೆಮಿಫೈನಲ್‌ನಲ್ಲಿ ಶ್ರೀಕಾಂತ್ 3ನೇ ಶ್ರೇಯಾಂಕದ ಇಂಡೋನೇಶ್ಯದ ಜೊನಾಥನ್ ಕ್ರಿಸ್ಟೀ ಅವರನ್ನು ಎದುರಿಸಲಿದ್ದಾರೆ. ಕ್ರಿಸ್ಟೀ ಕಳೆದ ತಿಂಗಳು ನಡೆದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಕೂಟದ ಚಾಂಪಿಯನ್ ಎಂಬುದನ್ನು ಮರೆಯುವಂತಿಲ್ಲ.
ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೆಮಿಫೈನಲ್ ತಲುಪಲು ವಿಫಲರಾದರು. ಅವರು 3 ಗೇಮ್‌ಗಳ ಕಠಿನ ಹೋರಾಟದಲ್ಲಿ ಕೊರಿಯದ ಕಾಂಗ್ ಮಿನ್‌ಹ್ಯುಕ್-ಸಿಯೊ ಅವ ರಿಗೆ 20-22, 21-18, 20-22 ಗೇಮ್‌ಗಳಿಂದ ಶರಣಾದರು.