Advertisement

Koratagere 25ಕ್ಕೂ ಹೆಚ್ಚು ಕಡೆ ಸರಣಿ ಕೇಬಲ್‌ ಕಳವು; ರೈತರ ದೂರಿಗೆ ಸ್ಪಂದಿಸದ ಪೊಲೀಸರು

10:00 PM Sep 12, 2023 | Team Udayavani |

ಕೊರಟಗೆರೆ: ಹಗಲು ರಾತ್ರಿ ಎನ್ನದೇ ಬೆಳೆ ರಕ್ಷಣೆಗೆ ಕಷ್ಟಪಡುತ್ತಿರುವ ರೈತಾಪಿ ವರ್ಗಕ್ಕೆ ನಡುರಾತ್ರಿ 25ಕ್ಕೂ ಅಧಿಕ ಕಡೆ ಜಮೀನಿನಲ್ಲಿ ಕೊಳವೆ ಬಾವಿಗಳ ಕೇಬಲ್‌ ಕಳವು ಮಾಡಿರುವುದು ಗಾಯದ ಮೇಲೆ ಬರೆ ಎಳೆದಾಂತಾಗಿದೆ. ಇದಕ್ಕೆ ಪೊಲೀಸರ ಸ್ಪಂದನೆ ದೊರೆಯದಿರುವುದು ಸಂಕಷ್ಟಕ್ಕೆ ಕಾರಣವಾಗಿದೆ.

Advertisement

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ, ಎಲೆರಾಂಪುರ, ವಜ್ಜನಕುರಿಕೆ ಮತ್ತು ಕೋಳಾಲ ಗ್ರಾಪಂ ವ್ಯಾಪ್ತಿ 10ಕ್ಕೂ ಅಧಿಕ ಗ್ರಾಮದ ವಾಟರ್‌ಸಪ್ಲೈ ಸೇರಿದಂತೆ 25ಕ್ಕೂ ಹೆಚ್ಚು ಕಡೆ ಕೊಳವೆ ಬಾವಿಗಳ ಕೇಬಲ್‌ ಮತ್ತು ಮೇನ್ಸ್‌ ವೈರ್‌ಗಳು ಸರಣಿಯಾಗಿ ಕಳ್ಳತನ ನಡೆದಿದೆ. ಗ್ರಾಪಂ ಸದಸ್ಯರ ಜತೆಗೂಡಿ ರೈತರನ್ನು ಸಮಾಧಾನ ಪಡಿಸುವುದೇ ಕೆಲಸವಾಗಿದೆ.

ಕೆ.ಜಿ.ಬೇವಿನಹಳ್ಳಿ ರೈತ ಕೃಷ್ಣಮೂರ್ತಿ, ವೀರಣ್ಣರಿಗೆ ಸೇರಿದ 3 ಕೊಳವೆ ಬಾವಿ, ವಜ್ಜನಕುರಿಕೆಯ ರೈತ ರವಿಕುಮಾರ್‌, ರಾಮಣ್ಣ ಮೇಷ್ಟ್ರು, ಹನುಮಂತನ ಪಾಳ್ಯದ ರೈತ ವೀರಣ್ಣ, ದುಡ್ಡನಹಳ್ಳಿ ಗ್ರಾಪಂನ ಕೊಳವೆಬಾವಿ, ವಡ್ಡರಹಳ್ಳಿಯ ಕಮಲೇಶ್‌, ಸಂಕೇನಹಳ್ಳಿ ರೈತ ಶಿವಕುಮಾರ್‌, ಹೊನ್ನಗಂಗಯ್ಯ, ಗ್ರಾಪಂನ 3 ಕೊಳವೆ ಬಾವಿಗಳಲ್ಲಿ ಕಳವು ನಡೆದಿದೆ.

ದಾಬಾಸ್‌ಪೇಟೆ-ಕೊರಟಗೆರೆ ರಾಜ್ಯ ಹೆದ್ದಾರಿ ಸಮೀಪದ ಗ್ರಾಮಗಳಿಗೆ ಕೇಬಲ್‌ ಕಳ್ಳರ ತಂಡ ಹಗಲುವೇಳೆ ಆಗಮಿಸಿ ವಾಟರ್‌ಸಪೈ ಮತ್ತು ರೈತರ ಕೊಳವೆಬಾವಿ ಗುರುತಿಸುತ್ತಾರೆ. ತಡರಾತ್ರಿ ಅವುಗಳನ್ನೆ ಟಾಗೇìಟ್‌ ಮಾಡಿ ಕಳವು ಮಾಡುತ್ತಿದ್ದಾರೆ. ವಾರಕ್ಕೊಮ್ಮೆ ಕಳ್ಳತನ ನಡೆಯುತ್ತಿದ್ರು ಕೋಳಾಲ ಪೊಲೀಸರ ತಂಡ ಕಳ್ಳರನ್ನು ಬಂಧಿಸದಿರುವುದು ಉಪಟಳ ಹೆಚ್ಚಲು ಕಾರಣವಾಗಿದೆ.

ಕರೆ ಸ್ವೀಕರಿಸದ ಕೋಳಾಲ ಪಿಎಸೈ..
ಕೋಳಾಲ ವ್ಯಾಪ್ತಿ ರೈತಾಪಿ ವರ್ಗ ಅಥವಾ ಬಡಜನತೆ ತುರ್ತುವೇಳೆ ದೂರವಾಣಿಕರೆ ಮಾಡಿದ್ರು ಕೋಳಾಲ ಪಿಎಸೈ ಕರೆ ಸ್ವೀಕರಿಸುತ್ತಿಲ್ಲ. ಮತ್ತೆ ಭಾನುವಾರ ಮತ್ತು ರಜೆ ದಿನಗಳಲ್ಲಿ ಸರ್ಕಾರಿ ಮೊಬೈಲ್‌ ಸ್ವೀಚ್‌ಆಫ್ ಆಗಿರುತ್ತೆ. ಬೀಟ್‌ ಪೊಲೀಸರು ಬರ್ತಾರೇ ಪತ್ತೆ ಹಚ್ಚುವುದಾಗಿ ಹೇಳಿ ಹೋಗುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

Advertisement

ಕಳ್ಳರು ತಡರಾತ್ರಿ ನಮ್ಮ ಗ್ರಾಮಕ್ಕೆ ಕಾರಿನಲ್ಲಿ ಆಗಮಿಸಿ ಕೇಬಲ್‌ ಕಳವು ಮಾಡುತ್ತಿದ್ದಾರೆ. ರೈತರ 15 ಮತ್ತುಗ್ರಾಪಂನ 8ಕ್ಕೂ ಅಧಿಕ ಕೊಳವೆಬಾಯಿ ಸರಣಿ ಕೇಬಲ್‌ ಕಳ್ಳತನ ನಡೆದಿದೆ. ನಮ್ಮ ಕರೆಂಟ್‌ ರೂಂನ ಬಾಗಿಲು ಹೊಡೆದು ಲಕ್ಷಾಂತರ ಮೌಲ್ಯದ 600 ಅಡಿ ಉದ್ದದ ಕೇಬಲ್‌ ಕದ್ದಿದ್ದಾರೆ. ದೂರಿತ್ತರೂ ಪ್ರಯೋಜನವಾಗಿಲ್ಲ.
-ಕೃಷ್ಣಮೂರ್ತಿ ರೈತ. ಕೆ.ಜಿ.ಬೇವಿನಹಳ್ಳಿ

ಕಳ್ಳತನ ಆದ ತಕ್ಷಣವೇ ರೈತರು ಪೊಲೀಸ್‌ ಠಾಣೆಗೆ ದೂರು ನೀಡಿದರೆ ತನಿಖೆಗೆ ಸಹಾಯವಾಗುತ್ತದೆ. ಕೋಳಾಲ ಪಿಎಸೈ ಮೊಬೈಲ್‌ಕರೆ ಮತ್ತು ಬೀಟ್‌ ಪೊಲೀಸರ ಮಾಹಿತಿ ಪಡೆಯುತ್ತೇನೆ. ಸರ್ಕಾರಿ ಮೊಬೈಲ್‌ ಸ್ವೀಚ್‌ಆಫ್ ಮಾಡಲು ಇಲಾಖೆಯಲ್ಲಿ ಅವಕಾಶವಿಲ್ಲ. ಮಾಹಿತಿ ಪಡೆದು ತನಿಖೆ ಸೂಚಿಸುವೆ
-ಮರೀಯಪ್ಪ ಹೆಚ್ಚುವರಿ ಪೊಲೀಸ್‌ಅಧೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next