Advertisement

ಕೊರಟಗೆರೆ : ರಸ್ತೆಯುದ್ದಕ್ಕು ಗುಂಡಿ : ವಾಹನ ಸಂಚಾರಕ್ಕೆ ತೊಡಕು

09:19 PM Jun 28, 2022 | Team Udayavani |

ಕೊರಟಗೆರೆ : ಪ್ರಸಿದ್ಧ ಯಾತ್ರಾ ಸ್ಥಳವಾದ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಗುಂಡಿ ಬಿದ್ದು, ರಸ್ತೆಯಲ್ಲಿ ತೆಂಗಿನ ಗರಿಗಳನ್ನು ನೆಟ್ಟಿದ್ದು ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

ಈ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸುವುದು ಕಷ್ಟವಾಗಿದೆ. ಜೋರಾಗಿ ಮಳೆಯಾದರೆ ಜಲ್ಲಿಕಲ್ಲು ಕೊಚ್ಚಿ ಹೋಗಿ ಗುಂಡಿಗಳು ಬಿದ್ದಿವೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಆಯತಪ್ಪಿ ಬಿದ್ದು ಕೈ-ಕಾಲುಗಳನ್ನು ಮುರಿದು ಕೊಂಡಿರುವ ಘಟನೆಗಳಿವೆ ಎಂದು ವಾಹನ ಸವಾರ ಮಂಜುನಾಥ್ ಅಳಲು ತೋಡಿಕೊಂಡರು.

ಇದೇ ರಸ್ತೆಯಲ್ಲಿ ವಜ್ಜನಕುರಿಕೆ, ಬೇಡರ ಅಗ್ರಹಾರ, ಹುಲುವಂಗಲ, ತಿಮ್ಮನಾಯಕನಹಳ್ಳಿ ಮತ್ತು ಕೋಳಾಲ ಶಾಲಾ ಕಾಲೇಜುಗಳಿಗೆ, ಮಕ್ಕಳು ಸೈಕಲ್‌ಗಳಲ್ಲಿ ಹೋಗುವಾಗ ಬಿದ್ದು ಗಾಯಗೊಂಡಿರುವ ಪ್ರಸಂಗವೂ ಇದೆ. ಮಳೆ ಬಂದಾಗ ರಸ್ತೆಯುದ್ದಕ್ಕೂ ಗುಂಡಿ ಬಿದ್ದಿದ್ದು, ನಡೆಯುವುದಕ್ಕೂ ಆಗುವುದಿಲ್ಲ. ಕಿರಿದಾದ ರಸ್ತೆಯಲ್ಲಿ ಎರಡೂ ಬದಿಯ ವಾಹನ ಸಂಚಾರ ಅಸಾಧ್ಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಗೊರವನಹಳ್ಳಿ ಲಕ್ಷ್ಮಿ ದೇವಾಲಯವಿದೆ. ಹಾಗಾಗಿ ಇಲ್ಲಿಗೆ ಸಾಕಷ್ಟು ಮಂದಿ ಬರುತ್ತಾರೆ. ದೂರದಿಂದ ಬರುವ ಭಕ್ತರು ಈ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿಸಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next