ಕೊರಟಗೆರೆ: ಇತಿಹಾಸ ಪ್ರಸಿದ್ಧವುಳ್ಳ ಕೋಟೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
800 ವರ್ಷ ಇತಿಹಾಸ ಹೊಂದಿರುವ ಪಟ್ಟಣದ ಕೋಟೆ ಬೀದಿಯಲ್ಲಿರುವ ಕೋಟೆ ಮಾರಮ್ಮನ ಜಾತ್ರೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಸ್ಥರು ಸೇರಿ ಬಹಳ ವಿಜೃಂಭಣೆಯಿಂದ ಪ್ರತೀ ವರ್ಷ ಆಷಾಢ ಮಾಸದ ಕೊನೆಯ ವಾರದಲ್ಲಿ ನಡೆಸುತ್ತಾರೆ. ಕೋವಿಡ್ ಕಾರಣದಿಂದ ಸತತ 3 ವರ್ಷಗಳಿಂದ ಜಾತ್ರಾ ಮಹೋತ್ಸವವನ್ನು ಆಚರಿಸಿರಲಿಲ್ಲ. ಆದರೆ ಈ ಭಾರೀ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವವನ್ನು ಗ್ರಾಮಸ್ಥರು ಏರ್ಪಡಿಸಿದ್ದಾರೆ.
ಬೇಡಿದ ವರಗಳನ್ನು ಈಡೇರಿಸುವ ಭಾಗ್ಯದೇವತೆ, ಧರ್ಮ ದೇವತೆ ಎಂದೇ ಪ್ರಸಿದ್ಧವಾಗಿರುವ ಇತಿಹಾಸ ಪ್ರಸಿದ್ಧವುಳ್ಳ ಕೋಟೆ ಮಾರಮ್ಮ ದೇವಿ ಹಾಗೂ ಕೊಲ್ಲಾಪುರದಮ್ಮ ದೇವಿಯ ಜಾತ್ರಾ ಮಹೋತ್ಸವವು ಪ್ರತಿ ವರ್ಷವೂ ಆಷಾಢ ಮಾಸದಲ್ಲಿ 3 ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನೆರವೇರುತ್ತದೆ.
ಇಲ್ಲಿನ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದ ಮೊದಲ ವರ್ಷವು ಆಷಾಢ ಮಾಸಕ್ಕೆ ಎಂದು ಮರಳಿ ಮನೆಗೆ ಬರುತ್ತಾರೆ. ಇದೇ ಸಂದರ್ಭದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಹೆಣ್ಣುಮಕ್ಕಳು ತಮ್ಮ ಕುಟುಂಬ ಪರಿವಾರದವರು ಆರತಿಗಳನ್ನು ಹೊತ್ತು ಬರುವುದೇ ಈ ಜಾತ್ರೆಯ ವಿಶೇಷ.
ಇಲ್ಲಿನ ಪೂರ್ವಿಕರು ಹಿರಿಯರು ಹೇಳುವಂತೆ, ಕೊರಟಗೆರೆಯ ಕೋಟೆ ಮಾರಮ್ಮ ದೇವಿಗೆ 800 ವರ್ಷಗಳ ಇತಿಹಾಸ ಇದೆ. ಮೈಸೂರು ಸಂಸ್ಥಾನದ ಪರಂಪರೆಯ ಪುರಾವೆಗಳು ಕೂಡ ಇದೆಯಂತೆ. 3ವರ್ಷಗಳಿಂದ ಸರಳವಾಗಿ ನಡೆಸಿದ ಜಾತ್ರೆಯು ಈ ಬಾರಿ ಬಹಳ ವಿಜೃಂಭಣೆಯಿಂದ ನೆರವೇರಿಸಿ ಭಕ್ತಾದಿಗಳು ಸಂತಸ ವ್ಯಕ್ತಪಡಿಸಿದರು.