Advertisement

Koratagere: ಎರಡು ವಿದ್ಯುತ್‌ ಉಪಸ್ಥಾವರ ಘಟಕಗಳ ಉದ್ಘಾಟನೆ

08:37 PM Jul 01, 2024 | Team Udayavani |

ಕೊರಟಗೆರೆ: ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಯು ಚುನಾವಣೆಗೆ ಮಾತ್ರ ಸೀಮಿತವಲ್ಲ. ಬಡ ಜನರಿಗೆ ಕಾಂಗ್ರೆಸ್‌  ಪಕ್ಷ ಕೊಟ್ಟ ಮಾತನ್ನೂ ಎಂದಿಗೂ ತಪ್ಪುವುದಿಲ್ಲ. ರಾಜ್ಯದ ಅಭಿವೃದ್ಧಿ ಜೊತೆಗೆ 5 ವರ್ಷವೂ ಗ್ಯಾರಂಟಿ ಯೋಜನೆ ಇರಲಿದೆ.  ಗ್ಯಾರಂಟಿ ಯೋಜನೆ ನಿಲ್ಲುತ್ತೇ ಅನ್ನೋದು ಕೇವಲ ವಿಪಕ್ಷದ ನಾಯಕರ ಮಾತು ಅಷ್ಟೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Advertisement

ತಾಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾಮದಲ್ಲಿ ಕೆಪಿಟಿಸಿಎಲ್ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ೨೬ ಕೋಟಿ ರೂಪಾಯಿ ವೆಚ್ಚದ ೨ ವಿದ್ಯುತ್ ಉಪಸ್ಥಾವರ ಘಟಕಗಳ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ
ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನ ಕೊಟ್ಟಿಲ್ಲ ಆದ್ರು ನಾವು ಭದ್ರಾ ಮೇಲ್ದಂಡೆ  ಯೋಜನೆಗೆ ಚಾಲನೆ ನೀಡಿದ್ದೇವೆ. ಸಂಪರ್ಕ ಸೇತುವೆಗಾಗಿ ನನ್ನ ಕ್ಷೇತ್ರದಲ್ಲಿ ೩೦೦ ಮಂದಿ ಅಂಗನವಾಡಿ ಕಾರ್ಯಕರ್ತೆ ಮತ್ತು ಮೇಲ್ವಿಚಾರಕರಿಗೆ ಸರಕಾರದಿಂದ ಉಚಿತ ಮೊಬೈಲ್ ವಿತರಿಸಲಾಗಿದೆ. ಪಾವಗಡದಲ್ಲಿ ಮತ್ತೆ 10ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವೆವು ಎಂದು ಭರವಸೆ ನೀಡಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ  ಡಾ.ಜಿ.ಪರಮೇಶ್ವರ ಹೇಳಿದ ಮಾತನ್ನು ನಮ್ಮ ಸರಕಾರದ ಯಾವ ಸಚಿವರು ತೆಗೆದು ಹಾಕುವ ಮಾತೇ ಇಲ್ಲ. ತುಮಕೂರು ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರಕ್ಕೆ ಏನೇ ಕೇಳಿದ್ರು ನಾನು ಕೊಡಲು ಸಿದ್ಧ. ಪಾವಗಡ ಮತ್ತು ಮಧುಗಿರಿಯಲ್ಲಿ ಸೋಲಾರ್ ವಿದ್ಯುತ್ ಘಟಕಕ್ಕೆ ಸ್ಥಳ ಗುರುತಿಸುವ ಕೆಲಸ  ಆಗುತ್ತಿದೆ ಎಂದು ಹೇಳಿದರು.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ 2023ರಲ್ಲಿ ಕೇವಲ 58ಸಾವಿರ ಭಕ್ತರು ಹಾಸನಾಂಬೆ ದರ್ಶನ ಮಾಡಿ 2ಕೋಟಿ 20ಲಕ್ಷ ಹುಂಡಿ ಹಣ ಬರ್ತಿತ್ತು. ಆದರೇ ಶಕ್ತಿ ಯೋಜನೆಯಿಂದ 2024ರಲ್ಲಿ 14 ಲಕ್ಷ ಭಕ್ತರ ದರ್ಶನದಿಂದ 9ಕೋಟಿ 75ಲಕ್ಷ ಹುಂಡಿಯ ಹಣ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

26ಕೋಟಿ ವೆಚ್ಚದಲ್ಲಿ 2 ಉಪಸ್ಥಾವರ ಘಟಕ 
ಕೆಪಿಟಿಸಿಎಲ್ ಇಲಾಖೆಯಿಂದ ಸಂಕೇನಹಳ್ಳಿ ಮತ್ತು ತುಂಬಾಡಿ ಬಳಿ 26 ಲಕ್ಷ ರೂಪಾಯಿ ವೆಚ್ಚದ 66/11ಕೆವಿಯ 2 ವಿದ್ಯುತ್ ಉಪ ಸ್ಥಾವರ. ಈ 2 ಘಟಕದಿಂದ ಸಂಕೇನಹಳ್ಳಿ, ದೊಡ್ಡಹಳ್ಳಿ, ವೆಂಕಟಾಪುರ, ಜಿ.ನಾಗೇನಹಳ್ಳಿ, ತಣ್ಣೇನಹಳ್ಳಿ, ಎಲೆರಾಂಪುರ, ಡಿ.ನಾಗೇನಹಳ್ಳಿ, ಇರಕಸಂದ್ರ, ಚಿಕ್ಕಪಾಲನಹಳ್ಳಿ, ಸಿ.ಎನ್.ದುರ್ಗ, ದಾಸರಹಳ್ಳಿ, ಸಿದ್ದರಬೆಟ್ಟ, ತುಂಬಾಡಿ, ದುರ್ಗದಹಳ್ಳಿ, ಗೊಲ್ಲಹಳ್ಳಿ ಸೇರಿ 15ಗ್ರಾಮದ 2ಸಾವಿರಕ್ಕೂ ಅಧಿಕ ರೈತರಿಗೆ ವಿದ್ಯುತ್ ಪೂರೈಕೆ ಆಗಲಿದೆ.

ಕಾರ್ಯಕ್ರಮದಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವಗುಪ್ತ, ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಪಾಂಡೆ, ನಿರ್ದೇಶಕ ಜಯಕುಮಾರ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಪ್ರಭು.ಜಿ, ಎಸ್‌ಪಿ ಅಶೋಕ್.ಕೆ.ವಿ, ಮುಖ್ಯ ಇಂಜಿನಿಯರ್ ಉಮೇಶ್,  ಕೊರಟಗೆರೆ ತಹಸೀಲ್ದಾರ್ ಮಂಜುನಾಥ.ಕೆ, ಬೆಸ್ಕಾಂ ಎಇಇ ಪ್ರಸನ್ನಕುಮಾರ್, ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಯುವಧ್ಯಕ್ಷ ಬೈರೇಶ್ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next