ಕೊರಟಗೆರೆ : ಹೇಮಾವತಿ ಯೋಜನೆಯಲ್ಲಿ ತಾಲೂಕಿನಗೆ ಹಂಚಿಕೆಯಾಗಿರುವ
1.5 ಟಿಎಂಸಿ ನೀರು ಕೊರಟಗೆರೆ ತಾಲೂಕಿನ ನದಿಗಳಿಗೆ ಮತ್ತು ಕೆರೆಗಳಿಗೆ ಹರಿಸಬೇಕು ಮತ್ತು ಶಾಶ್ವತ ನೀರಾವರಿ ಯೋಜನೆಯಾದ ಎತ್ತಿನಹೊಳೆ ನೀರಾವರಿ ಯೋಜನೆಯ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದರೊಂದಿಗೆ ಭೈರಗೊಂಡ್ಲು ಗ್ರಾಮದಲ್ಲೆ ಬಫರ್ ಡ್ಯಾಂ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಜಯಮಂಗಲಿ ಮತ್ತು ಸುವರ್ಣಮುಖಿ ನದಿ ಪಾತ್ರದ ರೈತರ ಶಾಶ್ವತ ನೀರಾವರಿ ಹೋರಾಟ ಸಮಿತಿ, ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮೇರವಣಿಗೆ ಮೂಲಕ ತಾಲೂಕು ಕಛೇರಿವರೆಗೂ ಪತ್ರಿಭನೆ ನಡೆಸಿ ತಾಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಪತ್ರಿಭಟನೆ ನೇತೃತ್ವ ವಹಿಸಿ ಮಾತನಾಡಿದ ರಾಜ್ಯ ತೆಂಗು ಮತ್ತು ನಾರು ಅಭಿವೃದ್ದಿ ಮಂಡಲಿ ಮಾಜಿ ಅಧ್ಯಕ್ಷ ಹಾಗೂ ಹೋರಾಟ ಸಮಿತಿಯ ಮುಖ್ಯ ಸಂಚಾಲಕ ಜಿ.ವೆಂಕಟಾಚಲಯ್ಯ ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಹಾಗೂ ಕುಣಿಗಲ್ ತಾಲೂಕಿನ ಕೆರಗಳಿಗೆ ಅಲ್ಲಿಯ ಶಾಸಕರು ನೀರು ಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಆದರೆ ಕೊರಟಗೆರೆ ಸ್ಥಳೀಯ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಶಾಶ್ವತ ಬರಗಾಲ ಪೀಡಿತ ತಾಲೂಕುಗಳಾದ ಕೊರಟಗೆರೆ ಮತ್ತು ಮಧುಗಿರಿ ತಾಲೂಕಿನಲ್ಲಿ ಹರಿಯುವ ಜಯಮಂಗಲಿ ಮತ್ತು ಸುವರ್ಣಮುಖಿ ಹಾಗೂ ಗರುಡಾಚಲ ನದಿಗಳ ಕೆರೆಗಳಿಗೆ ನಮ್ಮ ತಾಲೂಕಿಗೆ ಹಂಚಿಕೆಯಾಗಿರುವ
1.5 ಟಿಎಂಸಿ ಹೇಮಾವತಿ ನೀರನ್ನು ಹರಿಸಿ ಅಂತರ್ಜಲ ಹೆಚ್ಚಿಸಲು ಹಾಗೂ ಪ್ಲೋರೈಡ್ ಮುಕ್ತ ಕುಡಿಯುವ ನೀರನ್ನು ನೀಡುವ ಮೂಲಕ ಎರಡೂ ತಾಲೂಕಿನ ಹಳ್ಳಿಗಳ ಸಾವಿರಾರು ಜನರಿಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು ತಕ್ಷಣ ಹೇಮಾವತಿ ನೀರು ತಾಲೂಕಿನ ಕೆರೆಗಳಿಗೆ ಹರಿಸುವಂತೆ ಆಗ್ರಹಿಸಿದರು.
ಕೊರಟಗೆರೆ ತಾಲೂಕಿನ ಗಡಿಭಾಗ ಬೈರಗೊಂಡ್ಲು ಗ್ರಾಮ ಮತ್ತು ದೊಡ್ಡಬಳ್ಳಾಪುರ ಗಡಿಯಲ್ಲಿ ಮೂಲ ಯೋಜನೆಯಲ್ಲಿ ನಿರ್ಮಾಣ ಮಾಡಬೇಕಾದ ಬಫರ್ ಡ್ಯಾಂ ಗೆ ಸ್ವದೀನ ಪಡಿಸಿಕೊಳ್ಳುವ ರೈತರ ಜಮೀನುಗಳಿಗೆ ದೊಡ್ಡಬಳ್ಳಪುರ ರೈತರ ಜಮೀನುಗಳಿಗೆ ನೀಡುವ ಪರಿಹಾರ ವೈಜ್ಞಾನಿಕವಾದ ಬೆಲೆಯನ್ನೆ ಕೊರಟಗೆರೆ ತಾಲೂಕಿನ ರೈತರಿಗೂ ನೀಡಬೇಕು, ಬೈರಗೊಂಡ್ಲುವಿನಲ್ಲಿ ನಿರ್ಮಾಣ ಮಾಡಬೇಕಾದ ಬಫರ್ ಡ್ಯಾಂ ದೊಡ್ಡಬಳ್ಳಾಪುರ ತಾಲೂಕಿಗೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದ್ದು ತಾಲೂಕಿನ ರೈತರಿಗೆ ಮಾಡುತ್ತಿರುವ ದ್ರೂಹವಾಗಿದೆ, ಈಗಾಗಲೆ ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಬಹಳಷ್ಟು ಮುಗಿದಿದ್ದು ಬಫರ್ ಡ್ಯಾಂ ಕಾಮಗಾರಿ ಬಾಕಿ ಇದೆ, ಡ್ಯಾಂ ನಿಗದಿ ಪಡಿಸಿರುವ ಸ್ಥಳದಲ್ಲೆ ನಿರ್ಮಾಣ ಮಾಡದೆ ಡ್ಯಾಂ ಸ್ಥಳಾತಂರಕ್ಕೆ ಸರ್ಕಾರ ಕೈಹಾಕಿದೆರೆ ರೈತರೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ ಅವರು ತಕ್ಷಣ ನಿಗದಿತ ಸ್ಥಳದಲ್ಲೆ ಬಫರ್ ಡ್ಯಾಂ ನಿರ್ಮಾಣ ಕಾರ್ಯ ಪ್ರಾಂಭಿಸಬೇಕು ಎಂದು ಆಗ್ರಹಿಸಿ ಭದ್ರಮೇಲ್ದಂಡೆ ಮತ್ತು ಹೇಮಾವತಿ ಯೋಜನೆಯಯ ಎರಡು ನೀರನ್ನು ಶಾಶ್ವತ ಬರಪೀಡಿತ ತಾಲೂಕುಗಳಾದ ಮಧುಗಿರಿ ಹಾಗೂ ಕೊರಟಗೆರೆಗೆ ಹರಿಸಲು ಒತ್ತಾಯಿಸಿ ಸರ್ಕಾರ ಅಧವಾ ಸ್ಥಳೀಯ ಜನಪ್ರತಿನಿಧಿಗಳು ೧೫ ದಿನಗಳ ಒಳಗಾಗಿ ತಾಲೂಕಿನ ನೀರಾವರಿ ಯೋಜನೆ ಕಾಮಗಾರಿ ಮತ್ತು ಬಫರ್ ಡ್ಯಾಂ ನಿರ್ಮಾಣ ಕಾಮಗಾರಿ ಹಾಗೂ ರೈತರಿಗೆ ಪರಿಹಾರ ವಿತರಣೆ ಜಾರಿ ಗೊಳಿಸಲು ಕ್ರಮ ಕೈಗೊಳ್ಳದಿದ್ದರೆ ಜನಪ್ರತಿನಿಧಿಗಳ ಮಮೆ ಮುಂದೆ ಹಾಗೂ ತಾಲೂಕು ಕಛೇರಿ ಆವರಣದಲ್ಲಿ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹಾಗೂ ನೀರಾವರಿ ಹೋರಾಟ ಸಮಿತಿ ಸಂಚಾಲಕ ಸಿದ್ದರಾಜು ಮಾತನಾಡಿ ತಾಲೂಕಿನ ನೀರಾವರಿ ಯೋಜನೆಯ ಎತ್ತಿನಹೊಳೆಗೆ ಪೈಪ್ ಲೈನ್‌ನಲ್ಲಿ ಚಿಕ್ಕಗುಂಡಗಲ್ ಗ್ರಮದ ಬಳಿ ಇರುವ ಗೇಟ್ ವಾಲ್ ನಿಂದ ಬೈರಗೊಂಡ್ಲು ಬಳಿ ಬಫರ್‌ಡ್ಯಾಂ ನಿರ್ಮಾಣ ಮಾಡುವವರೆಗೂ ಕೊರಟಗೆರೆ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಅಗತ್ಯಕ್ರಮ ಕೈಗೊಳ್ಳ ಬೇಕು, ಬಫರ್ ಡ್ಯಾಂಗೆ ಸ್ವಾಧಿನಪಡಿಸಿಕೊಳ್ಳುವ ರೈತರ ಜಮೀನುಗಳಿಗೆ ತಾರತಮ್ಯ ತೊರದೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ದರ ನಿಗದಿಪಡಿಸಿ ವಿರತಣೆ ಮಾಡಬೇಕು ಹಾಗೂ ತಾಲೂಕಿನಲ್ಲಿ ಕಳೆದ ೪೦ ವರ್ಷಗಳಿಂದ ಉಳುಮೇ ಮಾಡಿಕೊಂಡು ಬಂದಿರುವ ಬಗರ್‌ಹುಕುಂ ಸಾಗುವಳಿ ದಾರರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು, ಕಳೆದ 2018 ರಲ್ಲಿ ರೈತರಿಗೆ ಬಗರ್‌ಹುಕುಂ ಸಾಗವಳಿ ಹಕ್ಕು ಪತ್ರ ವಿತರಿಸಲಾಗಿತ್ತು ಆದರೆ ನಂತರ ಹಕ್ಕು ಪತ್ರ ವಿತರಿಸಲಾಗುತ್ತಿಲ್ಲಿ ತಾಲೂಕಿನಲ್ಲಿ ಉತ್ತಮ ತಹಶೀಲ್ದಾರ್ ನೇಮಕವಾಗಿದ್ದು ಬಗರ್ ಹುಕುಂ ಸಮಿತಿ ರಚನೆಯಾಗಿ ಕಳೆದ 5 ತಿಂಗಳ ಹಿಂದೆ ಸಮಿತಿ ಸಭೆ ನಡೆಸಿದ್ದರೂ ಯಾವೊಬ್ಬ ರೈತರಿಗೂ ಸಾಗುವಳಿ ಚೀಟಿ ನೀಡಿಲ್ಲ, ಖಾತೆ ಮಾಡಿಲ್ಲ, ತಕ್ಷಣ ಸಂಭ್ರ ದಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಅವರು ಮೇಲ್ಕಂಡ ಬೇಡಿಕೆಗಳನ್ನು ಸರ್ಕಾರ ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ರಸ್ತೆತಡ, ಉಪವಾಸ ಸತ್ಯಗ್ರಹ, ವಿಧಾನಸೌಧ ಚಲೋ ಸೇರಿದಂತೆ ಉಗ್ರ ಹೋರಾಟದ ದಾರಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿ ಸರ್ಕಾರಕ್ಕೆ ೧೫ ದಿನಗಳ ಗಡುವ ನೀಡಿದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಸಂಚಾಲಕ ತೋಗರಿಘಟ್ಟ ಟಿ.ಹೆಚ್.ಸಂಜೀವರೆಡ್ಡಿ, ಕೋಡಗದಾಲ ಎಂ.ಲೋಕೇಶ್‌ಕುಮಾರ್, ಹೊನ್ನಾರನಹಳ್ಳಿ ರವಿಕುಮಾರ್, ದಾಡಿವೆಂಕಟೇಶ್, ಮಾಜಿ ಜಿ.ಪಂ. ಅಧ್ಯಕ್ಷ ಜಾಲಿಗಿರಿ ಕೃಷ್ಣಮೂರ್ತಿ, ಶಿವರುದ್ರಯ್ಯ, ರೈತಸಂಘದ ನಯಾಜ್‌ಅಹಮದ್, ಮಂಜುನಾಥ್, ಪುಟ್ಟರಾಜು, ಕೊಡ್ಲಹಳ್ಳಿ ಲೋಕೇಶ್, ಕರಕಲುಘಟ್ಟಜಗದೀಶ್, ಧನುಂಜಯ್, ವೀರಣ್ಣ, ಬಸವರಾಜು, ರಾಘವೇಂದ್ರ, ದಾಸಗಿರಿಯಪ್ಪ, ರಂಗಣ್ಣ, ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರರ ರೈತ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.