ಕೊರಟಗೆರೆ : ದ್ವಿಚಕ್ರವಾಹನದಲ್ಲಿ ಬಿದ್ದು ಕಾಲು ಮುರಿದುಕೊಂಡ ಗಂಡನ ಆರೈಕೆ ಮಾಡಲು ಬೇಸರಗೊಂಡ ಹೆಂಡತಿ ಗಂಡ ಗಾಢನಿದ್ರೆಯಲ್ಲಿ ಮುಳುಗಿರುವ ಸಂದರ್ಭದಲ್ಲಿ ಚಾಕುವಿನಿಂದ 4-5 ಕಡೆ ಇರಿದು ಕೊಲೆಮಾಡಿರುವ ಹೃದಯ ವಿದ್ರಾವಕ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಸಿಎನ್ ದುರ್ಗಾ ಹೋಬಳಿಯ ಜಂಪೇನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಲೇ.ನರಸಪ್ಪನ ಮಗ ತಿಪ್ಪೆರಾಜು (60 ವರ್ಷ) ಕೊಲೆಯಾದ ದುರ್ದೈವಿಯಾಗಿದ್ದು, ಈತನ ಮಡದಿ ರತ್ನಮ್ಮ ಕೊಲೆಗೈದ ಆರೋಪಿಯಾಗಿದ್ದಾರೆ.
ಮೃತ ತಿಪ್ಪೇರಾಜು ಕಳೆದ ಮೂರು ತಿಂಗಳುಗಳ ಹಿಂದೆ ದ್ವಿಚಕ್ರವಾಹನದಲ್ಲಿ ಬಿದ್ದು ಬಲಗಾಲು ಮುರಿತಕ್ಕೊಳಗಾಗಿದ್ದರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮನೆಗೆ ಬಂದ ಅವರು ಮಲಗಿದ್ದ ಜಾಗದಲ್ಲೇ ಇದ್ದ ತಿಪ್ಪೆರಾಜು ಮಲಗಿರುವ ಜಾಗದಲ್ಲೇ ಮಲ-ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದರಿಂದ ಮಡದಿ ರತ್ನಮ್ಮನಿಗೆ ಗಂಡನ ಆರೈಕೆ ಮಾಡುವಲ್ಲಿ ಬೇಸರಗೊಂಡು ಪ್ರತಿದಿನ ಗಲಾಟಿ ಮಾಡಿಕೊಂಡು ನೀನು ಅಪಘಾತದಲ್ಲಿ ಸಾಯಬಾರದಾಗಿತ್ತೇ ನಮ್ಮನ್ನು ಗೋಳುಹೊಯ್ದುಕೊಳ್ಳಲು ಭಗವಂತ ನಿನ್ನನ್ನು ಬದುಕಿಸಿದ್ದಾನೆಯೇ … ಎಂದು ಬೇಸರಗೊಂಡು ಗಂಡನನ್ನ ಬಾಯಿಗೆ ಬಂದಂತೆ ಬೈದುಕೊಳ್ಳುತಿದ್ದುದ್ದಲ್ಲದೆ ನಿನ್ನನ್ನ ಇಷ್ಟರಲ್ಲಿ ಸಾಯಿಸುತ್ತೇನೆ ಎಂದು ಬಹಳಷ್ಟು ಸಾರಿ ಮಗನ ಮುಂದೆಯೇ ಗಂಡನಿಗೆ ಬೈಯುತ್ತಿದ್ದಳು ಎನ್ನಲಾಗಿದೆ.
ಇದನ್ನೂ ಓದಿ : ಕುಷ್ಟಗಿ : ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಜೀಪ್ : ಓರ್ವ ಸಾವು, ಮೂವರಿಗೆ ಗಂಭೀರ ಗಾಯ
ಮೃತ ತಿಪ್ಪೇರಾಜು ಮಗ ವೇಣುವಿನ ಮನೆಯಲ್ಲಿ ವಾಸವಿದ್ದು, ವೇಣು ಅಡುಗೆಭಟ್ಟನಾಗಿ ಕಾರ್ಯನಿರ್ವಹಿಸುತ್ತಿದ್ದು ತಂದೆ ಸಾವಿಗೀಡಾದ ಸಂದರ್ಭದಲ್ಲಿ ಸಹ ಪಟ್ಟಣದ ಸುವರ್ಣಮುಖಿ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ದಲ್ಲಿ ಅಡುಗೆಭಟ್ಟನಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು, ತಾಯಿ ತಂದೆಯ ಆರೈಕೆಯಲ್ಲಿ ನಿರ್ಲಕ್ಷ ತೋರಿದಾಗ ನಾನು ದುಡಿದು ತಂದು ಮನೆ ನಿಭಾಯಿಸಿದ್ದೇನೆ ನೀವು ಗಂಡ ಹೆಂಡತಿ ಅಡುಗೆ ಮಾಡಿಕೊಂಡು ಊಟ ಮಾಡಿಕೊಂಡು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲವೇ, ಅಪ್ಪ ಅನಿವಾರ್ಯವಾಗಿ ಬಿದ್ದು ಕಾಲು ಮುರಿದುಕೊಂಡರುತ್ತಾನೆ ಅವರು ದುಡಿದು ನಮ್ಮನ್ನೆಲ್ಲ ಸಾಕಿಲ್ಲವೇ ಎಂದು ತಾಯಿಯನ್ನ ಬೈದು ಬುದ್ಧಿ ಹೇಳುತ್ತಿದ್ದ ಎನ್ನಲಾದರೂ ತಾಯಿ ಮಾತ್ರ ಗಂಡ ಆರೈಕೆ ಮಾಡಲಾಗದೆ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ : ಕುಷ್ಟಗಿ : ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಜೀಪ್ : ಓರ್ವ ಸಾವು, ಮೂವರಿಗೆ ಗಂಭೀರ ಗಾಯ
ಕೊಲೆಯ ಘಟನೆಯ ವಿವರ
ಗಂಡ- ಹೆಂಡತಿ ದಾಂಪತ್ಯ ಜೀವನ ಸುಖಕರವಾಗಿರುವ ಸಂದರ್ಭದಲ್ಲಿ ಇಳಿವಯಸ್ಸಿನಲ್ಲಿ ನೆಮ್ಮದಿಯಿಂದ ಇರಬೇಕಾದಂತಹ ಜೀವಗಳು ವ್ಯತಿರಿಕ್ತವಾಗಿ ಗಂಡನನ್ನು ಆರೈಕೆ ಮಾಡಬೇಕಾದಂತಹ ಹೆಂಡತಿ ಗಂಡ ಗಾಢನಿದ್ರೆಯಲ್ಲಿ ಮಲಗಿರುವಂತ ಮಧ್ಯರಾತ್ರಿಯಲ್ಲಿ ಹರಿತವಾದ ಚೂರಿಯಿಂದ ಗಂಡನ ಎದೆಯ ಭಾಗ, ತಲೆಭಾಗ ಹಾಗೂ ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿ ಗಾಬರಿಯಿಂದ ಬೆಳಿಗ್ಗೆವರೆಗೂ ಹೆಂಡತಿ ಓಡಾಡುತ್ತಿರುವುದನ್ನು ಗಮನಿಸಿದ ಪಕ್ಕದ ಮನೆಯವರು ಅನುಮಾನಗೊಂಡು ನೋಡಿದಾಗ ತಿಪ್ಪೇರಾಜು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಮಗನಿಗೆ ವಿಚಾರ ಹೇಳಿದ್ದಾರೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.