ಕೊರಟಗೆರೆ: ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಯೋಜನೆಗಳು ಕೊರಟಗೆರೆ ಕ್ಷೇತ್ರದ ಪ್ರತಿಮನೆಗೂ ತಲುಪಿವೆ. ಬಿಜೆಪಿ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬರೋದು ಖಚಿತ. ನನಗೇ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಕೊರಟಗೆರೆ ಕ್ಷೇತ್ರ, ಮಧುಗಿರಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಹೆಚ್.ಅನಿಲ್‌ಕುಮಾರ್ ಹೇಳಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರ ಪುರವಾರ ಹೋಬಳಿಯ ವೀರನಾಗೇನಹಳ್ಳಿ ಗ್ರಾಮದ ಶ್ರೀಆಂಜನೇಯ ಸ್ವಾಮಿಗೆ ಕೊರಟಗೆರೆ ಬಿಜೆಪಿ ಪಕ್ಷದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ವಿಶೇಷ ಪೂಜೆಯ ನಂತರ ಬಿಜೆಪಿ ಪಕ್ಷದ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಶ್ವನಾಯಕ ನರೇಂದ್ರ ಮೋದಿ ಮತ್ತು ನಮ್ಮ ರಾಜ್ಯದ ಮುಖ್ಯಮಂತ್ರಿ ನೀಡಿದ ಜನಪರ ಯೋಜನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆ. ಕೊರಟಗೆರೆ ಕ್ಷೇತ್ರವು ಕಳೆದ 30ವರ್ಷದಿಂದ ಅಭಿವೃದ್ದಿ ಆಗದೇ ಹಿಂದುಳಿದಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಅಧಿಕಾರದಲ್ಲಿದೆ. ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದರೇ ಅಭಿವೃದ್ದಿ ತಾನಾಗಿಯೇ ಆಗಲಿದೆ ಎಂದರು.
ಕೊರಟಗೆರೆ ಕ್ಷೇತ್ರದ ಪುರವಾರ ಹೋಬಳಿಯು ಕಳೆದ 30 ವರ್ಷದಿಂದ ಅಭಿವೃದ್ದಿ ಕಾಣದೇ ಸಮಸ್ಯೆಯಾಗಿದೆ. ಪ್ರತಿನಿತ್ಯ ವ್ಯಾಸಂಗಕ್ಕೆ ತೆರಳಲು ಕನಿಷ್ಠ ಸರಕಾರಿ ಬಸ್ಸಿನ ಸೌಲಭ್ಯವು ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಜನರ ಸಮಸ್ಯೆ ಆಲಿಸಲು ರಾಜಕೀಯ ನಾಯಕರು ಸಿಗುತ್ತಿಲ್ಲ. ಡಬಲ್ ಇಂಜಿನ್ ಸರಕಾರದ ಅಭಿವೃದ್ದಿಯ ಮೂಲಮಂತ್ರವೇ ನನ್ನ ಮುಂದಿನ ಗುರಿಯಾಗಿದೆ ಎಂದರು.
ಕೊರಟಗೆರೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಜತೆ ನಮ್ಮ ಪಕ್ಷದ ನಾಯಕರು ಮಾತುಕತೆ ನಡೆಸಿದ್ದಾರೆ. ನಮ್ಮ ನಾಯಕರಿಂದ ಬಂಡಾಯ ಅಭ್ಯರ್ಥಿಗಳ ಮನವೋಲಿಕೆ ಪ್ರಯತ್ನ ನಡೆದಿದೆ. ವಿರೋಧ ಪಕ್ಷಗಳ ಬ್ರಹ್ಮಾಸ್ತ್ರ ಈ ಸಲ ಕೊರಟಗೆರೆ ಕ್ಷೇತ್ರದಲ್ಲಿ ನಡೆಯೋದಿಲ್ಲ. ನಮ್ಮ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆಗೂಡಿ ನಾವು ಕೊರಟಗೆರೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಕೊರಟಗೆರೆ ಕ್ಷೇತ್ರದ ಅಭಿವೃದ್ದಿ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಖಜಾಂಚಿ ಹನುಮಂತರಾಜು, ರೈತಮೋರ್ಚ ಅಧ್ಯಕ್ಷ ವಿಶ್ವನಾಥ, ಕೊರಟಗೆರೆ ಮಂಡಲ ಅಧ್ಯಕ್ಷ ಪವನಕುಮಾರ್, ಯುವಧ್ಯಕ್ಷ ಅರುಣ್.ಕೆ.ಎಸ್,ಮುಖಂಡರಾದ ಜಿ.ವೆಂಕಟಾಚಲಯ್ಯ, ದಾಸಾಲುಕುಂಟೆ ರಘು, ದಾಡಿವೆಂಕಟೇಶ್, ಪುರವಾರ ಲೊಕೇಶ್, ಗೋವಿಂದರಾಜು, ರವಿವರ್ಮ, ಶಿವರುದ್ರಯ್ಯ ಸೇರಿದಂತೆ ಇತರರು ಇದ್ದರು.