ಕೊಪ್ಪಳ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗೆ ಒತ್ತಾಯಿಸಿ ಪರಿಶಿಷ್ಟ ಜಾತಿಯ ವಕೀಲರ ಸಂಘದಿಂದ ಅ.23ರ ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಶೋಷಿತ ಸಮುದಾಯ ಎಂದೇನಿಸಿದ ಪರಿಶಿಷ್ಟ ಜಾತಿಯಲ್ಲಿ ಹಲವು ಉಪ ಪಂಗಡಗಳಿದ್ದು, ಸಮುದಾಯಕ್ಕೆ ಒಳ ಮೀಸಲಾತಿ ಕೊಡಬೇಕೆಂದು ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಸಹಿತ ಸರ್ಕಾರ ಈ ವರೆಗೂ ಒಳ ಮೀಸಲಾತಿ ಕೊಡುತ್ತಿಲ್ಲ. ಸುಪ್ರೀಂ ಕೋರ್ಟ್ ಸಹಿತ ಒಳ ಮೀಸಲು ಕೊಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ತೀರ್ಪು ನೀಡಿ ಎರಡು ತಿಂಗಳ ಗತಿಸಿದರೂ ಸಹಿತ ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯ ಅವರು ನ್ಯಾಯಮೂರ್ತಿ ಎ. ಜೆ ಸದಾಶಿವ ಆಯೋಗದ ವರದಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಈ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಪರಿಶಿಷ್ಟ ಜಾತಿಯ ದಲಿತ ಮಾದಿಗ, ಲಂಬಾಣಿ ಎಲ್ಲ ಸಮುದಾಯಗಳಿಗೂ ಒತ್ತಾಯಿಸಿ ಪರಿಶಿಷ್ಟ ಜಾತಿಯ ವಕೀಲರ ಒಕ್ಕೂಟವು ನಗರದ ಬಸವೇಶ್ವರ ವೃತ್ತದಿಂದ ಡಿಸಿ ಕಚೇರಿಯ ವರೆಗೂ ಬಿತ್ತಿ ಪತ್ರಗಳ ನಡೆದು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದರು.