Advertisement

Koppala; ತುಂಗಭದ್ರಾ ಡ್ಯಾಮ್ ನಿಂದ ಲಕ್ಷಕ್ಕಿಂತ ಹೆಚ್ಚು ಕ್ಯೂಸೆಕ್ ನೀರು ನದಿ ಪಾತ್ರಕ್ಕೆ

09:57 AM Aug 11, 2024 | Team Udayavani |

ಕೊಪ್ಪಳ: ಲಕ್ಷಾಂತರ ರೈತರ ಜೀವನದಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಮುರಿದ ಹಿನ್ನೆಲೆಯಲ್ಲಿ ಡ್ಯಾಮ್ ನಿಂದ ನದಿ ಪಾತ್ರಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಹೋಗುತ್ತಿದ್ದು, ಇದು ನದಿ ಪಾತ್ರದ ಕೆಳಭಾಗದ ರೈತರಲ್ಲಿ ಭಾರಿ ಆತಂಕವನ್ನೇ ಸೃಷ್ಟಿ ಮಾಡಿದೆ.

Advertisement

ತುಂಗಭದ್ರಾ ಗೇಟ್ ಮುರಿದ ತಕ್ಷಣ ಡ್ಯಾಂ ನೀರಾವರಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ ಸೇರಿ ಇತರೆ ಅಧಿಕಾರಿಗಳು ರಾತ್ರಿಯಿಡಿದ್ದು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ನೀರಿನ ರಭಸಕ್ಕೆ ತುಂಗಭದ್ರಾ ಡ್ಯಾಮ್ ಅದಿರುತ್ತಿದ್ದು ಇದರಿಂದಾಗಿ ಜನರಲ್ಲಿ ಆತಂಕ ಸೃಷ್ಟಿಸಿದೆ.

ಡ್ಯಾಮ್ ಪ್ರವೇಶ ನಿರ್ಬಂಧ

ತುಂಗಭದ್ರಾ ಡ್ಯಾಮ್ ಗೇಟ್ ಚೈನ್ ಕಟ್ ಆದ ಹಿನ್ನೆಲೆಯಲ್ಲಿ ತುಂಗಭದ್ರಾ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಡ್ಯಾಮ್ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.

Advertisement

ಡ್ಯಾಂ ಸ್ಥಳಕ್ಕೆ ತಜ್ಞರ ತಂಡ ಭೇಟಿ ನಿರೀಕ್ಷೆ

ಗೇಟ್ ಚೈನ್ ಕಟ್ಟಾದ ಕುರಿತಂತೆ ಬೆಂಗಳೂರು ಹೈದರಾಬಾದ್ ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳ ನೀರಾವರಿ ತಜ್ಞರನ್ನು ಸಂಪರ್ಕ ಮಾಡಿದ್ದು ಅವರಿಂದ ಸಲಹೆ ಪಡೆಯುವ ಜೊತೆಗೆ ಡ್ಯಾಮ್ ಸ್ಥಳಕ್ಕೆ ಆಗಮಿಸುವಂತೆ ಈಗಾಗಲೇ ಅಧಿಕಾರಿಗಳು ಮನವಿ ಮಾಡಿದ್ದಾರೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ರಾಜ್ಯ ಜಲಸಂಪನ್ಮೂಲ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು ವಿಶೇಷ ತಜ್ಞರ ತಂಡವು ಸಹಿತ ಡ್ಯಾಮ್ ಸ್ಥಳಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಡ್ಯಾಮ್ ತಳದಲ್ಲಿ ವಿವಿಧ ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next