Advertisement

ತಿಮ್ಮಪ್ಪ ಟ್ರಸ್ಟ್‌ಗೆ ಗವಿಶ್ರೀಗಳ ಅಭಯ

10:13 PM Jul 11, 2021 | Team Udayavani |

ಕೊಪ್ಪಳ: ಪರಿಸರ, ಶಿಕ್ಷಣ, ಐತಿಹಾಸಿಕ ಸ್ಮಾರಕಗಳು ಮತ್ತು ಕೆರೆ ಸಂರಕ್ಷಣೆ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಶ್ರೀ ತಿರುಗಲ್‌ ತಿಮ್ಮಪ್ಪ, ಲಕ್ಷ್ಮೀದೇವಿ, ತೇರಿನ ಹನುಮಪ್ಪ ದೇವಸ್ಥಾನ ಟ್ರಸ್ಟ್‌ ಕಮಿಟಿಗೆ ಕೊಪ್ಪಳ ಗವಿಮಠದ ಅಭಿನವ ಗವಿಶ್ರೀಗಳು ಅಭಯ ನೀಡಿ ಆಶೀರ್ವದಿಸಿದರು.

Advertisement

ಟ್ರಸ್ಟ್‌ ಕಮಿಟಿ ಅಧ್ಯಕ್ಷ ವೀರಣ್ಣ ಕೋಮಲಾಪುರ, ಉಪಾಧ್ಯಕ್ಷ ಸಿದ್ಧರಾಮಪ್ಪ ಭಟ್ಟರ್‌ ಸಿಳ್ಳೆಕ್ಯಾತರ್‌ ಮತ್ತು ಪ್ರಧಾನ ಕಾರ್ಯದರ್ಶಿ ವಸಂತ್‌ ಸಿಳ್ಳೆಕ್ಯಾತರ್‌ ಅವರು ಇತರೆ ಪದಾಧಿ ಕಾರಿಗಳೊಂದಿಗೆ ಗವಿಶ್ರೀಗಳನ್ನು ಭೇಟಿಯಾಗಿ ಟ್ರಸ್ಟ್‌ನ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಆಶೀರ್ವದಿಸುವಂತೆ ಪ್ರಾರ್ಥಿಸಿದರು. ಕೆರೆಹಳ್ಳಿ- ಸುಲ್ತಾನಪುರದ ಐತಿಹಾಸಿಕ ತೇರಿನ ಹನುಮಪ್ಪ, ತಿರುಗಲ್‌ ತಿಮ್ಮಪ್ಪ ಮತ್ತು ಲಕ್ಷ್ಮೀದೇವಿ ಮಂದಿರಗಳ ಜೀರ್ಣೋದ್ಧಾರ, ಕೋಟೆ-ಕೊತ್ತಲಗಳ ದುರಸ್ತಿ, ಮಂದಿರಕ್ಕೆ ತೆರಳಲು ರಸ್ತೆ ಮತ್ತು ಪಾವಟಿಗೆ ನಿರ್ಮಾಣ, ಐತಿಹಾಸಿಕ ಕೊಳ್ಳಿನ ಕೆರೆ ಅಭಿವೃದ್ಧಿ ಕುರಿತಂತೆ ಟ್ರಸ್ಟ್‌ ಪದಾ ಧಿಕಾರಿಗಳು ಶ್ರೀಗಳೊಂದಿಗೆ ಚರ್ಚಿಸಿದರು. ಟ್ರಸ್ಟ್‌ ಪದಾ ಧಿಕಾರಿಗಳು ಕೈಗೊಳ್ಳುವ ಪರಿಸರ, ಶಿಕ್ಷಣ, ಐತಿಹಾಸಿಕ ಸ್ಮಾರಕಗಳು ಮತ್ತು ಕೆರೆ ಸಂರಕ್ಷಣೆಗೆ ಬೇಕಾದ ಎಲ್ಲ ರೀತಿಯ ನೆರವು ಮತ್ತು ಸಹಕಾರ ನೀಡುವುದಾಗಿ ಶ್ರೀಗಳು ಅಭಯ ನೀಡಿದರು.

ಈ ವೇಳೆ ಶಹಪುರ ಗ್ರಾಮದ ಅನಿವಾಸಿ ಭಾರತೀಯ ಗೋಪಾಲ್‌ ವಾಕೋಡೆ ಅವರ ಸಾಧನೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಶ್ರೀಗಳು, ಗೋಪಿಯ ಸಾಧನೆ ಪತ್ರಿಕೆ- ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಹಳ್ಳಿಗಾಡಿನಿಂದ ಹೊಟ್ಟೆ ಹೊರೆಯಲು ಪೋಷಕರೊಂದಿಗೆ ತೆರಳಿದ ಬಾಲಕ ಇಂದು ಬ್ರಿಟನ್‌ ದೇಶದ ಸೈನಿಕನಾಗಿ ಅಲ್ಲಿನ ಜನರ ಪ್ರೀತಿ ಸಂಪಾದಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದರು. ಕೆರೆಹಳ್ಳಿ ಗ್ರಾಮದ ಮಹೇಶ ಆರೇರ, ಶಹಪುರ ಗ್ರಾಮದ ನಾಗರಾಜ ತೋಟದ ಸೇರಿದಂತೆ ಟ್ರಸ್ಟ್‌ನ ಇತರೆ ಪದಾಧಿ ಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next