Advertisement

Koppala; ಬಿಜೆಪಿಯವರು ಸುಳ್ಳಿನ ಗಿರಾಕಿಗಳು: ಸಚಿವ ಶಿವರಾಜ ತಂಗಡಗಿ

01:17 PM Mar 01, 2024 | Team Udayavani |

ಕೊಪ್ಪಳ: ನಮಗೆ ಮೊದಲು ದೇಶ, ಆ ಮೇಲೆ ಪಕ್ಷ. ಆದರೆ ಬಿಜೆಪಿಯವರಿಗೆ ಮೊದಲು ಪಕ್ಷ, ಆಮೇಲೆ ದೇಶನೂ ಇಲ್ಲ ಬರೀ ಮೋದಿ. ಬಿಜೆಪಿಯವರು ಜನರು ಮನಸ್ಸು ಕೆಡಿಸಲು ಹೊರಟಿದ್ದಾರೆ. ಜನರ ಮನಸ್ಸು ಕೆಡಲು ಸಾಧ್ಯವಿಲ್ಲ. ಜನರಿಗೂ ಬಿಜೆಪಿ ಬಗ್ಗೆ ಗೊತ್ತಾಗಿದೆ. ಇವರು ಸುಳ್ಳರು, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಜನರಿಗೆ ಗೊತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

Advertisement

ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಸಿಕ್ಕರೆ ನನ್ನ ಬಳಿ ಕರೆಯಿರಿ. ಒಂದು ರೂಪಾಯಿಗೆ 15 ಡಾಲರ್ ಬರುತ್ತದೆಂದು ಹೇಳಿದ್ದರು. ಇದೀಗ 1 ರೂ.ಗೆ 84 ಡಾಲರ್  ಆಗಿದೆ. ಬಿಜೆಪಿಯವರು ಒಂದು ದೊಡ್ಡದು ಸುಳ್ಳಿನ ಫ್ಯಾಕ್ಟರಿ ಕಟ್ಟಿಸಿದ್ದಾರೆ. ಆ ಸುಳ್ಳಿನ ಫ್ಯಾಕ್ಟರಿಯಲ್ಲಿ ಟ್ರೈನಿಂಗ್ ಆದ ಗಿರಾಕಿಗಳು ಈ ಬಿಜೆಪಿಯವರು. ಸಿ.ಟಿ.ರವಿ ಸೇರಿದಂತೆ ಎಲ್ಲ ನಾಯಕರು ಸುಳ್ಳಿನ ಫ್ಯಾಕ್ಟರಿಯಲ್ಲಿ ಟ್ರೈನಿಂಗ್ ಪಡೆದ ಗಿರಾಕಿಗಳು ಎಂದು ಟೀಕಿಸಿದರು.

ಜಾತಿ ಗಣತಿ ವರದಿ ಸ್ವೀಕಾರ ವಿಚಾರವಾಗಿ ಮಾತನಾಡಿದ ಅವರು, ವರದಿಯನ್ನು ಯಾರೂ ಸಹ ಓದಿಲ್ಲ. ವರದಿ ಓದಲಾರದೆ ಯಾಕೆ ವಿರೋಧ ಮಾಡುತ್ತಾರೆ. ಸಾರ್ವಜನಿಕರ ಮುಂದೆ ವರದಿ ತಂದು ಚರ್ಚೆ ಮಾಡುತ್ತೇವೆ. ಸಚಿವ ಸಂಪುಟದಲ್ಲಿ ವರದಿ ಬಗ್ಗೆ ಚರ್ಚೆಯಾಗುತ್ತದೆ. ವರದಿಯನ್ನು ಓದಲಾರದೆ ಅವೈಜ್ಞಾನಿಕವೆಂದು ಹೇಳುವುದು ತಪ್ಪು. 168 ಕೋಟಿ ಖರ್ಚು ಮಾಡಿ ವರದಿ ಮಾಡಲಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ವರದಿ ಮಾಡಿದೆ. ಕೇವಲ ಜಾತಿಗಣತಿಗೆ ವರದಿ ಸೀಮಿತವಾಗಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿಗಳಿಗೆ ವಿಶ್ವಾಸ ತೋರಿಸುವ ಪಕ್ಷ. ಅಹಿಂದ ಮಾತ್ರವಲ್ಲ, ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸೇರಿದಂತೆ ಎಲ್ಲಾ ಜಾತಿಗಳಿರುವ ಪಾರ್ಟಿ ಕಾಂಗ್ರೆಸ್. ನಾನು ಬಿಜೆಪಿ ಬಗ್ಗೆ ನುಡಿದ ಭವಿಷ್ಯ ನಿಜವಾಗುತ್ತಿದೆ ಎಂದರು.

ಚುನಾವಣೆ ಬಂದಾಗ ಬಿಜೆಪಿಯವರಿಗೆ ನೆನಪಾಗುವುದು ಪಾಕಿಸ್ತಾನ. ಚುನಾವಣೆ ಬಂದಾಗ ನೆನಪಾಗುವುದು ರಾಮ, ಆಂಜನೇಯ, ಪಾಕಿಸ್ತಾನ. ಚುನಾವಣೆ ಮುಗಿದ ಮೇಲೆ ಶ್ರೀರಾಮ, ಆಂಜನೇಯ, ಪಾಕಿಸ್ತಾನವೂ ಬಿಜೆಪಿಗೆ ನೆನಪು ಆಗುವುದಿಲ್ಲ. ವಿಧಾನಸೌದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ತಪ್ಪು. ಅದನ್ನು ನಾವು ಪಾಲನೆ, ಪೋಷಣೆ ಮಾಡುವುದಿಲ್ಲ. ಯಾರೇ ಕೂಗಿದರೂ ಶಿಕ್ಷೆಗೆ ಗುರಿ ಪಡಿಸುತ್ತೇವೆ. ಬಿಜೆಪಿ ದೇಶ ಭಕ್ತಿಯ ಬಗ್ಗೆ ನಮಗೇನು ಹೇಳೂವುದು ಅವಶ್ಯಕತೆಯಿಲ್ಲ. ಬಿಜೆಪಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಯಾರಾದರೂ ನಾಯಕರು ಇದ್ದಾರಾ? ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ಬಿಜೆಪಿಯ ಒಬ್ಬರೂ ಇಲ್ಲ. ಕಾಂಗ್ರೆಸ್ ನಲ್ಲಿ ಮಾತ್ರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಇದ್ದಾರೆ ಎಂದು ತಂಗಡಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next