ಕೊಪ್ಪಳ: ಜಿಲ್ಲೆಯಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿರುವ ತೋಟಗಾರಿಕೆಯ ಪಾರ್ಕ್‌ಗೆ ಶಕ್ತಿಯೇ ಸಿಗುತ್ತಿಲ್ಲ. ಇದರಿಂದ ವರ್ಷಗಳಿಂದ ಪಾರ್ಕ್ ಆರಂಭಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಯೋಜನೆಗೆ ಇತ್ತ ಜಮೀನು ಇಲ್ಲ, ಅತ್ತ ಅನುದಾನವೂ ಇಲ್ಲದಾಗಿ ಮಧ್ಯಂತರ ಸ್ಥಿತಿಯಲ್ಲಿದೆ. ಇದು ಜಿಲ್ಲೆ ಜನರಲ್ಲಿ ನಿರಾಸೆ ತರಿಸುತ್ತಿದೆ.
Advertisement
ಕೊಪ್ಪಳ ಕ್ಷೇತ್ರ ಏಳೆಂಟು ವರ್ಷಗಳಿಂದ ತೋಟಗಾರಿಕೆ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆ ಕಂಡಿದೆ. ಕೃಷಿಯ ಜೀವನ ಕ್ರಮೇಣತೋಟಗಾರಿಕೆಯತ್ತ ಸಾಗುತ್ತಿದ್ದು, ರೈತಾಪಿ ವಲಯವೂ ಹೆಚ್ಚಿನ ಆಸಕ್ತಿ ತೋರುತ್ತಿದೆ. ಈ ಭಾಗದಲ್ಲಿ ಜನರಿಗೆ ತೋಟಗಾರಿಕೆಯ
ಉತ್ಪನ್ನದ, ವಿವಿಧ ತರಬೇತಿ, ಕಾರ್ಯಾಗಾರ, ಸಂಶೋಧನೆಗಳು, ವಿವಿಧ ಮಾರುಕಟ್ಟೆ ಸೌಲಭ್ಯ ಸೇರಿದಂತೆ ಸಮಗ್ರತೆ ಒಳಗೊಂಡ ತೋಟಗಾರಿಕೆ ಪಾರ್ಕ್‌ನ ಸೌಲಭ್ಯ ದೊರೆಯಲಿ ಎಂಬ ಕಾರಣಕ್ಕಾಗಿ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್ ನಲ್ಲಿ ಕನಕಗಿರಿ ತಾಲೂಕಿನ ಸಿರವಾರ ಬಳಿ ತೋಟಗಾರಿಕೆ ಪಾರ್ಕ್ ಮಾಡುವುದಾಗಿ ಘೋಷಣೆ ಮಾಡಿದ್ದರು.
ಸರ್ಕಾರದಿಂದ ನಡೆದಿಲ್ಲ. ಈ ಯೋಜನೆಗೆ ಕನಿಷ್ಟ 150ರಿಂದ 200 ಎಕರೆ ಜಮೀನು ಬೇಕಾಗುತ್ತದೆ. ಇದಕ್ಕೆ ಸರ್ಕಾರದಿಂದ ಯಾವುದೇ ಭೂ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಇದರಿಂದಾಗಿ ಈ ಪಾರ್ಕ್ ಗಗನ ಕುಸುಮ ಎನ್ನುವಂತಾಗುತ್ತಿದೆ.
Related Articles
ಈ ಪಾರ್ಕ್‌ಗೆ ಅನುದಾನ ಸಿಗುವುದೇ ಅನುಮಾನ ಎಂದು ಜನತೆಯೂ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
Advertisement
ಒಟ್ಟಿನಲ್ಲಿ ಸರ್ಕಾರವೇ ಘೋಷಣೆ ಮಾಡಿರುವ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್‌ಗೆ ಶಕ್ತಿಯೇ ಇಲ್ಲದಾಗಿದೆ. ಹೀಗಾಗಿ ಮುಂದೆಯೂ ಹೋಗದೆ, ಹಿಂದೆಯೂ ಬೀಳದೇ ಮಧ್ಯಂತರ ಸ್ಥಿತಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಸ್ವಕ್ಷೇತ್ರದಲ್ಲಿಯೇ ಈ ಪಾರ್ಕ್ ಘೋಷಣೆಯಾಗಿದ್ದು, ಇದಕ್ಕೆ ಆಸಕ್ತಿ ವಹಿಸಬೇಕಿದೆ.
ಜಿಲ್ಲೆಯ ಕನಕಗಿರಿ ತಾಲೂಕಿನ ಸಿರವಾರ ಬಳಿ ತೋಟಗಾರಿಕೆ ಪಾರ್ಕ್ ಘೋಷಣೆ ಮಾಡಲಾಗಿದೆ. ಆದರೆ ಈವರೆಗೂ ಅದು ಏನೂಪ್ರಗತಿ ಕಂಡಿಲ್ಲ. ಒಂದು ಸರ್ಕಾರವು ಘೋಷಣೆ ಮಾಡಿದ ಮೇಲೆ ಇನ್ನೊಂದು ಸರ್ಕಾರ ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಪಾರ್ಕ್ ಬಂದಿದೆ. ಸರ್ಕಾರವು ಅದಕ್ಕೆ ಒತ್ತು ಕೊಡಲಿ.
ಎಸ್.ಎ.ಗಫಾರ, ಹೋರಾಟಗಾರರು *ದತ್ತು ಕಮ್ಮಾರ