Advertisement

ಕೊಪ್ಪಳ: ವಿಪರೀತ ಮಳೆ; ಮನೆ ಗೋಡೆ ಕುಸಿದು ವೃದ್ದೆ ಸಾವು

10:41 PM Oct 15, 2020 | mahesh |

ಕೊಪ್ಪಳ: ಜಿಲ್ಲೆಯಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಕುಸಿದು ವೃದ್ದೆ ಮೃತಪಟ್ಟ ಘಟನೆ ಕೊಪ್ಪಳ ತಾಲೂಕಿನ ಟಣಕನಕಲ್‌ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

Advertisement

ಮೃತ ವೃದ್ದೆಯನ್ನು ಈರಮ್ಮ ಪಕೀರಪ್ಪ ಮೆಳ್ಳಿಕೇರಿ(75) ಎಂದು ಗುರುತಿಸಲಾಗಿದೆ.‌

ಕಳೆದ ಕೆಲವು ದಿನಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಅತಿಯಾದ ಮಳೆ‌ ಸುರಿಯುತ್ತಿರುವ ಪರಿಣಾಮ ಮನೆ ಗೋಡೆಗಳು ನೆನೆದು ಬೀಳುತ್ತಿವೆ. ಗುರುವಾರ ರಾತ್ರಿ ಮನೆಯಲ್ಲಿ ಕುಳುತಿದ್ದ ಅಜ್ಜಿ ಪಕೀರಮ್ಮನ ಮೇಲೆ ಗೋಡೆ ಕುಸಿದ ಪರಿಣಾಮ ವೃದ್ದೆ ಸ್ಥಳದಲ್ಲಿ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಕೊಪ್ಪಳ ತಹಸೀಲ್ದಾರ ಜೆ ಬಿ ಮಜ್ಜಗಿ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.‌ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next