Advertisement

777 ಚಾರ್ಲಿಗೆ ಕೊಂಕಣಿ ಹಾಡು

02:51 PM Nov 19, 2021 | Team Udayavani |

ಸದ್ಯ ರಕ್ಷಿತ್‌ ಶೆಟ್ಟಿ ಅಭಿನಯದ “777 ಚಾರ್ಲಿ’ ತೆರೆಗೆ ಬರುವ ತಯಾರಿಯಲ್ಲಿದೆ. ಒಂದೆಡೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಮತ್ತೂಂದೆಡೆ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೂ ಚಾಲನೆ ನೀಡಿದೆ. ಇದರ ನಡುವೆಯೇ “777 ಚಾರ್ಲಿ’ ಚಿತ್ರದ ಕಡೆಯಿಂದ ಮತ್ತೂಂದು ಹೊಸ ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಚಿತ್ರದಲ್ಲಿ ಕೊಂಕಣಿ ಭಾಷೆಯ ಹಾಡೊಂದು ಇರಲಿದೆಯಂತೆ!

Advertisement

ಹೌದು, ಸುಮಾರು 4 ವರ್ಷದ ಹಿಂದೆ ನಿರ್ದೇಶಕ ಕಿರಣ್‌ ರಾಜ್‌ ಕೆ. “777 ಚಾರ್ಲಿ’ಯ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾಗ, ಹೈಸ್ಕೂಲ್‌ ಹುಡುಗಿಯೊಬ್ಬಳು ಗಿಟಾರ್‌ ವಾದಕನೊಂದಿಗೆ ರಸ್ತೆ ಬದಿಯಲ್ಲಿ ಕೊಂಕಣಿ ಭಾಷೆಯಲ್ಲಿ ಹಾಡುತ್ತಿದ್ದ ವಿಡಿಯೋವೊಂದನ್ನು ನೋಡಿದ್ದರಂತೆ. ಇದರಿಂದ ಪ್ರೇರಿತ ರಾದ ಕಿರಣ್‌ ರಾಜ್‌, ತಮ್ಮ “777 ಚಾರ್ಲಿ’ ಚಿತ್ರದಲ್ಲಿ ಕೂಡ ಮುಖ್ಯ ಪಾತ್ರಗಳು ದೇಶಾದ್ಯಂತ ಪ್ರಯಾಣಿಸುವ ಸಂದರ್ಭದಲ್ಲಿ ಬರುವಂತೆ ಕೊಂಕಣಿ ಹಾಡೊಂದನ್ನು ಸಂಯೋಜಿಸಿದರಂತೆ.  ಇನ್ನೊಂದು ವಿಶೇಷವೆಂದರೆ, ಸುಮಾರು ನಾಲ್ಕೂವರೆ ವರ್ಷಗಳ ನಂತರ, ಈ ಹಾಡನ್ನು ಹಾಡಲು ಚಿತ್ರತಂಡ ಅದೇ ಗಾಯಕಿ ಯನ್ನು ಸಂಪರ್ಕಿಸಿದೆ.

“ಈ ಹಾಡು ಚಿತ್ರಕ್ಕೆ ಪ್ರಾದೇಶಿಕ ಸ್ಪರ್ಶವನ್ನು ಕೊಟ್ಟು ಕಥೆಯನ್ನು ಮುನ್ನಡೆಸುವುದಲ್ಲದೆ, ಚಿತ್ರದ ಮುಖ್ಯ ಪಾತ್ರಗಳು ದೇಶದ ಬೇರೆ ಬೇರೆ ಕಡೆ ಪ್ರಯಾಣಿ ಸುತ್ತಾ ಹೋದಂತೆ ಆಯಾ ಜಾಗಗಳ ಸಂಸ್ಕೃತಿ, ವಿಸ್ತಾರ ಹಾಗೂ ಹಲವಾರು ಭಾಗಗಳನ್ನು ಪರಿಚಯಿಸುತ್ತದೆ’ ಎನ್ನುತ್ತದೆ ಚಿತ್ರತಂಡ.

ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ “ಓ ಗಾ…’ ಎಂಬ ಸ್ಟ್ರೀಟ್‌ ಸಾಂಗ್‌ ಹಿಪ್ಪಿ ಶೈಲಿಯಲ್ಲಿ ರೂಪುಗೊಂಡಿದೆ. ಜನಪ್ರಿಯ ಮಲಯಾಳಂ ಬ್ಯಾಂಡ್‌ “ಥೈಕ್ಕುಡಂ ಬ್ರಿಡ್ಜ್’ನ ಗಾಯಕ ವಿಯಾನ್‌ ಫೆರ್ನಾಂಡಿಸ್‌ ಈ ಹಾಡಿನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನೋಬಿನ್‌ ಪೌಲ್‌ ಅವರು ಸಂಗೀತ ಸಂಯೋಜಿಸಿದ ಈ ಹಾಡಿಗೆ ಧಿತಿ ಎಸ್‌. ಲೋಟ್ಲಿಕರ್‌ ಧ್ವನಿಯಾ ಗಿದ್ದು, ಸಾಯೇಶ್‌ ಪಾಯ್‌ ಪನಾಂಡಿಕರ್‌ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಶೀಘ್ರದ ಲ್ಲಿಯೇ “777 ಚಾರ್ಲಿ’ಯ ಈ ಕೊಂಕಣಿ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಳ್ಳುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next