Advertisement

ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ:ಅಮೃತ ಮಹೋತ್ಸವ 

03:49 PM Aug 22, 2017 | |

ಮುಂಬಯಿ: ಮಾತೃಭಾಷೆ ಮನುಕುಲದ ತಾಯಿಬೇರು ಆಗಿದೆ. ನಮ್ಮ ಮೂಲ ಪರಂಪರೆ, ಸಂಸ್ಕೃತಿ ಏನಿದ್ದರೂ ಅದರ ಮೂಲಸ್ವರೂಪ ಮಾತೃ ಭಾಷೆಯೇ ಆಗಿರುತ್ತದೆ. ವ್ಯವಹಾರ ಮತ್ತು ಬದುಕು ಸುಂದರೀಕರಣಕ್ಕಾಗಿ ಎಷ್ಟು ಭಾಷೆಗಳನ್ನು ಅಭ್ಯಾಸ  ಮಾಡಿದರೂ ಒಳಿತೇ. ಆದರೆ ಮಾತೃ ಭಾಷೆ ವ್ಯಕ್ತಿಯ ವೈಭವೀಕರಣದ ಶಕ್ತಿಯಾಗಿರುತ್ತದೆ. ಅದಕ್ಕಾಗಿ ನಾವು ಎಂದಿಗೂ ತಾಯಿ ಭಾಷೆಯನ್ನು ಮಾತನಾಡಲು ಹಿಂಜರಿಯ ಬಾರದು ಎಂದು ರಾಯನ್‌ ಅಂತಾರಾಷ್ಟ್ರೀಯ ಶಿಕ್ಷಣ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್‌ ಪಿಂಟೊ ಕರೆಯಿತ್ತರು.

Advertisement

ಆ. 20ರಂದು  ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ ತನ್ನ ಅಮೃತ ಮಹೋತ್ಸವ ಸಂಭ್ರಮ ಹಾಗೂ ರಾಷ್ಟ್ರೀಯ ಕೊಂಕಣಿ ದಿನಾಚರಣೆಯನ್ನು ಬೊರಿವಲಿ ಪಶ್ಚಿಮದ ಸೈಂಟ್‌ ಆ್ಯನ್ಸ್‌ ಹೈಸ್ಕೂಲ್‌ ಸಭಾಗೃಹದಲ್ಲಿ ಆಯೋಜಿಸಿದ್ದು, ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿ ಶುಭಹಾರೈಸಿದರು.

ಕೊಂಕ‌ಣಿ ಭಾಷಾ ಮಂಡಳ್‌ ಮಹಾರಾಷ್ಟ್ರ ಇದರ ಅಧ್ಯಕ್ಷ ಜೋನ್‌ ಡಿ’ಸಿಲ್ವಾ ಅವರ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂಭದಲ್ಲಿ  ಗೌರವ ಅತಿಥಿಗಳಾಗಿ ಶ್ಯಾಮರಾವ್‌ ವಿಠಲ್‌ ಕೋ. ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ನ‌ ಕಾರ್ಯಾಧ್ಯಕ್ಷ ಉದಯ ಕುಮಾರ್‌ ಪಿ. ಗುರ್ಕಾರ್‌, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ  ಪೂರ್ವಾಧ್ಯಕ್ಷ ರೋಯ್‌ ಕ್ಯಾಸ್ತೆಲಿನೋ ಸೇರಿದಂತೆ ಭಾಷಾ ಮಂಡಳ್‌ನ ಉಪಾಧ್ಯಕ್ಷ ಆಲ್ಬರ್ಟ್‌ ಡಬ್ಲೂ$Â. ಡಿ’ಸೋಜಾ, ಕಾರ್ಯಾಧ್ಯಕ್ಷ ಹೆನ್ರಿ ಲೋಬೊ, ಪ್ರಧಾನ ಕಾರ್ಯದರ್ಶಿ ಜೋನ್‌ ಆರ್‌. ಪಿರೇರ, ಕೋಶಾಧಿಕಾರಿ ವಾಲ್ಟರ್‌ ಡಿ’ಸೋಜಾ ಕಲ್ಮಾಡಿ, ಮಾಜಿ ಅಧ್ಯಕ್ಷ ಪಿ. ಎನ್‌. ಶ್ಯಾನ್‌ಭಾಗ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾತೃಭಾಷೆ ದಾರಿದೀಪ ಇದ್ದಂತೆ 
ಮಾನವ ಬದುಕಿಗೆ ಮಾತೃಭಾಷೆ ದಾರಿದೀಪ ಇದ್ದಂತೆ. ಯಾವತ್ತೂ ನಮ್ಮ ತಾಯಿಭಾಷೆಯನ್ನು ಮರೆಯಬಾರದು  ಎಂದು ಉದಯ ಗುರ್ಕಾರ್‌ ತಿಳಿಸಿದರು.  ರೋಯ್‌ ಕ್ಯಾಸ್ತೆಲಿನೋ ಮಾತನಾಡಿ, ಕೊಂಕಣಿ ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರೆತು ಎರಡೂವರೆ ದಶಕಗಳ ಸಂಭ್ರಮ ಇದು ಪ್ರತೀಯೋರ್ವ ಕೊಂಕಣಿಗರ ಹಿರಿಮೆಯಾಗಿದೆ. ಇಂತಹ ಗೌರವಯುತ ಭಾಷೆಯನ್ನು ನಾವು ಮನಮನೆಗಳಲ್ಲಿ ಬೆಳಗಿಸಿ ಭವಿಷ್ಯತ್ತಿನ ಪೀಳಿಗೆಯತ್ತ ಮುನ್ನಡೆಸಬೇಕು ಎಂದರು.

ಸಮ್ಮಾನ
ಸಮಾರಂಭದಲ್ಲಿನ ಅತಿಥಿವರ್ಯರು ಹಿರಿಯ ಪ್ರಸಿದ್ಧ ಹಾಗೂ ಪ್ರತಿಷ್ಠಿತ ಸಂಗೀತಗಾರ ಸಂಗೀತ ಸಾಮ್ರಾಟ್‌ ಬಿರುದಾಂಕಿತ ಹೆನ್ರಿ ಡಿ’ಸೋಜಾ ಅವರಿಗೆ “ಜೀವಮಾನ ಪ್ರಶಸ್ತಿ’ ಪ್ರದಾನಿಸಿ ಗೌರವಿಸಿದರು. ಮಂಗಳೂರು ರಚನಾ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಜೋಕಿಮ್‌ ಸ್ಟೇನಿ ಅಲ್ವಾರಿಸ್‌, ಹೆಸರಾಂತ ನಾಟಕಕಾರರಾದ ಟೋನಿ ಮಾರ್ಟಿಸ್‌, ಫ್ರಾನ್ಸಿಸ್‌ ಫೆರ್ನಾಂಡಿಸ್‌ ಕಾಸ್ಸಿಯಾ, ಲೇಖಕ ಎಚ್‌. ಜೆ. ಗೋವಿಯಸ್‌ ಅವರನ್ನು ಗೌರವಿಸಲಾಯಿತು. ಇದೇ ಶುಭಾವಸರದಲ್ಲಿ ಅಮೃತಮಹೋತ್ಸವದ ಸ್ಮರಣ ಸಂಚಿಕೆಯನ್ನು ಮೇಡಂ ಪಿಂಟೋ ಬಿಡುಗಡೆಗೊಳಿಸಿದರು. ಕೊಂಕಣಿ ಫಿಲ್ಮ್ಸ್ನ ಅಂತರ್ಜಾಲ  (ವೆಬ್‌ಸೆ„ಟ್‌)ವನ್ನು ಆಲ್ಬರ್ಟ್‌ ಡಿ’ಸೋಜಾ ಅನಾವರಣಗೊಳಿಸಿದರು. ಸಂಗೀತ, ನೃತ್ಯ, ಇತ್ಯಾದಿ ವಾರ್ಷಿಕ ಪ್ರತಿಭಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ಮತ್ತು ವಿದ್ಯಾರ್ಥಿ ವೇತನ ವಿತರಿಸಿ ಗಣ್ಯರು ಶುಭ ಹಾರೈಸಿದರು.

Advertisement

ಭಾಷಾ ಮಂಡಳ್‌ನ  ಜೊತೆ ಕಾರ್ಯದರ್ಶಿ ಪಾಸ್ಕಲ್‌ ಲೋಬೊ,  ಜೊತೆ ಕೋಶಾಧಿಕಾರಿ ಸಿರಿಲ್‌ ಕ್ಯಾಸ್ತೆಲಿನೋ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಿಯಟ್ರಿಸ್‌ ನಾಜ್‌Ø ಫೆರ್ನಾಂಡಿಸ್‌, ಆ್ಯಂಟನಿ ಬುಥೇಲೊ, ಸ್ಟೇನ್ಲಿ ಡಾಯಸ್‌, ರೊಜಾØರಿಯೋ ಕೆ. ಫೆರ್ನಾಂಡಿಸ್‌, ಬೆನೆಡಿಕ್ಟಾ ಬಿ.ರೆಬೆಲ್ಲೋ, ಸಿಪ್ರಿಯನ್‌ ಅಲುºಕರ್ಕ್‌, ಅನಂತ ಅಮ್ಮೆಂಬಳ, ಲಿಯೋ ಫೆರ್ನಾಂಡಿಸ್‌, ವಲೆ°àಸ್‌ ರೆಗೋ ಸೇರಿದಂತೆ ನೂರಾರು ಸಂಖ್ಯೆಯ ಕೊಂಕಣಿ ಭಾಷಾ ಭಿಮಾನಿಗಳು ಉಪಸ್ಥಿತರಿದ್ದರು.

ಜೋನ್‌ ಡಿ’ಸಿಲ್ವ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಭಾಷಾ ಮಂಡಳ್‌ನ ಕಾರ್ಯಕಾರಿ ಸಮಿತಿಯ ಸದಸ್ಯ ಲಾರೆನ್ಸ್‌ ಡಿ’ಸೋಜಾ ಕಮಾನಿ ಕಾರ್ಯಕ್ರಮ ನಿರೂಪಿಸಿದರು. ಲಿಯೋ ಫೆರ್ನಾಂಡಿಸ್‌ ಮತ್ತು ವೆರೋನಿಕಾ ನೊರೊನ್ಹ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಹೆನ್ರಿ ಲೋಬೊ ವಂದಿಸಿದರು.

 ಚಿತ್ರ-ವರದಿ : ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next