Advertisement

ಕೊಂಕಣಿ ಭಾಷೆಗೂ ಅವಕಾಶ

11:07 AM Jul 11, 2018 | Team Udayavani |

ಹೊಸದಿಲ್ಲಿ: ಪ್ರಸಕ್ತ ಮುಂಗಾರು ಅಧಿವೇಶನದಿಂದ ರಾಜ್ಯಸಭೆ ಸದಸ್ಯರು ಕೊಂಕಣಿ, ಕನ್ನಡ ಸೇರಿದಂತೆ 22 ಭಾಷೆಗಳಲ್ಲಿ ಮಾತನಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಕನ್ನಡ, ಗುಜರಾತಿ, ಹಿಂದಿ ಸೇರಿದಂತೆ 17 ಭಾಷೆಗಳನ್ನು ಮಾತನಾಡಲು ಅವಕಾಶವಿತ್ತು. ಈ ಬಾರಿ ಇದಕ್ಕೆ ಕೊಂಕಣಿ, ಡೋಗ್ರಿ, ಕಾಶ್ಮೀರಿ, ಸಂಥಾಲಿ ಮತ್ತು ಸಿಂಧಿ ಭಾಷೆಗಳನ್ನು ಸೇರಿಸಲಾಗಿದೆ. ಏಕಕಾಲಕ್ಕೆ ಈ ಭಾಷೆಗಳ ಅರ್ಥವಿವರಣೆ ನೀಡುವಂಥ ಸಮಿತಿಯನ್ನು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ನೇಮಕ ಮಾಡಿಕೊಂಡಿದ್ದಾರೆ.

Advertisement

ಗದ್ದಲಕ್ಕೆ ಅಂತ್ಯ ಹಾಡಿ: ಸದಸ್ಯರ ಗದ್ದಲದಿಂದಾಗಿ ಸಂಸತ್‌ ಕಲಾಪಗಳು ವ್ಯರ್ಥವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿ ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಎಲ್ಲ ಸಂಸದರಿಗೂ ಪತ್ರವೊಂದನ್ನು ಬರೆದಿದ್ದಾರೆ. ಹಿಂದೆ ಇತರೆ ಪಕ್ಷಗಳೂ ಗದ್ದಲ ಉಂಟುಮಾಡಿದ್ದವು ಎಂಬುದನ್ನೇ ನೆಪವಾಗಿಟ್ಟುಕೊಂಡು ಎಲ್ಲರೂ ಗದ್ದಲ ಮುಂದುವರಿಸುತ್ತಾ ಹೋದರೆ, ಸಮಸ್ಯೆ ಉಲ್ಬಣವಾಗುತ್ತದೆಯೇ ಹೊರತು ಕೊನೆಯಾಗುವುದಿಲ್ಲ. ಈಗ ಎಲ್ಲರೂ ಆತ್ಮವಿಮರ್ಶೆ ಮಾಡಿಕೊಂಡು, ಪ್ರಜಾಪ್ರಭುತ್ವದ ಪವಿತ್ರ ದೇಗುಲವಾದ ಸಂಸತ್‌ನ ಪ್ರತಿಷ್ಠೆ ಹಾಗೂ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ. ಸಂಸತ್‌ನ ಮುಂಗಾರು ಅಧಿವೇಶನ ಇದೇ 18ರಂದು ಆರಂಭವಾಗಿ ಆ.10ರವರೆಗೆ ನಡೆಯಲಿದೆ.

ಇದೇ ವೇಳೆ, 12ರೊಳಗಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವಂಥ ವ್ಯಕ್ತಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂಥ ಕ್ರಿಮಿನಲ್‌ ಕಾನೂನು(ತಿದ್ದುಪಡಿ) ಮಸೂದೆ, 2018 ಅನ್ನು ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next