Advertisement

ಜಾರ್ಜ್‌ರಿಂದಲೇ  ಕೊಂಕಣ್‌ ರೈಲ್ವೇ ನನಸು: ಡಯಾಸ್‌

01:00 AM Feb 06, 2019 | Harsha Rao |

ಮಣಿಪಾಲ: ಕರಾವಳಿಗರನ್ನು ದೇಶದ ವಾಣಿಜ್ಯ ರಾಜಧಾನಿ ಮುಂಬಯಿಗೆ ಸಂಪರ್ಕಿಸುವ ಬಹು ಅಪೇಕ್ಷಿತ ಕೊಂಕಣ್‌ ರೈಲ್ವೇ ಯೋಜನೆ ಜಾರ್ಜ್‌ ಫೆರ್ನಾಂಡಿಸ್‌ ಅವರಂಥ ದೂರದೃಷ್ಟಿತ್ವದ ಸಾಧಕ ಇಲ್ಲದಿರುತ್ತಿದ್ದರೆ ಕನಸಾಗಿಯೇ ಉಳಿಯುತ್ತಿತ್ತು. ಆದರೆ ಈ ಇತಿಹಾಸ ಪುರುಷನನ್ನು ಕೊಂಕಣ್‌ ರೈಲ್ವೆ ಮರೆಯುತ್ತಿರುವುದು ವಿಷಾದನೀಯ. ಮನವಿ ಸಲ್ಲಿಸಿದಾಗ್ಯೂ ಕೊಂಕಣ್‌ ರೈಲ್ವೆಯ ಎಲ್ಲ ನಿಲ್ದಾಣಗಳಲ್ಲಿ ಜಾರ್ಜ್‌ ಭಾವಚಿತ್ರವನ್ನಿರಿಸಬೇಕೆಂಬ ಜನರ,  ಸಂಘದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ ಎಂದು ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ಆರ್‌.ಎಲ್‌. ಡಯಾಸ್‌  ಹೇಳಿದರು.

Advertisement

ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲ್ವೇ ಯಾತ್ರಿ ಸಂಘ ಹಮ್ಮಿಕೊಂಡ ಕೊಂಕಣ್‌ ರೈಲ್ವೇ ಪ್ರವರ್ತಕ ಜಾರ್ಜ್‌ ಫೆರ್ನಾಂಡಿಸ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಡಬ್ಬಲ್‌ ಲೇನ್‌ ಈಡೇರಲಿಲ್ಲ
ಮುಂಬಯಿಗೆ ಹತ್ತೇ ಗಂಟೆಗಳಲ್ಲಿ ತಲುಪಲು ಸಹಾಯವಾಗುವಂತೆ ಡಬ್ಬಲ್‌ ಲೇನ್‌ ಮಾಡುವ ಪ್ರಸ್ತಾವವನ್ನು ಕೆಲವು ವರ್ಷಗಳ ಹಿಂದೆ ಕೊಂಕಣ್‌ ರೈಲ್ವೇ ಮುಂದಿಟ್ಟಿತ್ತು. ಇದಕ್ಕೆ ಎಲ್‌ಐಸಿ ಸಾವಿರ ಕೋಟಿ ಸಾಲ ನೀಡುವುದಾಗಿಯೂ ತಿಳಿಸಿತ್ತು. 

ಆದರೆ ಈ ಮೊತ್ತ ಮರು ಪಾವತಿಸ ಬೇಕಿದ್ದುದರಿಂದ ಸಂಸತ್ತಿನಲ್ಲಿ ಅನು ಮೋದನೆ ಸಿಕ್ಕಿರಲಿಲ್ಲ ಎಂದು ತಿಳಿಸಿದರು. 

ಊಟ ಕೊಟ್ಟಿದ್ದರು
1978ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ವೇಳೆ ಇಂದಿರಾ ಗಾಂಧಿ ವಿರುದ್ಧ ಜಾರ್ಜ್‌ ಫೆರ್ನಾಂಡಿಸ್‌ ಅವರು ಮೊರಾರ್ಜಿ ಸರಕಾರದ ಪರ ಪ್ರಚಾರ ಮಾಡುತ್ತಿದ್ದರು. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದು ಜಾರ್ಜ್‌ ಬೆಂಬಲಕ್ಕೆ ತೆರಳಿದ್ದೆ. ರಾತ್ರಿ ವೇಳೆ ಸಹವರ್ತಿಗಳೊಂದಿಗೆ ಎರ್ಲಪಾಡಿ ಶಾಲೆಯಲ್ಲಿ ತಂಗಿದ್ದೆ. ಊಟ ಮಾಡಿರಲಿಲ್ಲ. ಅಂದು ಬೃಹತ್‌ ಕೈಗಾರಿಕೆ ಸಚಿವರಾಗಿದ್ದ ಜಾರ್ಜ್‌ ಫೆರ್ನಾಂಡಿಸ್‌ ಅವರು ಪೆಟ್ರೋಮ್ಯಾಕ್ಸ್‌ ಬೆಳಕಿನಲ್ಲಿ ನಡೆದುಕೊಂಡು ಬಂದು ನಮಗೆ ಊಟದ ಪ್ಯಾಕೆಟ್‌ ನೀಡಿದ್ದರು. ತನ್ನ ಸಹವರ್ತಿಗಳು , ಎಲ್ಲರ ಬಗೆಗೆ ಜಾರ್ಜ್‌ ಕಾಳಜಿ ವಹಿಸುತ್ತಿದ್ದುದು ಹೀಗೆ ಎಂದು ಉಡುಪಿ ಉದ್ಯಮಿ ರಾಘವೇಂದ್ರ ಆಚಾರ್ಯ  ಹೇಳಿದರು. 

Advertisement

ಉಡುಪಿ ರೈಲು ನಿಲ್ದಾಣದ ಎಇಎನ್‌ ಬಾಬು ಕೆಡ್ಲೆ, ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಭಾರತಿ ಪ್ರಶಾಂತ್‌, ರಾಜು, ಉದ್ಯಮಿ ದಾವೂದ್‌ ಅಬೂಬಕರ್‌, ರೈಲ್ವೇ ಪಾರ್ಸೆಲ್‌ ಸರ್ವಿಸ್‌ನ ರಾಜೇಂದ್ರ ಶೆಟ್ಟಿ, ರೈಲ್ವೇ ಸುರಕ್ಷಾ ಅಧಿಕಾರಿ ಸಂತೋಷ್‌ ಗಾಂವ್ಕರ್‌, ರೈಲ್ವೇ ಕಮರ್ಷಿಯಲ್‌ ಸುಪರ್‌ವೈಸರ್‌ ರಮೇಶ್‌ ಶೆಟ್ಟಿ, ಯಾತ್ರಿ ಸಂಘದ ಉಪಾಧ್ಯಕ್ಷ ಕೆ.ಆರ್‌. ಮಂಜುನಾಥ್‌, ಖಜಾಂಚಿ ರಾಮಚಂದ್ರ ಆಚಾರ್ಯ, ನಿರ್ದೇಶಕರಾದ ಜನಾರ್ದನ ಕೋಟ್ಯಾನ್‌, ಅಜಿತ್‌ ಶೆಣೈ, ಜಾನ್‌ ರೆಬೆಲ್ಲೊ, ಸುಧಾಕರ ಪಂಡಿತ್‌ ಮೊದಲಾದವರಿದ್ದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಮಣಿಪಾಲ್‌ ನಿರೂಪಿಸಿದರು. ಜಾರ್ಜ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next