Advertisement

ಕೊಂಕಣ ರೈಲ್ವೇ: ವಾರದೊಳಗೆ ವಿದ್ಯುದೀಕರಣ ಲೋಕಾರ್ಪಣೆ

02:08 AM Jun 16, 2022 | Team Udayavani |

ಉಡುಪಿ: ಕೊಂಕಣ ರೈಲ್ವೇಯಲ್ಲಿ ಅಳವಡಿಸಲಾದ ವಿದ್ಯುದ್ದೀಕರಣ ಯೋಜನೆಯು ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸುವರು.

Advertisement

ಉದ್ಘಾಟನೆಯನ್ನು ಜೂ. 20 ಅಥವಾ 21ರಂದು ಮಧ್ಯಾಹ್ನ 12ಕ್ಕೆ ನೆರವೇರಿಸುವ ಸಾಧ್ಯತೆ ಇದ್ದು ಅಂತಿಮ ನಿರ್ಧಾರ ಇನ್ನಷ್ಟೇ ಆಗಬೇಕಾಗಿದೆ. ಜೂ. 20ರಂದು

ಉದ್ಘಾಟನೆಯಾಗುವ ಸಾಧ್ಯತೆಗಳೇ ಹೆಚ್ಚು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಉದ್ಘಾಟನೆಯ ನೇರ ಪ್ರಸಾರವನ್ನು ಉಡುಪಿ, ಮಡಗಾಂವ್‌ ಮತ್ತು ರತ್ನಾಗಿರಿ ರೈಲು ನಿಲ್ದಾಣಗಳಲ್ಲಿ ಬಿತ್ತರಿಸಲಾಗುವುದು. ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಉದ್ಘಾಟನೆಯ ಪ್ರಯುಕ್ತ ಉಡುಪಿ, ಮಡಗಾಂವ್‌, ರತ್ನಾಗಿರಿಯಿಂದ ಮೂರು ಗೂಡ್ಸ್‌ ರೈಲುಗಳನ್ನು ಮತ್ತು ಇದೇ ರೀತಿ ನೈಋತ್ಯ ರೈಲ್ವೇಯಲ್ಲಿಯೂ ಮೂರು ಗೂಡ್ಸ್‌ ರೈಲುಗಳನ್ನು ಓಡಿಸಲಾಗುವುದು ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದ ರೋಹಾದಿಂದ ಮಂಗಳೂರು ಸಮೀಪದ ತೋಕೂರು ವರೆಗೆ 760 ಕಿ.ಮೀ. ದೂರದ ಕೊಂಕಣ ರೈಲ್ವೇ ಹಳಿಯಲ್ಲಿ ಸುಮಾರು 1,287 ಕೋ.ರೂ. ವೆಚ್ಚದಲ್ಲಿ ವಿದ್ಯುದೀಕರಣಗೊಳಿಸಲಾಗಿದೆ. 2017ರಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಕೊರೊನಾ ಕಾರಣದಿಂದ ಕಾಮಗಾರಿ ವೇಗಕ್ಕೆ ಹಿನ್ನಡೆಯಾಗಿತ್ತು. ಈಗ ಎಲ್ಲ ಬಗೆಯ ಪರೀಕ್ಷೆ, ಪರಿಶೀಲನೆ ನಡೆದು ಉದ್ಘಾಟನೆಯಾಗಲಿದೆ.

Advertisement

ವಿದ್ಯುದೀಕರಣದಿಂದ ಇಂಧನ ವೆಚ್ಚದಲ್ಲಿ ಭಾರೀ ಪ್ರಮಾಣದ ಉಳಿತಾಯ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next