Advertisement

Kadaba ಕೊಂಬಾರು: ಚರಂಡಿಗೆ ಬಿದ್ದ ಕಾರು; ಅಕ್ರಮ ದನ ಸಾಗಾಟ ಶಂಕೆ: ತನಿಖೆಗೆ ಆಗ್ರಹ

08:20 PM May 22, 2024 | Team Udayavani |

ಕಡಬ: ಕೊಂಬಾರು ರಬ್ಬರ್‌ ಬೋರ್ಡ್‌ ಸಮೀಪ ಕಾರೊಂದು ಚರಂಡಿಗೆ ಬಿದ್ದ ಘಟನೆ ಮೇ 21ರಂದು ರಾತ್ರಿ ನಡೆದಿದೆ. ಆ ಕಾರಿನೊಳಗಡೆ ಹಸಿ ಸಗಣಿ ಇದ್ದು ಅಕ್ರಮ ದನ ಸಾಗಾಟದ ಬಗ್ಗೆ ಶಂಕೆ ವ್ಯಕ್ತವಾಗಿದೆ.

Advertisement

ಕೊಂಬಾರು ಕಡೆಯಿಂದ ಬಂದ ಕಾರು ಸುಂಕದಕಟ್ಟೆ ಕಡೆಗೆ ಸಂಚರಿಸುತ್ತಿದ್ದು, ಕಾರು ಚರಂಡಿಗೆ ಬಿದ್ದ ಬಳಿಕ ಅದರ ಚಾಲಕ ಅಥವಾ ವಾರಸುದಾರರು ಯಾರೂ ಪತ್ತೆಯಾಗಿಲ್ಲ. ಕಾರನ್ನು ಕಡಬ ಪೋಲಿಸರು ಠಾಣೆಯಲ್ಲಿ ತಂದು ಇರಿಸಿದ್ದಾರೆ.

ಅಕ್ರಮ ದನ ಸಾಗಾಟ – ದೂರು
ಕಾರಿನಲ್ಲಿ ಅಕ್ರಮ ದನ ಸಾಗಾಟ ಮಾಡಲಾಗಿದ್ದು, ದನವೊಂದು ಸಮೀಪದಲ್ಲಿ ಪತ್ತೆಯಾಗಿದೆ. ಅಲ್ಲದೆ ಕಾರಿನಲ್ಲಿ ಹಸಿ ಸೆಗಣಿ ಕೂಡ ಇತ್ತು. ಪೋಲಿಸರು ತನಿಖೆ ನಡೆಸಿ ಅಕ್ರಮ ದನ ಸಾಗಾಟ ಮಾಡಿದವರನ್ನು ಪತ್ತೆ ಹಚ್ಚಬೇಕು, ಈ ಬಗ್ಗೆ ಸಂಘಟನೆಯ ಕಡೆಯಿಂದ ದೂರು ನೀಡಲಾಗುವುದು. ಪರಿಸರದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ಹಾಗೂ ಅಕ್ರಮ ಗೋ ಮಾಂಸ ದಂಧೆಯನ್ನು ಮಟ್ಟ ಹಾಕಬೇಕು ಎಂದು ಕಡಬದ ಹಿಂದೂ ಸಂಘಟನೆ ಆಗ್ರಹಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next