Advertisement
ಒಂದೂವರೆ ವರ್ಷದ ಗ್ಯಾಪ್‌ನಲ್ಲಿ ಏನೇನ್ ಮಾಡಿದ್ರಿ?– ಒಂದಷ್ಟು ಕಮಿಟ್‌ಮೆಂಟ್‌ಗಳಿದ್ದವು. ಅವೆಲ್ಲವನ್ನು ಮುಗಿಸಿಕೊಂಡೆ. ಜೊತೆಗೆ ಸಾಕಷ್ಟು ವಕೌìಟ್ ಮಾಡಿ ಫಿಟ್ ಆದೆ. 21 ಕೆಜಿ ತೂಕ ಇಳಿಸಿಕೊಂಡೆ. ಶಂಕರೇ ಗೌಡ್ರು, ಶಂಕರ್ ರೆಡ್ಡಿ ಸಿಕ್ಕಿದ್ರು. ನನ್ನನ್ನು ನೋಡಿ ಅವರಿಗೆ ಶಾಕ್ ಆಯಿತು. ಆ ವೇಳೆ ಸಿನಿಮಾ ಮಾತುಕತೆಯಾಗಿ 6-7 ತಿಂಗಳು ಕಥೆಯಲ್ಲಿ ಕುಳಿತುಕೊಂಡೆವು. ಈಗ ಸಿನಿಮಾ ಸೆಟ್ಟೇರಿದೆ.
– ಇದು ರೀಮೇಕ್ ಸಿನಿಮಾ ಅಲ್ಲ. ಪಕ್ಕಾ ಒರಿಜಿನಲ್ ಸಿನಿಮಾ. ಅದೇ ಕಾರಣಕ್ಕೆ ಚಿತ್ರಕ್ಕೆ
“ಪಕ್ಕಾ ಒರಿಜಿನಲ್’ ಎಂಬ ಟ್ಯಾಗ್‌ಲೈನ್ ಇದೆ. ಸಹಜವಾಗಿ, ಸಿನಿಮ್ಯಾಟಿಕ್ ಇಲ್ಲದೇ ಈ
ಸಿನಿಮಾ ಮೂಡಿಬರುತ್ತದೆ. “ಕೆಂಪೇಗೌಡ-2′ ಚಿತ್ರದ ವಿಶೇಷತೆ ಏನು?
– ಡಿಜಿಟಲ್ ಇಂಡಿಯಾದಲ್ಲಿ ಸೈಬರ್ ಕ್ರಿಮಿನಲ್‌ಗಳು ಕೂಡಾ ಜಾಸ್ತಿಯಾಗುತ್ತಿದ್ದಾರೆ. ಬೇರೆ ಕ್ರಿಮಿನಲ್ ಗಳಿಗಿಂತ ಆ ತರಹದ ಕ್ರಿಮಿನಲ್‌ಗಳನ್ನು ಹಿಡಿಯೋದು ಪೊಲೀಸ್ ಇಲಾಖೆಗೆ ಸವಾಲು. ಇಂತಹ ಸಂದರ್ಭದಲ್ಲಿ ನಾಯಕ ಯಾವ ತರಹ ಸೈಬರ್ ಕ್ರಿಮಿನಲ್ ಸೇರಿದಂತೆ ಇತರ ಕ್ರಿಮಿನಲ್‌ಗಳನ್ನು ಮಟ್ಟ ಹಾಕುತ್ತಾನೆ ಎಂಬುದು ಕಥೆ.
Related Articles
– ಚಿತ್ರವನ್ನು ತುಂಬಾ ಸಹಜವಾಗಿ, ನೈಜತೆಯೊಂದಿಗೆ ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದೇವೆ. ಅದು ನಟನೆಯಿಂದ ಹಿಡಿದು ಕಾನೂನು ಅಂಶಗಳವರೆಗೂ. ಹಾಗಾಗಿಯೇ ಪೊಲೀಸ್ ಆಫೀಸರ್‌ಗಳಲ್ಲಿ ಮಾತನಾಡಿ, ಚಿತ್ರಕ್ಕೆ ಪೂರಕವಾದ ಕಾನೂನಿನ ಅರಿವು, ಕೇಸ್‌ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಯಾವುದೇ ಒಂದು ಅಂಶದಲ್ಲೂ ತಪ್ಪು ಕಾಣಬಾರದು. ಈಗ ಪ್ರೇಕ್ಷಕರು ತುಂಬಾ ಬುದ್ಧಿವಂತರು. ಏನೇ ತಪ್ಪಾದರೂ ಬೇಗನೇ ಗುರುತಿಸುತ್ತಾರೆ.
Advertisement
ಇದು ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾನಾ?– ಇಲ್ಲ, ಇದು ಔಟ್ ಅಂಡ್ ಔಟ್ ಕಾಪ್ ಸಿನಿಮಾ. ತುಂಬಾ ಸಹಜವಾಗುತ್ತದೆ. ನಾವು ದಿನನಿತ್ಯ ನೋಡುವ ಪೊಲೀಸ್ ಅಧಿಕಾರಿ ಹೇಗಿರುತ್ತಾನೆ ಅದೇ ರೀತಿ ಇಲ್ಲೂ ಇದೆ. ಸುಖಾಸುಮ್ಮನೆ ಚೇಸಿಂಗ್, ಹೊಡೆದಾಟವಿಲ್ಲ. ಕೋಮಲ್ ಕಾಮಿಡಿ ಇಲ್ಲಿ ಸಿಗಲ್ವಾ?
– ನಾವು ಉದ್ದೇಶಪೂರ್ವಕವಾಗಿ ಕಾಮಿಡಿ ಟ್ರ್ಯಾಕ್ ಇಟ್ಟಿಲ್ಲ. ಪೊಲೀಸರು ಕೂಡಾ ಮನುಷ್ಯರೇ. ಅವರಲ್ಲೂ ಹಾಸ್ಯಪ್ರಜ್ಞೆ ಇರುತ್ತದೆ. ಅವರು ತಮ್ಮ ಕುಟುಂಬದ ಜೊತೆ ದೇವಸ್ಥಾನ, ಕಾರ್ಯಕ್ರಮಗಳಿಗೆ ಹೋಗುತ್ತಾರೆ, ಫ್ರೆಂಡ್ಸ್ ಜೊತೆ ಪಾರ್ಟಿ ಮಾಡುತ್ತಾರೆ.ಆ ಸಂದರ್ಭದಲ್ಲಿ ಎಷ್ಟೋ ಜೋಕ್ ಹುಟ್ಟಿಕೊಳ್ಳುತ್ತವೆ. ಆ ತರಹದ ಕಾಮಿಡಿ ಸನ್ನಿವೇಶಗಳು ಚಿತ್ರದಲ್ಲಿರುತ್ತವೆ. ಇದು ನಿಮ್ಮ ಕಂಬ್ಯಾಕ್ ಸಿನಿಮಾ ಆಗುತ್ತಾ?
– ಅದು ಗೊತ್ತಿಲ್ಲ. ಆದರೆ, ನಾನು ತುಂಬಾ ಚೂಸಿ. ಸಿನಿಮಾ ಮಾಡಲೇಬೇಕೆಂಬ ಉದ್ದೇಶವಿದ್ದಿದ್ದರೆ ಇಷ್ಟೊತ್ತಿಗೆ ಸಾಕಷ್ಟು ಸಿನಿಮಾಗಳನ್ನು ಮಾಡುತ್ತಿದ್ದೆ. ಆದರೆ ನನಗೆ ಇಷ್ಟವಾದ ಕಥೆಗಳನ್ನಷ್ಟೇ ಮಾಡುತ್ತಾ ಬಂದಿದ್ದೇನೆ. ಇದು ಕೂಡಾ ನನಗೆ ಇಷ್ಟವಾದ ಕಥೆ, ಮಾಡುತ್ತಿದ್ದೇನೆ. “ಕೆಂಪೇಗೌಡ’ದಲ್ಲಿ ಸುದೀಪ್ ಇದ್ದರು. “ಕೆಂಪೇಗೌಡ-2’ನಲ್ಲಿ ನೀವು. ಈ ಬಗ್ಗೆ
ಏನಂತಿರಿ?
ಆ ಚಿತ್ರವನ್ನು ಶಂಕರೇಗೌಡ ನಿರ್ಮಿಸಿದ್ದರು. ಈ ಚಿತ್ರವನ್ನು ಅವರೇ ನಿರ್ಮಿಸುತ್ತಿದ್ದಾರೆ. ಇಲ್ಲಿ ನಾನು ನಟಿಸುತ್ತಿದ್ದೇನೆ ಅಷ್ಟೇ. ಅದು ಬಿಟ್ಟು ಬೇರೇನೂ ಹೇಳಲಾರೆ. ಕೋಮಲ್ ರಿಂದ ಮುಂದೆ ಬೇರೆ ತರಹದ ಸಿನಿಮಾ ನಿರೀಕ್ಷಿಸಬಹುದಾ?
ನಾವು ಏನೇ ಮಾಡುವುದಾದರೂ ಎಂಟರ್‌ಟೈನ್‌ಮೆಂಟ್ ಬಿಟ್ಟು ಮಾಡೋಕ್ಕಾಗಲ್ಲ. ಆ ಎಂಟರ್‌ಟೈನ್ ಮೆಂಟ್‌ನ ಬೇರೆ ತರಹ ತೋರಿಸಬಹು ದಷ್ಟೇ. ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ.