Advertisement
ಹೊಂಡಮಯ ರಸ್ತೆ
Related Articles
Advertisement
ಅಭಯಾರಣ್ಯದ ನಡುವಿನ ಈ ಮಾರ್ಗದ ದುರಸ್ತಿ ಕಾರ್ಯ ವರ್ಷ ಹಲವು ಕಳೆದರೂ ಬಗೆ ಹರಿಯದಿರುವುದು ಈ ಭಾಗದ ನಿವಾಸಿಗಳಿಗೆ ನಿರಾಸೆ ಉಂಟು ಮಾಡಿದೆ. ವರ್ಷವಿಡೀ ಕಿರಿಕಿರಿ ಅನುಭವಿಸಿ, ಸಾಕಾಗಿರುವ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮೊರೆ ಹೋದರೂ ಪರಿಹಾರ ದೊರಕದಿರುವುದು ದುರಾದೃಷ್ಟಕರ.
ಮುಚ್ಚಿದ ಸರಕಾರಿ ಶಾಲೆ: ಮಾವಿನಕಾರಿನಲ್ಲಿ 1ರಿಂದ 5ನೇ ತರಗತಿವರೆಗೆ ನಡೆಯುತ್ತಿದ್ದ ಸರಕಾರಿ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿದೆ. ಮೊದಲು ಶಾಶ್ವತ ಶಿಕ್ಷಕರಿದ್ದ ಈ ಶಾಲೆಯಲ್ಲಿ 30ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದರು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಅಲ್ಲಿನ ವಿದ್ಯಾರ್ಥಿಗಳನ್ನು ಕೊಲ್ಲೂರು, ಶಂಕರನಾರಾಯಣ, ಕುಂದಾಪುರ ಹಾಸ್ಟೆಲ್ ಶಾಲೆಗಳಿಗೆ ಸೇರ್ಪಡೆ ಗೊಳಿಸಿರುವುದರಿಂದ ಈ ಶಾಲೆಯ ವಿದ್ಯಾರ್ಥಿ ಸಂಖ್ಯಾಬಲ ಕುಗ್ಗಿತು. ಜೂನ್‌ನಿಂದ ವಿದ್ಯಾರ್ಥಿಗಳಿಲ್ಲದೆ ಮುಚ್ಚಲಾಗಿದೆ. ಸಂಚಾರ ದುಸ್ತರ: ದುಃಸ್ಥಿತಿಯಲ್ಲಿರುವ ಮಾಸ್ತಿಕಟ್ಟೆ -ಬಿದ್ರಕಳಿ ರಸ್ತೆಯನ್ನು ದುರಸ್ತಿಪಡಿಸಲು ಗ್ರಾ.ಪಂ. ಹಾಗೂ ಇಲಾಖೆ ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ಈ ಮಾರ್ಗವಾಗಿ ಸಂಚರಿಸುವುದು ಕಷ್ಟಸಾಧ್ಯ. –ಕರುಣಾಕರ ಶೆಟ್ಟಿ, ಮಾವಿನಕಾರು ನಿವಾಸಿ
ಪರಿಹಾರಕ್ಕೆ ಕ್ರಮ: ಮಾಸ್ತಿಕಟ್ಟೆ- ಬಿದ್ರಕಳಿ ರಸ್ತೆಗೆ ಡಾಮರು ಕಾಮಗಾರಿ ನಡೆಸಲು ಅಭಯಾರಣ್ಯದ ಕಾನೂನು ಅಡ್ಡಿಯಾಗಿದೆ. ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಹೊಂಡಮಯವಾಗಿದೆ. ಮಳೆ ಕಡಿಮೆಯಾದೊಡನೆ ಅದಕ್ಕೊಂದು ಪರಿಹಾರ ಒದಗಿಸುವ ಬಗ್ಗೆ ಶ್ರಮಿಸಲಾಗುವುದು. –ಶಿವರಾಮಕೃಷ್ಣ ಭಟ್, ಅಧ್ಯಕ್ಷರು, ಗ್ರಾ.ಪಂ. ಕೊಲ್ಲೂರು
ಡಾ| ಸುಧಾಕರ ನಂಬಿಯಾರ್