Advertisement

ಕೊಲ್ಲೂರು ಶ್ರೀ ಮೂಕಾಂಬಿಕೆಗೆ ನೂತನ ರಥ ಪುರಪ್ರವೇಶ

12:42 AM Feb 16, 2023 | Team Udayavani |

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕೆಗೆ ಫೆ. 16ರಂದು ಸಮರ್ಪಣೆಗೊಳ್ಳಲಿರುವ ಬ್ರಹ್ಮರಥವನ್ನು ಕುಂಭಾಶಿಯ ಕಾರ್ಯಾಗಾರದಿಂದ ಕೊಂಡೊಯ್ಯುವ ದಾರಿಯಲ್ಲಿ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇಗುಲಕ್ಕೆ ಆಗಮಿಸಿದಾಗ ದೇಗುಲದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್‌ ಐತಾಳ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.

Advertisement

ಮುರ್ಡೇಶ್ವರದ ಉದ್ಯಮಿ ದಿ| ಆರ್‌.ಎನ್‌. ಶೆಟ್ಟಿ ಅವರ ಪುತ್ರ ಸುನಿಲ್‌ ಆರ್‌. ಶೆಟ್ಟಿ ಅವರು ಕೊಲ್ಲೂರು ದೇಗುಲಕ್ಕೆ ಸೇವಾ ರೂಪದಲ್ಲಿ ಬ್ರಹ್ಮರಥವನ್ನು ಸಮರ್ಪಿಸುತ್ತಿದ್ದು, ಕೋಟೇಶ್ವರದ ಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿರ್ಮಿಸಲಾಗಿದೆ.
400 ವರ್ಷಗಳ ಬಳಿಕ ಕೊಲ್ಲೂರು ದೇಗುಲಕ್ಕೆ ನೂತನ ರಥ ನಿರ್ಮಾಣಗೊಂಡಿದೆ. ಹಳೆಯ ರಥದ ಮಾದರಿಯಲ್ಲೇ ಇದ್ದು, 1 ಕೋಟಿ ರೂ.ಗೂ ಅಧಿಕ ವೆಚ್ಚವಾಗಿದೆ.

ರಥಕ್ಕೆ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇಗುಲದ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು, ವಂಡ್ಸೆ, ಚಿತ್ತೂರು, ಇಡೂರು, ಜಡ್ಕಲ್‌, ಹಾಲ್ಕಲ್‌ ಮಾರ್ಗವಾಗಿ ಕೊಲ್ಲೂರಿಗೆ ಮೆರವಣಿಗೆಯಲ್ಲಿ ಒಯ್ಯಲಾಯಿತು.

ಉಡುಪಿಯ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌., ಕೋಟೇಶ್ವರ ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್‌ ಶೆಟ್ಟಿ, ಸಮಿತಿ ಸದಸ್ಯರಾದ ಸುರೇಶ ಬೆಟ್ಟಿನ್‌, ಚಂದ್ರಿಕಾಧನ್ಯ, ಮಂಜುನಾಥ ಆಚಾರ್ಯ, ಭಾರತಿ, ಶಾರದಾ, ಜೀರ್ಣೋ ದ್ಧಾರ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣದೇವ ಕಾರಂತ ಕೋಣಿ, ಕೋಟ ಶ್ರೀ ಅಮೃತೇಶ್ವರೀ ದೇಗು ಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್‌, ಕೊಲ್ಲೂರು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಉಪಕಾರ್ಯನಿರ್ವಹಣಾ ಧಿಕಾರಿ ಗೋವಿಂದ ನಾಯ್ಕ, ಸಮಿತಿ ಸದಸ್ಯರಾದ ಡಾ| ಅತುಲ್‌ ಕುಮಾರ್‌ ಶೆಟ್ಟಿ, ಜಯಾನಂದ ಹೋಬಳಿದಾರ, ಗಣೇಶ ಕಿಣಿ, ಗೋಪಾಲಕೃಷ್ಣ ನಾಡ, ಶೇಖರ ಪೂಜಾರಿ, ಸಂಧ್ಯಾರಮೇಶ, ರತ್ನಾ ಆರ್‌. ಕುಂದರ್‌, ಮಾಜಿ ಧರ್ಮ ದರ್ಶಿ ರಮೇಶ ಗಾಣಿಗ ಕೊಲ್ಲೂರು, ಎಂಜಿನಿಯರ್‌ ಪ್ರದೀಪ್‌, ದೇಗು ಲದ ಅರ್ಚಕರು, ತಂತ್ರಿ ಡಾ| ಕೆ. ರಾಮಚಂದ್ರ ಅಡಿಗ ಉಪಸ್ಥಿತರಿದ್ದರು.

ವಿವಿದೆಢೆ ಭವ್ಯ ಸ್ವಾಗತ
ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇಗುಲ, ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ, ಬಗ್ವಾಡಿ ಹೋಬಳಿ ಸ್ತ್ರೀ ಶಕ್ತಿ ಸಂಘಟನೆ, ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಕೋಟೇಶ್ವರದಿಂದ ಕೊಲ್ಲೂರು ವರೆಗಿನ ವಿವಿಧ ಧಾರ್ಮಿಕ ಕ್ಷೇತ್ರಗಳು, ಸ್ವಸಹಾಯ ಸಂಘಗಳ ಸದಸ್ಯರು, ಪ್ರಮುಖರು, ಕೊಲ್ಲೂರು ದೇಗುಲದ ಮಾಜಿ ಧರ್ಮದರ್ಶಿ
ವಂಡಬಳ್ಳಿ ಜಯ ರಾಮ ಶೆಟ್ಟಿ, ಗಿಳಿಯಾರು ಶ್ರೀಧರ ಶೆಟ್ಟಿ, ವಿ.ಕೆ. ಶಿವರಾಮ ಶೆಟ್ಟಿ ಮೊದಲಾದವರು ದಾರಿಯುದ್ದಕ್ಕೂ ಪುಷ್ಪಾ ರ್ಚನೆ ಮಾಡಿ ರಥವನ್ನು ಸ್ವಾಗತಿಸಿದರು.

Advertisement

ಇಂದು ಸಮರ್ಪಣೆ
ನೂತನ ಬ್ರಹ್ಮರಥವು ಫೆ. 16ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಮೂಕಾಂಬಿಕೆಗೆ ಸಮರ್ಪಣೆಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next