Advertisement
ಸಮರ್ಪಕ ವಾಹನ ನಿಲುಗಡೆ ಪ್ರದೇಶದ ಕೊರತೆ
Related Articles
Advertisement
ಸಬ್‌ಸ್ಟೇಷನ್ ಎಂದು ಕಾರ್ಯಾರಂಭಗೊಂಡೀತು?
ಹಾಲ್ಕಲ್ ಬಳಿ ಪೂರ್ಣ ಪ್ರಮಾಣದ ಸಬ್ ಸ್ಟೇಷನ್ ನಿರ್ಮಿಸಿ ವರುಷ ಹಲವು ಕಳೆದರೂ ಅದರ ಕಾರ್ಯಾರಂಭಕ್ಕೆ ಎದುರಾಗಿರುವ ಕೇಂದ್ರದ ಅರಣ್ಯ ನೀತಿ ತೊಡಕಾಗಿದ್ದು, ಅದನ್ನು ನಿಭಾಯಿಸುವ ಭರವಸೆ ಸಂಸದರು ನೀಡಿದ್ದರೂ ಸಹ ಎಂದೂ ಕಾರ್ಯಾರಂಭಗೊಂಡೀತು ಎಂಬ ಪ್ರಶ್ನೆ ಎದುರಾಗಿದೆ. ಕೊಲ್ಲೂರು, ಜಡ್ಕಲ್,ಮುದೂರು, ಯಳಜಿತ್ ಗೋಳಿಹೊಳೆ ಭಾಗದ ನಿವಾಸಿಗಳಿಗೆ ಲೋವೋಲ್ಟೇಜ್ ಸಮಸ್ಯೆಗೆ ಪರಿಹಾರ ಒದಗಿತು ಅನ್ನುವುದು ಎಲ್ಲೆಡೆ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.
ಬಹುಮಹಡಿಯ ಪಾರ್ಕಿಂಗ್ ವ್ಯವಸ್ಥೆ ಪ್ರಸ್ತಾವನೆ ಏನಾಯಿತು?
ಸುಮಾರು 48 ಕೋ.ರೂ. ವೆಚ್ಚದಲ್ಲಿ ಕೊಲ್ಲೂರಿನಲ್ಲಿ ಬಹುಮಹಡಿಯ ವಾಹನ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಮಂಡಿಸಲಾಗಿರುವ ಪ್ರಸ್ತಾವನೆಗೆ ಸರಕಾರ ಯಾವುದೇ ರೀತಿಯಲ್ಲಿ ಈವರೆಗೆ ಸ್ಪಂದಿಸದಿರುವುದು ಗ್ರಾಮಸ್ಥರ ಬಹುಕಾಲದ ಬೇಡಿಕೆ ನನೆಗುದಿಗೆ ಬಿದ್ದಂತಾಗಿದೆ.
2015 ರಲ್ಲಿ ನಮೂದನೆಯಾದ ಕೊಲ್ಲೂರು ಪಟ್ಟಣಕ್ಕೆ ಸಮಗ್ರ ನೀರು ಸರಬರಾಜು ಯೋಜನೆ ಸುದೀರ್ಘ 7 ವರ್ಷಗಳ ಅನಂತರ ಪೂರ್ಣಗೊಂಡಿದ್ದು, ಪರಿಷ್ಕೃತ ಅನುಮೋದಿತ ಯೋಜನೆಯ ವೆಚ್ಚ 33.40 ಕೋಟಿ ರೂ.ಆಗಿದೆ.2020 ಜನವರಿ 1ರಿಂದ ಯೋಜನೆಯ ಕಾರ್ಯನಿರ್ವಹಣೆ ಆರಂಭಗೊಂಡಿದ್ದು, ಯುಜಿಡಿ ಹಾಗೂ ಮೂಕಾಂಬಿಕಾ ದೇಗುಲವು ಗ್ರಾ. ಪಂ.ಸಹಕಾರ ದೊಡನೆ ನಿರ್ವಹಣೆ ಜವಾಬ್ದಾರಿ ವಹಿಸಿದೆ. ಸುಮಾರು 347 ಮನೆ ಸಹಿತ ವಿವಿಧ ಸಂಕೀರ್ಣಗಳಿಗೆ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆಯ ನಳ್ಳಿಗಳನ್ನು ಜೋಡಿಸಲಾಗಿದೆ. ಹಾಗೆಯೇ ಕಲುಷಿತ ನೀರಿನ ಹೊರಹರಿವಿಗೆ ವ್ಯವಸ್ಥೆಗೊಳಿಸಲಾಗಿದ್ದರೂ ಬಿಡಲಾಗುವ ನೀರು ಸೌಪರ್ಣಿಕಾ ನದಿ ತಟದಲ್ಲಿ ಪ್ರತ್ಯೇಕಿಸಲಾಗಿದ್ದರೂ ಲೋವೋಲ್ಟೆàಜ್ ಬಾಧೆ ಯಿಂದ ನೀರಿನ ಹೊರಹರಿವಿಗೆ ತಾಂತ್ರಿಕ ಕಾರಣ ಎದು ರಾಗುತ್ತಿರುವುದರಿಂದ ನೀರು ಕಲುಷಿತಗೊಳ್ಳಲು ಎಡೆಮಾಡಿದಂತಾಗುತ್ತಿದೆ, ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸದಿದ್ದಲ್ಲಿ ಯೋಜನೆಯ ಮೂಲ ಉದ್ದೇಶದ ಮೇಲೆ ಪರಿಣಾಮ ಬೀರಲಿದೆ.
ಅಧಿಕಾರಿಗಳ ಗಮನಕ್ಕೆ ತರಲಾಗಿದೆ
ಯಾತ್ರಾರ್ಥಿಗಳು ಹೆಚ್ಚುತ್ತಿರುವ ಈ ದಿಸೆಯಲ್ಲಿ ಪೊಲೀಸ್ ಇಲಾಖೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆಗೊಳಿಸಬೇಕಾಗಿದೆ.ಆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. -ಶಿವರಾಮ ಕೃಷ್ಣ ಭಟ್, ಅಧ್ಯಕ್ಷರು,ಗ್ರಾ.ಪಂ. ಕೊಲ್ಲೂರು
ಭಕ್ತರಿಗೆ ಎಲ್ಲ ರೀತಿಯ ಸೌಕರ್ಯ
ಕೊಲ್ಲೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕ ವ್ಯವಸ್ಥೆ ಕಲ್ಪಿಸುವಲ್ಲಿ ಕೈಗೊಂಡ ನಿರ್ಣಯ ಹಂತ-ಹಂತವಾಗಿ ಅನುಷ್ಠಾನಗೊಂಡಿದ್ದು, ಇಲ್ಲಿ ಯಾವುದೇ ಲೋಪವಾಗದಂತೆ ನಿಗಾ ವಹಿಸಲಾಗಿದೆ. ಭಕ್ತರಿಗೆ ಎಲ್ಲ ರೀತಿಯ ಸೌಕರ್ಯ ಒದಗಿಸುವಲ್ಲಿ ದೇಗುಲ ಬದ್ಧವಾಗಿದೆ. –ಮಹೇಶ, ಕಾರ್ಯನಿರ್ವಹಣಾಧಿಕಾರಿಗಳು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲ.
– ಡಾ| ಸುಧಾಕರ ನಂಬಿಯಾರ್