ಕೊಳ್ಳೇಗಾಲ: ನಗರಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್‌ನ 3ನೇ ವಾರ್ಡಿನ ಸಿ.ಎನ್.ರೇಖಾ ರಮೇಶ್ ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿ ಕಾರಿ ಹಾಗೂ ಉಪ ವಿಭಾಗಾಧಿಕಾರಿ ಗೀತಾ ಹುಡೇದ ಘೋಷಣೆ ಮಾಡಿದರು.
ಬೆಳಗ್ಗೆ ಕಾಂಗ್ರೆಸ್‌ನಿಂದ ಸಿ.ಎನ್.ರೇಖಾ ರಮೇಶ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ, ಬಿಜೆಪಿಯಿಂದ ಸಿರೀಶ ಸತೀಶ್ ಮತ್ತು ರಮ್ಯ ನಾಮಪತ್ರ ಸಲ್ಲಿಸಿದ ಬಳಿಕ ರಮ್ಯ ನಾಮಪತ್ರವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಕಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಉಳಿದಿದ್ದು ಮತದಾನ ಘೋಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಸಿ.ಎನ್.ರೇಖಾ ರಮೇಶ್‌ಗೆ 14 ಮತ ಪಡೆದು ಅಧ್ಯಕ್ಷರ ಆಯ್ಕೆಯಾದರೆ, ಬಿಜೆಪಿ ಅಭ್ಯರ್ಥಿ ಸಿರೀಶ ಸತೀಶ್ ಕೇವಲ 6 ಮತಗಳನ್ನು ಪಡೆದು ಪರಾಭವಗೊಂಡರೆ ಓರ್ವ ಸದಸ್ಯರು ತಟಸ್ಥವಾಗಿ ದ್ದರು ಎಂದು ಹೇಳಿದರು. ನಗರಸಭೆಯ 31 ಸದಸ್ಯರ ಪೈಕಿ 7 ಬಿಎಸ್ಪಿ ಸದಸ್ಯರು ಅನರ್ಹಗೊಂಡಿದ್ದಾರೆ.
24 ಸದಸ್ಯರ ಸಂಖ್ಯಾಬಲದಲ್ಲಿ ಅಧ್ಯಕ್ಷರ ಚುನಾವಣೆಯಲ್ಲಿ ಕೇವಲ 21 ಸದಸ್ಯರು ಭಾಗವಹಿಸಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಶಾಸಕ ಎನ್.ಮಹೇಶ್ ಎರಡು ಮತ ಸೇರಿದಂತೆ ಒಟ್ಟು ಐವರು ಗೈರು ಹಾಜರಾಗಿದ್ದರು.
ಸಹಕಾರ ನೀಡಿದವರಿಗೆ ಕೃತಜ್ಞತೆ: ನೂತನ ಅಧ್ಯಕ್ಷೆ ಸಿ.ಎ ನ್.ರೇಖಾ ರಮೇಶ್ ಮಾತನಾಡಿ, ಎಲ್ಲಾ ಸದಸ್ಯರ ಸಹಕಾರದೊಂದಿಗೆ ಉತ್ತಮ ರೀತಿಯ ಆಡಳಿತ ನಡೆಸಿ ನಗರಸ ಭೆಯ ಎಲ್ಲಾ ವಾರ್ಡುಗಳ ಅಭಿವೃದ್ಧಿಗೆ ಶ್ರಮಿಸುವೆ. ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಲು ಸಹಕರಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಅಸಮಾಧಾನ: ಅಧ್ಯಕ್ಷರ ಆಯ್ಕೆಯ ಬಳಿಕ ಕಾಂಗ್ರೆಸ್‌ನ ಸದಸ್ಯೆ ಸುಮಾಸುಬ್ಬಣ್ಣ ಮಾತನಾಡಿ, ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಇದ್ದು, ಲಿಂಗಾಯತ ಸಮಾಜಕ್ಕೆ ಸೇರಿದ ವರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದ ಮಾಜಿ ಶಾಸಕ ಎಸ್.ಜಯಣ್ಣ ಸಮಾಜಕ್ಕೆ ದ್ರೋಹ ಎಸಗಿ ದ್ದಾರೆಂದು ಅಸಮಾಧಾನದ ಆಕ್ರೋಶ ವ್ಯಕ್ತಪಡಿಸಿದರು.
ಸಂಭ್ರಮ: ನೂತನ ಅಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ನಗರಸಭೆ ಮುಂಭಾಗ ಜಮಾಯಿಸಿ ಅಧ್ಯಕ್ಷರ ಘೋಷಣೆಯಾಗುತ್ತಿದ್ದಂತೆ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.