Advertisement

ಹತ ಸಿಆರ್‌ಪಿಎಫ್ ಯೋಧರ ಮಕ್ಕಳ ಶಿಕ್ಷಣ ಖರ್ಚನ್ನು ಭರಿಸುವ ಗಂಭೀರ್‌

11:49 AM Apr 28, 2017 | udayavani editorial |

ಹೊಸದಿಲ್ಲಿ : ಕಳೆದ ಸೋಮವಾರ ಛತ್ತೀಸ್‌ಗಢದ ದಕ್ಷಿಣ ಸುಕ್‌ಮಾ ಪ್ರದೇಶದಲ್ಲಿ ಮಾವೋ ಉಗ್ರರ ಹೊಂಚು ದಾಳಿಗೆ ಬಲಿಯಾಗಿದ್ದ 25 ಮಂದಿ ಸಿಆರ್‌ಪಿಎಫ್ ಯೋಧರ ಮಕ್ಕಳ ಶಿಕ್ಷಣದ ಖರ್ಚನ್ನು ತಾನು ಭರಿಸುವ ಉದಾತ್ತ ಹಾಗೂ ಮಹೋನ್ನತ ನಿರ್ಧಾರವನ್ನು ಕೋಲ್ಕತ ನೈಟ್‌ ರೈಡರ್‌ಸ್‌ ನಾಯಕ ಗೌತಮ್‌ ಗಂಭೀರ್‌ ತೆಗೆದುಕೊಂಡಿದ್ದಾರೆ. 

Advertisement

ಆಗೀಗ ಎಂಬಂತೆ ದೇಶದ ಗಡಿ ರಕ್ಷಕ ಯೋಧರನ್ನು ಹುರಿದುಂಬಿಸುವ ತನ್ನ ಅಭಿಪ್ರಾಯಗಳನ್ನು ಸಾಮಾಜಿಕ ಜಾಲ ತಾಣದ ಮೂಲಕ ವ್ಯಕ್ತಪಡಿಸುತ್ತಲೇ ಇರುವ ಗೌತಮ್‌ ಗಂಭೀರ್‌, ಸುಕ್‌ಮಾದಲ್ಲಿ ಮಾವೋ ಉಗ್ರರು 25 ಮಂದಿ ಸಿಆರ್‌ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ದಾರುಣ ಘಟನೆಯಿಂದ ತೀವ್ರವಗಿ ದುಃಖೀತರಾಗಿದ್ದಾರೆ. ಸುಕ್‌ಮಾ ದಾಳಿಯಲ್ಲಿ ಹತರಾದ ಸಿಆರ್‌ಪಿಎಫ್ ಯೋಧರ ಬಗ್ಗೆ ತೀವ್ರ ಅನುಕಂಪ ವ್ಯಕ್ತಪಡಿಸಿ ಗಂಭೀರ್‌ ಅವರು ಹಿಂದುಸ್ಥಾನ್‌ ಟೈಮ್ಸ್‌ನಲ್ಲಿ ಲೇಖನವೊಂದನ್ನೇ ಬರೆದಿದ್ದಾರೆ. 

ಮಾವೋ ಉಗ್ರರಿಂದ ಹತರಾಗಿರುವ 25 ಸಿಆರ್‌ಪಿಎಫ್ ಯೋಧರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತನ್ನ ಪ್ರತಿಷ್ಠಾನವು ನಿಭಾಯಿಸಲಿದೆ ಎಂದು ಗಂಭೀರ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next