Advertisement

ವರ್ಕ್ ಫ್ರಮ್ ಹೋಮ್ ಎಫೆಕ್ಟ್… : ಅತ್ತ ಮದುವೆ ನಡೆಯುತ್ತಿದ್ದರೆ ಇತ್ತ ಲ್ಯಾಪ್ ಟಾಪ್ ನಲ್ಲೇ ಬ್ಯುಸಿಯಾದ ವರ

03:08 PM Nov 29, 2022 | Team Udayavani |

ಕೋಲ್ಕತ್ತಾ : ವರ್ಕ್ ಫ್ರಮ್ ಹೋಮ್… ಈ ಹೆಸರು ಹೆಚ್ಚಿನ ಜನರಿಗೆ ಗೊತ್ತಾಗಿದ್ದೇ 2020ರಲ್ಲಿ ಬಂದ ಮಾರಕ ಕೋವಿಡ್ ಸೋಂಕಿನಿಂದಾಗಿ, ಇದರ ಪರಿಣಾಮ ಹೆಚ್ಚಿನ ಎಲ್ಲಾ ಕಂಪೆನಿಗಳು ತಮ್ಮ ಕಚೇರಿ ಕೆಲಸಗಳನ್ನು ಮನೆಯಲ್ಲೇ ಕುಳಿತು ಮಾಡುವಂತೆ ಮಾಡಿದ್ದು, ಅದಕ್ಕೂ ಮೊದಲು ಜನರಿಗೆ ವರ್ಕ್ ಫ್ರಮ್ ಹೋಮ್ ಎಂಬ ವ್ಯವಸ್ಥೆ ಇದೆ ಅಂತಲೂ ಗೊತ್ತಿರಲಿಕ್ಕಿರಲಿಲ್ಲ…

Advertisement

2020ರಿಂದ ಹೆಚ್ಚಿನ ಕಂಪೆನಿಗಳು ಕಚೇರಿ ಕೆಲಸಗಳು ಇಂದಿಗೂ ಮನೆಯಲ್ಲೇ ಕುಳಿತು ಮಾಡಿಸುತ್ತಾ ಬಂದಿವೆ, ಕೆಲವೊಂದು ಕಂಪೆನಿಗಳು ಮಾತ್ರ ಕಚೇರಿಗೆ ತೆರಳಿ ಕೆಲಸ ಮಾಡುವ ಅವಕಾಶ ಕೊಟ್ಟರೆ ಇನ್ನು ಕೆಲವೊಂದು ಮನೆಯಲ್ಲೇ ಕೆಲಸ ಮಾಡುವ ಹಂತದಲ್ಲೇ ಮುಂದುವರೆದಿದೆ. ಹಾಗಾಗಿ ಜನರೂ ಕೂಡ ತಮ್ಮ ಕೆಲಸಗಳನ್ನು ಮನೆಯಲ್ಲೇ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ..

ಈ ವರ್ಕ್ ಫ್ರಮ್ ಹೋಮ್ ಎಷ್ಟು ಜನರ ಮೇಲೆ ಪ್ರಭಾವ ಬೀರಿದೆ ಎಂದರೆ ಕೆಲವೊಂದು ಕಂಪೆನಿಗಳು ರಜೆಯನ್ನೂ ನೀವುದುದಿಲ್ಲವಂತೆ. ಹಾಗಾಗಿ ಕೆಲವು ವ್ಯಕ್ತಿಗಳು ತಾವು ಹೋಗುವ ಕಡೆ ಲ್ಯಾಪ್ ಟಾಪ್ ಅನ್ನು ಕೊಂಡೊಯ್ಯುತ್ತಾರೆ ಅಲ್ಲೇ ತಮ್ಮ ಕೆಲಸಗಳನ್ನು ನಿರ್ವಹಿಸುತ್ತಾರೆ, ಅದರಂತೆ ಇಲ್ಲೊಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ ಅದರಲ್ಲಿ ಮದುಮಗ ತನ್ನ ಮದುವೆಯ ದಿನ ಮದುವೆ ಶಾಸ್ತ್ರ ನಡೆಯುತ್ತಿದ್ದರೆ ಇತ್ತ ವರ ಕೈಯಲ್ಲಿ ಲ್ಯಾಪ್ ಟಾಪ್ ಹಿಡಿದುಕೊಂಡು ಕೆಲಸದಲ್ಲೇ ಮಗ್ನನಾಗಿದ್ದಾನೆ..

ಈ ಘಟನೆ ನಡೆದಿರುವುದು ಕೋಲ್ಕತ್ತಾದ ಒಂದು ಪ್ರದೇಶದಲ್ಲಿ ಎಂಬುದು ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ ಫೋಟೋದಲ್ಲಿ ಕಾಣಬಹುದು ಇಲ್ಲಿ ಇಬ್ಬರು ಪುರೋಹಿತರು ವರನ ಮದುವೆ ಶಾಸ್ತ್ರಗಳನ್ನು ಮಾಡುತ್ತಿದ್ದರೆ ವರ ಮಾತ್ರ ಲ್ಯಾಪ್ ಟಾಪ್ ಹಿಡಿದು ತನ್ನ ಕೆಲಸದಲ್ಲೇ ಮಗ್ನನಾಗಿದ್ದಾನೆ.

ಅಂದಹಾಗೆ ಈ ಫೋಟೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದಷ್ಟು ಮಂದಿ ಹಾಸ್ಯಭರಿತವಾಗಿ ಪ್ರತಿಕ್ರಿಯೆ ನೀಡಿದರೆ ಇನ್ನೂ ಕೆಲವರು ಇದೊಂದು ಆಘಾತಕಾರಿ ಬೆಳವಣಿಗೆ ಎಂದು ಹೇಳಿಕೊಂಡಿದ್ದಾರೆ.

Advertisement

ಒಬ್ಬ ವ್ಯಕ್ತಿ ಹೀಗೆ ಬರೆದುಕೊಂಡಿದ್ದಾನೆ, “ನನಗೆ ಇದು ತಮಾಷೆಯಾಗಿ ಕಾಣುತ್ತಿಲ್ಲ. ಜೊತೆಗೆ ಯಾವುದೇ ಸಂಸ್ಥೆಯು ತನ್ನ ಉದ್ಯೋಗಿಯನ್ನು ಅವನ ಮದುವೆಯ ದಿನವೂ ಕೆಲಸ ಮಾಡಿಸುವ ಹಂತಕ್ಕೆ ಹೋಗುವುದಿಲ್ಲ ಎಂದು ಬರೆದುಕೊಂಡಿದ್ದಾನೆ. ಒಟ್ಟಾರೆಯಾಗಿ ಫೋಟೋ ಅಂತೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಸತ್ಯ.

ಇದನ್ನೂ ಓದಿ: ಕೈಗೆ ಕಚ್ಚಿ, ವ್ಯಾನ್ ನಿಂದ ಜಿಗಿದು ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡ 11ರ ಬಾಲಕ

Advertisement

Udayavani is now on Telegram. Click here to join our channel and stay updated with the latest news.

Next