ಕೋಲಾರ: ಮೇಕೆದಾಟು ಕ್ರಿಯಾ ಯೋಜನೆಯಲ್ಲಿಕೋಲಾರ – ಚಿಕ್ಕಬಳ್ಳಾಪುರ ಸೇರಿಸಿಕೊಂಡು 6 ಜಿಲ್ಲೆಗಳಿಗೂಕುಡಿಯುವ ನೀರನ್ನು ಒದಗಿಸ ಬೇಕೆಂದು ಆಗ್ರಹಿಸಿ ಸೆ.23 ರಂದು ಮೇಕೆದಾಟು ವಿನಿಂದ ವಿಧಾನಸೌಧಕ್ಕೆ ಪಾದಯಾತ್ರೆ ಹಮ್ಮಿಕೊಂಡಿ ರುವುದಾಗಿ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಹೊಳಲಿ ಪ್ರಕಾಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವುಮೇಕೆದಾಟು ಕುಡಿಯುವ ನೀರಿನ ಯೋಜನೆಯ ಕ್ರಿಯಾಯೋಜನೆಯಲ್ಲಿ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಸೇರಿಸಿಕೊಂಡು ನೀರನ್ನು ಒದಗಿಸಬೇಕೆಂದು ಆಗ್ರಹಿಸಿಸೆ.23ರಿಂದ 28ರವರೆಗೆ ಪಾದಯಾತ್ರೆ ನಡೆಸುತ್ತಿರುವುದಾಗಿತಿಳಿಸಿದರು.
ಯರಗೋಳ್‌ಗೆ ವ್ಯಾಲಿ ನೀರು ಬೇಡ: ಇನ್ನು ಜಿಲ್ಲೆಯ ಕೋಲಾರ, ಮಾಲೂರು, ಬಂಗಾರಪೇಟೆಗೆ ಕೇವಲಕುಡಿಯುವ ನೀರಿಗಾಗಿಯೇ ನಿರ್ಮಿಸಿರುವ ಯರಗೋಳ್‌ಗೆ ಯಾವುದೇ ಕಾರಣಕ್ಕೂ ಕೆ.ಸಿ.ವ್ಯಾಲಿ ಯೋಜನೆ ನೀರುಬೆರೆಸದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಚಾಲಕ ರಾಮು ಶಿವಣ್ಣ ಮಾತನಾಡಿ, ಸೆ.23 ರಿಂದ28ರವರೆಗೆ ಮೇಕೆದಾಟುವಿನಿಂದ ವಿಧಾನಸೌಧದವರೆಗೆಪಾದಯಾತ್ರೆ ಹಮ್ಮಿಕೊಂಡು 6 ಜಿಲ್ಲೆಗಳಿಗೆ ಕುಡಿ ಯುವನೀರನ್ನು ಹರಿಸುವಂತೆ ಆಗ್ರಹಿಸಲಾಗುವುದು ಎಂದು ವಿವರಿಸಿದರು.ಕೆ.ಸಿ.ವ್ಯಾಲಿ ನೀರನ್ನು ಈ ಮೊದಲು ಹೇಳಿರುವಂತೆಯೇ ಶುದ್ಧೀಕರಣ ಮಾಡಬೇಕು. ಈ ಹಿಂದೆ ನೀರಾವರಿಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನುಹಿಂಪಡೆಯುವಂತೆ ಹೇಳಿದ್ದ ಸರ್ಕಾರ ಈವರೆಗೂ ಕ್ರಮಕೈಗೊಳ್ಳದೇ ಇದ್ದು, ಕೂಡಲೇ ವಾಪಸ್‌ಪಡೆಯಬೇಕೆಂದು ಆಗ್ರಹಿಸಿದರು.
ಕೋರ್ಟ್ ಮೆಟ್ಟಿಲು ಹತ್ತಬೇಕಾಗುತ್ತೆ: ಸಂಚಾಲಕಕುರುಬರಪೇಟೆ ವೆಂಕಟೇಶ್ ಮಾತನಾಡಿ, ಕೋಲಾರನಗರದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವರಸ್ತೆಗಳನ್ನು ಸರಿಪಡಿಸಬೇಕು. ಕೋಟ್ಯಂತರ ರೂ. ಖರ್ಚುಮಾಡಿ ನಿರ್ಮಿಸಿರುವ ಪಾದಚಾರಿ ರಸ್ತೆ ಮೇಲಿರುವಅಂಗಡಿಗಳನ್ನು ತೆರವುಗೊಳಿಸಿ ಇಂದಿರಾ ಕ್ಯಾಂಟೀನ್‌ಪಕ್ಕದಲ್ಲಿರುವ ನಗರಸಭೆ ಖಾಲಿ ಜಾಗವನ್ನುಅಂಗಡಿಗಳವರಿಗೆ ಬಿಟ್ಟುಕೊಡಬೇಕಿದ್ದು, ಶೀಘ್ರಕ್ರಮಕೈಗೊಳ್ಳದಿದ್ದಲ್ಲಿ ಕೋರ್ಟ್ ಮೆಟ್ಟಿಲು ಹತ್ತಬೇಕಾಗುತ್ತದೆಎಂದು ಎಚ್ಚರಿಕೆ ನೀಡಿದರು. ಸಮಿತಿ ಸಂಚಾಲಕರಾದಜಿ.ನಾರಾಯಣಸ್ವಾಮಿ, ಚಿನ್ನಿ ಶ್ರೀನಿವಾಸ್, ಸುಧೀರ್,ಸುರೇಶ್, ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.